ಇದಕ್ಕಾಗಿ ನೀವು ಯುಟಿಎಸ್ ಆ್ಯಪ್ ಡೌನ್ಲೋಡ್ ಮಾಡಬೇಕಷ್ಟೇ. ಈ ಅಪ್ಲಿಕೇಶನ್ ಗೂಗಲ್ ಪ್ಲೇಸ್ಟೋರ್ ಹಾಗೂ ಆ್ಯಪ್ ಸ್ಟೋರ್ನಲ್ಲಿ ಲಭ್ಯವಿದ್ದು, ಇದನ್ನು ಡೌನ್ಲೋಡ್ ಮಾಡಿ ನಿಮ್ಮ ಮಾಹಿತಿಯನ್ನು ರಿಜಿಸ್ಟರ್ ಮಾಡಬೇಕು. ಈ ವೇಳೆ ನಿಮ್ಮ ಮೊಬೈಲ್ ನಂಬರ್, ಹೆಸರು, ಹುಟ್ಟಿದ ದಿನಾಂಕವನ್ನು ನಮೂದಿಸಿ ಪಾಸ್ವರ್ಡ್ ಸೆಟ್, ಐ ಅಕ್ಸೆಪ್ಟ್ ಯುಟಿಎಸ್ ಆಯ್ಕೆಯನ್ನು ಟಿಕ್ ಮಾಡಿ ರಿಜಿಸ್ಟರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಇದರ ಬೆನ್ನಲ್ಲೇ ನಿಮ್ಮ ಮೊಬೈಲ್ಗೆ ಒಟಿಪಿ ನಂಬರ್ ಬರಲಿದೆ. ಒಟಿಪಿ ನಂಬರ್ ಸಬ್ಮಿಟ್ ಮಾಡಿದ ಬಳಿಕ ನಿಮಗೆ ಲಾಗಿನ್ ಆಯ್ಕೆ ತೋರಿಸಲಿದೆ.