
ಆಪ್ಟಿಕಲ್ ಇಲ್ಯೂಶನ್ ಚಿತ್ರಗಳು ಜನರ ಕಣ್ಣುಗಳಿಗೆ ಒಂದು ರೀತಿಯ ಭ್ರಮೆಯನ್ನುಂಟು ಮಾಡುತ್ತವೆ. ಗಮನವಿಟ್ಟು ನೋಡಿದಾಗ ಚಿತ್ರದಲ್ಲಿ ಅಡಗಿರುವ ಮತ್ತಷ್ಟು ಚಿತ್ರಗಳು ಗೋಚರವಾಗುತ್ತವೆ. ಇಂತಹ ಚಿತ್ರಗಳಿಂದ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಕೂಡ ಸಾಧ್ಯವಿದೆ. ಈ ಚಿತ್ರದಲ್ಲಿ ನೀವು ಮೊದಲು ಏನನ್ನು ಗುರುತಿಸುತ್ತೀರಿ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವವನ್ನು ಹೇಳಬಹುದು ಎಂದು ‘ಮೈಂಡ್ ಜರ್ನಲ್ಸ್’ ತನ್ನ ಬರಹದಲ್ಲಿ ಹೇಳಿದೆ. ಈ ಚಿತ್ರವನ್ನೊಮ್ಮೆ ಗಮನವಿಟ್ಟು ನೋಡಿ. ನೀವು ಮೊದಲು ಯಾವ ಪ್ರಾಣಿಯನ್ನು ಗುರುತಿಸುತ್ತೀರಿ?

ಸಿಂಹ: ಕಾಡಿನ ರಾಜವಾಗಿರುವ ಸಿಂಹವು ಧೈರ್ಯ ಹಾಗೂ ಶಕ್ತಿಯ ಸಂಕೇತ. ಅದನ್ನು ಮೊದಲು ಗುರುತಿಸುವವರು ತಮ್ಮ ವ್ಯಕ್ತಿತ್ವದಲ್ಲೂ ಆತ್ಮವಿಶ್ವಾಸ, ಧೈರ್ಯ ಹಾಗೂ ಸಾಹಸದ ಮನೋಭಾವ ಹೊಂದಿರುತ್ತಾರೆ ಎನ್ನುತ್ತದೆ ‘ಮೈಂಡ್ ಜರ್ನಲ್ಸ್’ ವರದಿ.

ಆನೆ: ಸ್ವಭಾವತಃ ಶಾಂತ ಪ್ರಾಣಿಯಾಗಿರುವ ಆನೆಯನ್ನು ಮೊದಲು ಗುರುತಿಸುವವರು ಜಾಗರೂಕರಾಗಿರುತ್ತಾರೆ. ತಮ್ಮ ಸುತ್ತಮುತ್ತ ನಡೆಯುವ ಸಂಗತಿಗಳ ಬಗ್ಗೆ ಅವರಿಗೆ ಅರಿವಿರುತ್ತದೆ. ಬೇರಯವರು ಹೇಳುವ ಮಾತುಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಗುರಿಗಳನ್ನು ತಲುಪಲು ತಮ್ಮದೇ ಮಾರ್ಗ ಹೊಂದಿರುತ್ತಾರೆ ಎನ್ನುತ್ತದೆ ವರದಿ.

ಜಿರಾಫೆ: ಜಿರಾಫೆಯನ್ನು ಮೊದಲು ಗಮನಿಸುವವರು ವಿನಮ್ರರು, ನಿರುಪದ್ರವಿಗಳು ಹಾಗೂ ಉನ್ನತ ಚಿಂತನೆ ಹೊಂದಿರುವವರಾಗಿರುತ್ತಾರೆ.

ಒಂಟೆ: ಒಂಟೆಯನ್ನು ಮೊದಲು ಗಮನಿಸುವವರು ಬೇರೆಯವರ ಮಾತಿನಲ್ಲು ಹೆಚ್ಚಾಗಿ ನಂಬಿಕೆ ಇಡುವಂತವರು. ಅಂಥವರು ದುಃಖದಿಂದ ತಮ್ಮಲ್ಲಿರುವ ಉತ್ಸಾಹ ಬತ್ತದಂತೆ ಕಾಪಾಡಿಕೊಳ್ಳಬೇಕು ತಡೆಯಬೇಕು ಎನ್ನುತ್ತದೆ ‘ಮೈಂಡ್ ಜರ್ನಲ್ಸ್’.

ಕುದುರೆ: ಕುದುರೆಯನ್ನು ಮೊದಲು ನೋಡುವ ವ್ಯಕ್ತಿತ್ವ ಸ್ವತಂತ್ರ ಮನೋಭಾವ ಹೊಂದಿರುತ್ತಾರೆ. ಅವರು ಬೇರೆಲ್ಲದ್ದಕ್ಕಿಂತ ಹೆಚ್ಚಾಗಿ ಸ್ವಾತಂತ್ರ್ಯವನ್ನು ಹೆಚ್ಚು ಗೌರವಿಸುತ್ತಾರೆ.

ಕರಡಿ: ಕರಡಿಯನ್ನು ಮೊದಲು ಗುರುತಿಸಿದವರು ನಿಜಜೀವನದಲ್ಲಿ ಹೆಚ್ಚು ನಾಟಕೀಯವಾಗಿರುವುದಿಲ್ಲ. ಅವರು ಸರಳವಾಗಿ ಹಾಗೆಯೇ ಎಲ್ಲಾ ವಿಚಾರದಲ್ಲೂ ಸ್ಥಿರ ನಿಲುವು ಹಾಗೂ ಮನೋಭಾವ ಹೊಂದಿರುತ್ತಾರೆ.

ಶ್ವಾನ: ಶ್ವಾನವನ್ನು ಮೊದಲು ಗಮನಿಸುವವರು ಬಹಳ ನಿಷ್ಠೆಯನ್ನು ಹೊಂದಿರುತ್ತಾರೆ. ಪ್ರೀತಿಪಾತ್ರರನ್ನು ರಕ್ಷಿಸಲು ಅವರು ಯಾವ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ.

ಹಂದಿ: ಹಂದಿಯನ್ನು ಮೊದಲು ಗಮನಿಸುವವರು ಪ್ರಾಮಾಣಿಕರಾಗಿರುತ್ತಾರೆ. ಗೆಳೆಯರ ಸಮಸ್ಯೆಗಳನ್ನು ಪರಿಹರಿಸಲು ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ.