Travel India: ಸಿಕ್ಕಿಂನ ಈ ಮನೋಹರ ತಾಣಗಳ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಸಚಿತ್ರ ಮಾಹಿತಿ

Sikkim tourist places: ಈಶಾನ್ಯ ಭಾರತದ ರಾಜ್ಯವಾಗಿರುವ ಸಿಕ್ಕಿಂ ಸುಂದರವಾದ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ಒಂದುವೇಳೆ ನೀವು ಅಲ್ಲಿಗೆ ಪ್ರವಾಸದ ಯೋಜನೆ ಮಾಡಿದ್ದಲ್ಲಿ ಈ ಸ್ಥಳಗಳನ್ನು ಮಿಸ್ ಮಾಡಲೇಬೇಡಿ. ಗ್ಯಾಂಗ್ಟಾಕ್, ಬುದ್ಧ ಪಾರ್ಕ್, ಜುಲುಕ್ ಹಾಗೂ ಪೆಲ್ಲಿಂಗ್ ಸಿಕ್ಕಿಂನಲ್ಲಿ ಬಹುಪ್ರಸಿದ್ಧವಾದ ಸ್ಥಳಗಳಾಗಿವೆ. ಅವುಗಳ ಸಚಿತ್ರ ವಿವರಣೆ ಇಲ್ಲಿದೆ.

shivaprasad.hs
|

Updated on: Apr 24, 2022 | 9:33 AM

ಸಿಕ್ಕಿಂ ತನ್ನ ನೈಸರ್ಗಿಕ ಸೌಂದರ್ಯದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪರ್ವತಗಳು ಮತ್ತು ಹಸಿರಿನ ನಡುವೆ ನೆಲೆಗೊಂಡಿರುವ ಈ ರಾಜ್ಯದಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ನೀವು ಕುಟುಂಬ ಅಥವಾ ಸ್ನೇಹಿತರೊಂದಿಗೆ ಪ್ರವಾಸವನ್ನು ಆನಂದಿಸಲು ಯೋಜಿಸಿದ್ದರೆ, ಅದಕ್ಕೆ ಪೂರಕವಾಗುವ ಮಾಹಿತಿ ಇಲ್ಲಿದೆ. ನೀವು ಯಾವೆಲ್ಲಾ ತಾಣಗಳನ್ನು ಮಿಸ್ ಮಾಡಲೇಬಾರದು ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

1 / 5
ಪೆಲ್ಲಿಂಗ್: ಇದು ಸಿಕ್ಕಿಂನ ಒಂದು ಸುಂದರ ತಾಣ. ಸುಮಾರು 7200 ಅಡಿ ಎತ್ತರದಲ್ಲಿರುವ ಈ ನಗರದಲ್ಲಿ ನೀವು ಸಾಹಸ ಕ್ರೀಡೆಗಳನ್ನು ಆಡಬಹುದು, ಚಾರಣ ಮಾಡಬಹುದು. ಪ್ರಶಾಂತವಾಗಿರುವ ಪೆಲ್ಲಿಂಗ್​ನ ವಾತಾವರಣಕ್ಕೆ ನೀವು ಮನಸೋಲೋದು ಗ್ಯಾರಂಟಿ.

2 / 5
ಜುಲುಕ್: ಈ ನಗರಕ್ಕೆ ಭೇಟಿ ನೀಡಿದರೆ ನಿಮ್ಮ ಸಿಕ್ಕಿಂ ಪ್ರವಾಸಕ್ಕೆ ಮತ್ತಷ್ಟು ಮೆರುಗು ತುಂಬುತ್ತದೆ ಎಂದೇ ಹೇಳಬಹುದು. ಇದು ಪೂರ್ವ ಹಿಮಾಲಯದ ಮಡಿಲಲ್ಲಿರುವ ಸುಂದರ ನಗರ. ಇಲ್ಲಿನ ನೈಸರ್ಗಿಕ ಸೌಂದರ್ಯ ಪ್ರಖ್ಯಾತವಾಗಿದ್ದು, ಪ್ರವಾಸಿಗರು ಭೇಟಿ ನೀಡಲು ಹಾತೊರೆಯುತ್ತಾರೆ.

3 / 5
ಗ್ಯಾಂಗ್ಟಾಕ್: ಸಿಕ್ಕಿಂನ ರಾಜಧಾನಿಯಾಗಿರುವ ಗ್ಯಾಂಗ್ಟಾಕ್​ನ ಹೆಸರು ಕೇಳದವರು ವಿರಳ. ಈ ನಗರಕ್ಕೆ ಭೇಟಿ ನೀಡಿದರೆ ನೀವು ರಾಜ್ಯದ ಸಂಸ್ಕೃತಿಯನ್ನು ಹತ್ತಿರದಿಂದ ತಿಳಿಯಬಹುದು. ಮೋಡಗಳಿಂದ ಆವೃತವಾಗಿರುವ ಈ ನಗರ ಹಾಗೂ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯಕ್ಕೆ ನೀವು ಫಿದಾ ಆಗೋದು ಪಕ್ಕಾ.

4 / 5
ಬುದ್ಧ ಪಾರ್ಕ್: ಸಿಕ್ಕಿಂನಲ್ಲಿ ಬುದ್ಧನ ಚಿಂತನೆಗಳನ್ನು ಅನುಸರಿಸುವ ಜನರು ಹೆಚ್ಚಿದ್ದಾರೆ. ಸಿಕ್ಕಿಂನಲ್ಲಿ ಬುದ್ಧನ ಪ್ರತಿಮೆಯನ್ನು ಒಳಗೊಂಡ ‘ಬುದ್ಧ ಪಾರ್ಕ್’ ಬಹುಪ್ರಸಿದ್ಧವಾಗಿದೆ. ನಿಮ್ಮ ಸಿಕ್ಕಿಂ ಭೇಟಿಯಲ್ಲಿ ಇದನ್ನು ಮಿಸ್ ಮಾಡಲೇಬೇಡಿ.

5 / 5
Follow us