
ಸಿಂಹಾಸನ- ನೀವು ಚಾಪೆಯ ಮೇಲೆ ಆರಾಮವಾಗಿ ಕುಳಿತುಕೊಳ್ಳಿ. ನಿಮ್ಮ ಕಣ್ಣುಗಳನ್ನು ನಿಧಾನವಾಗಿ ಮುಚ್ಚಿ. ನಿಮ್ಮ ಮುಖದಲ್ಲಿನ ಸ್ನಾಯುಗಳನ್ನು ಬಿಗಿಗೊಳಿಸಿ. ನಿಮ್ಮ ಕೈಗಳ ಮುಷ್ಟಿಯನ್ನು ಬಿಗಿಗೊಳಿಸಿ, ಬಾಯಿಯಿಂದ ಉಸಿರಾಡಿ. ಸಾಧ್ಯವಾದಷ್ಟು ಕಣ್ಣುಗಳನ್ನು ತೆರೆಯಿರಿ. ಬಾಯಿಯನ್ನು ಆದಷ್ಟು ಅಗಲವಾಗಿಸಿ. ನಿಮ್ಮ ನಾಲಿಗೆಯನ್ನು ಹೊರಚಾಚಿ. ಈ ಭಂಗಿಯಲ್ಲಿ 5 ಸೆಕೆಂಡುಗಳ ಕಾಲ ಹಾಗೆಯೇ ಇರಿ. ಬಳಿಕ ನಿಮ್ಮ ದೇಹವನ್ನು ಸಡಿಲ ಬಿಟ್ಟು ವಿಶ್ರಾಂತಿ ಪಡೆಯಬಹುದು.

ವೀರಭದ್ರಾಸನ- ನಿಮ್ಮ ಎಡಗಾಲನ್ನು ಹಿಂದಕ್ಕೆ ಹಾಕಿ. ಮುಂದಿರುವ ಬಲಗಾಲನ್ನು ಬಾಗಿಸಿ. ನಿಮ್ಮ ಸೊಂಟವನ್ನು ಬಲಭಾಗದ ಕಡೆಗೆ ತಿರಿಗಿಸಿ ಕೈಗಳು ನೇರವಾಗಿರಲಿ. ಈ ಆಸನವನ್ನು ಪ್ರತಿನಿತ್ಯ ಬೆಳಿಗ್ಗೆ ಮಾಡುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ.

ನೀವು ನೇರವಾಗಿ ನಿಂತುಕೊಳ್ಳಿ. ಮುಂದಕ್ಕೆ ಬಾಗಿ ಎರಡೂ ಕೈಗಳನ್ನು ನೆಲಕ್ಕೆ ಇರಿಸಿ. ನಿಮ್ಮ ಕೈಗಳ ಹಸ್ತ ಮತ್ತು ಕಾಲುಗಳ ಮಾತ್ರ ನೆಲಕ್ಕೆ ತಾಗಿರಲಿ. ಸೊಂಟದ ಭಾಗವನ್ನು ಆದಷ್ಟು ಮೇಲಕ್ಕೆತ್ತಿ.

ಊರ್ಧ್ವ ಧನುರಾಸನ- ನೇರವಾಗಿ ನಿಂತುಕೊಳ್ಳಿ. ನೀವು ಹಿಂಭಾಗದಿಂದ ಪೂರ್ತಿಯಾಗಿ ನೆಲಕ್ಕೆ ಬಾಗಿ. ಬಳಿಕ ಎರಡೂ ಹಸ್ತಗಳನ್ನು ನೆಲದ ಮೇಲಿಡಿ. ಹೊಟ್ಟೆಯ ಭಾಗವನ್ನು ಆದಷ್ಟು ಮೇಲಕ್ಕೆತ್ತಿ. ಈ ಆಸನದಲ್ಲಿ ಸ್ವಲ್ಪ ಸಯಮ ಹಾಗೆಯೇ ಇರಿ. ಪ್ರತಿನಿತ್ಯ ಊರ್ಧ್ವ ಧನುರಾಸನ ಮಾಡುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ.

ವಜ್ರಾಸನ - ನೆಲದ ಮೇಲೆ ಮಂಡಿಯೂರಿ ಕುಳಿತುಕೊಳ್ಳಿ. ನಿಮ್ಮ ಸೊಂಟ, ಬೆನ್ನು, ಭುಜ ನೇರವಾಗಿರಲಿ. ಕುತ್ತಿ ಭಾಗವನ್ನು ನೇರವಾಗಿರಿಸಿ. ದೃಷ್ಟಿಯೂ ಸಹ ನೇರವಾಗಿರಲಿ. ಎರಡೂ ಕೈಗಳನ್ನು ನಿಮ್ಮ ತೊಡೆಯ ಮೇಲೆ ಚಾಚಿ ಕುಳಿತುಕೊಳ್ಳಿ. ನಿಧಾನವಾಗಿ ಉಸಿರಾಡಿ ಜೊತೆಗೆ ನಿಮ್ಮ ಉಸಿರಾಟವನ್ನು ಗಮನಿಸಿ. ಆದಷ್ಟು ಸಮಯದವರೆಗೆ ಈ ಆಸನದಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸಿ.
Published On - 2:51 pm, Fri, 26 November 21