Chikkaballapur: ಪಾಳು ಬಿದ್ದ ಕಟ್ಟಡದಲ್ಲಿ ಖೋಟಾನೋಟು ಪ್ರಿಂಟ್ ಮಾಡ್ತಿದ್ದ ಖದೀಮರು ಖಾಕಿ ಬಲೆಗೆ, ಇಲ್ಲಿವೆ ನೋಡಿ ನಕಲಿ ನೋಟಗಳು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 21, 2023 | 7:22 AM

2000 ರೂಪಾಯಿ ನೋಟು ನೋಡೋಣ ಅಂದ್ರೂ ಎಲ್ಲೂ ಕಾಣುತ್ತಿಲ್ಲ. ತೀರಾ ಅಪರೂಪ ಆಗೋಗಿದೆ. ಆದರೆ ಅದೊಂದು ಜಾಗದಲ್ಲಿ ಮಾತ್ರ ಒಂದಲ್ಲ ಎರಡಲ್ಲ ಕೋಟ್ಯಾಂತರ ರೂಪಾಯಿ ಮೌಲ್ಯದ 2000 ರೂಪಾಯಿ ಮುಖಬೆಲೆಯ ಗರಿ ಗರಿ ನೋಟುಗಳನ್ನ ನೋಡಿ ಪೊಲೀಸರೇ ದಂಗಾಗಿದ್ರು.

1 / 6
ಚಿಕ್ಕಬಳ್ಳಾಫುರ ಜಿಲ್ಲೆಯ ಚಿಂತಾಮಣಿಯ ಪೊಲೀಸರು, ಖೋಟಾನೋಟು ಮುದ್ರಣದ ಅಡ್ಡೆ ಮೇಲೆ ದಾಳಿ ಮಾಡಿ ಬರೋಬ್ಬರಿ 1 ಕೋಟಿ 29 ಲಕ್ಷ ಮೌಲ್ಯದ 2000 ಮುಖಬೆಲೆಯ ಖೋಟಾನೋಟುಗಳನ್ನ ವಶಕ್ಕೆ ಪಡೆದಿದ್ದಾರೆ.

2 / 6
ಅಬ್ಬಬ್ಬಾ ಕಂತೆ ಕಂತೆ ನೋಟು ಬಾಕ್ಸ್ ತುಂಬ ತುಂಬಿವೆ. ರೂಮ್​​​ನಲ್ಲಿ ಚೆಲ್ಲಾಡಿವೆ. ರಾಶಿಗಟ್ಟಲೇ ಇರುವ ಈ ಕನಕಾಂಬರದ ಬಣ್ಣ ನೋಡ್ತಿದ್ರೆ ಕಣ್ಣರಳುತ್ತೆ. ಆದರೆ ನೀವಂದುಕೊಂಡಂತೆ ಇವೆಲ್ಲ ಅಸಲಿಯಲ್ಲ. ಅಸಲಿ ತಲೆ ಮೇಲೆ ಹೊಡೆದಂತಿರುವ ನಕಲಿ ನೋಟುಗಳು.

3 / 6
ಖೋಟಾ ನೋಟು ಪ್ರಿಂಟ್ ಆಗುತ್ತಿರುವ ಪಕ್ಕಾ ಮಾಹಿತಿ ಪಡೆದಿದ್ದ ಪೊಲೀಸರು, ಉಲವಾಡಿ ಬಳಿಯ ಬಾರ್ನ್ ಫೌಂಡೇಶನ್ ಹೆಸರಿನ ಪಾಳು ಬಿದ್ದ ಕಟ್ಟಡಕ್ಕೆ ನುಗ್ಗಿದ್ದಾರೆ.  ವೇಳೆ 2000 ಮುಖಬೆಲೆಯ ನಕಲಿ ನೋಟುಗಳು, ನೋಟು ತಯಾರಿಕೆಗೆ ಬಳಸುತ್ತಿದ್ದ ಜೆರಾಕ್ಸ್ ಮಿಷನ್, ಪ್ರಿಂಟರ್, ಲ್ಯಾಮಿನೇಟರ್, 1 ಲ್ಯಾಪ್ ಟಾಪ್ ಹಾಗೂ 3 ಮೊಬೈಲ್ ಸೀಝ್ ಮಾಡಿದ್ದಾರೆ.

4 / 6
ದಾಳಿ ವೇಳೆ ಬೆಂಗಳೂರು ಮೂಲದ ದಾವೂದ್ ವಾಸಿಂ, ಶೇಖ್ ಹಿದಾಯತ್ ಹಾಗೂ ಕಟ್ಟಡದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶಿವ ಎಂಬಾತನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರು 3 ಕೋಟಿ ಮೌಲ್ಯದ 2000 ರ ಮುಖಬೆಲೆಯ ನೋಟುಗಳನ್ನ ವ್ಯಕ್ತಿಯೊಬ್ಬರಿಗೆ ಪ್ರಿಂಟ್ ಮಾಡಿಕೊಡುವುದಾಗಿ ಡೀಲ್ ಪಡೆದಿದ್ದರಂತೆ.

5 / 6
ಹೀಗಾಗಿ ಪಾಳು ಕಟ್ಟಡವನ್ನ ಬಾಡಿಗೆಗೆ ಪಡೆದು ಅಲ್ಲಿ ತಮ್ಮ ಕೆಲಸ ಮಾಡುತ್ತಿದ್ದರು ಸದ್ಯ ಮೂವರು ಲಾಕ್ ಆಗಿದ್ದು, ಕೃತ್ಯದಲ್ಲಿ ಶಾಮೀಲಾಗಿರುವ ಶಂಕರಪ್ಪ, ರಾಜಣ್ಣ, ಇಂತಿಯಾಜ್, ಅಬ್ದುಲ್ಲಾ ಅನ್ನೋರಿಗಾಗಿ ಶೋಧ ನಡೀತಿದೆ.

6 / 6
ಒಟ್ಟಿನಲ್ಲಿ ಈ ಕ್ರಿಮಿಗಳ ಹಿಂದೆ ದೊಡ್ಡ ಜಾಲವೇ ಇರುವ ಸಂಶಯವಿದೆ. ಕೋಟಿ ಕೋಟಿ ಲೆಕ್ಕದಲ್ಲಿ ನಕಲಿ ನೋಟು ಪ್ರಿಂಟ್ ಮಾಡ್ತಿದ್ದವರ ಬುಡ ಜಾಲಾಡಲು ಪೊಲೀಸರು ಮುಂದಾಗಿದ್ದಾರೆ.