
ಆಯುರ್ವೇದ ತಜ್ಞರ ಪ್ರಕಾರ, ತುಳಸಿ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್, ಆಂಟಿಫಂಗಲ್ ಇತ್ಯಾದಿ ಗುಣಗಳಿಂದ ಸಮೃದ್ಧವಾಗಿದೆ. ಇವು ಅನೇಕ ದೈಹಿಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ.

ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಗಳು ಬರುವುದಿಲ್ಲ. ಅಸಿಡಿಟಿ, ಮಲಬದ್ಧತೆ, ಅಜೀರ್ಣ ಮತ್ತು ಹುಳಿ ಮುಂತಾದ ಸಮಸ್ಯೆಗಳಿಂದಲೂ ಪರಿಹಾರ ನೀಡುತ್ತದೆ.

ಪ್ರತಿದಿನ ಬೆಳಗ್ಗೆ ತುಳಸಿ ಎಲೆಗಳನ್ನು ತಿನ್ನುವುದರಿಂದ ತ್ವಚೆಗೆ ಹೊಳಪು ನೀಡುತ್ತದೆ.

ಬಾಯಿ ದುರ್ವಾಸನೆಯಿಂದ ಬಳಲುತ್ತಿರುವವರು ತುಳಸಿ ಎಲೆಗಳನ್ನು ನಿಯಮಿತವಾಗಿ ತಿನ್ನುವುದರಿಂದ ದುರ್ವಾಸನೆ ಕಡೆಮೆ ಆಗುತ್ತದೆ.

ತುಳಸಿ ಎಲೆಯನ್ನು ಚಳಿಗಾಲದಲ್ಲಿ ಅನೇಕ ಪ್ರಯೋಜನಗಳನ್ನು ಹೊಂದಿವೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಯನ್ನು ತಿನ್ನುವುದರಿಂದ ನೆಗಡಿ, ಕೆಮ್ಮಿನಂತಹ ಸಮಸ್ಯೆಗಳು ದೂರವಾಗುತ್ತವೆ.