TV9 Interview with PM Modi: ಟಿವಿ9 ಸಂದರ್ಶನದಲ್ಲಿ ಮೋದಿ ಬಿಚ್ಚಿಟ್ಟ ಪ್ರಮುಖಾಂಶಗಳು

ಕಿರಣ್ ಹನುಮಂತ್​ ಮಾದಾರ್

Updated on: May 02, 2024 | 10:20 PM

ಟಿವಿ9 ಗ್ರೂಪ್ ಸಂಪಾದಕರು ಪ್ರ ಧಾನಿ ನರೇಂದ್ರ ಮೋದಿ(Narendra Modi)ಯವರೊಂದಿಗೆ ಇಂದು(ಮೇ.02) 8 ಗಂಟೆಯಿಂದ 10 ಗಂಟೆಯವರೆಗೆ ದುಂಡು ಮೇಜಿನ ಸಂದರ್ಶನವನ್ನು ನಡೆಸಿದ್ದು, ಕೆಲ ವಿಚಾರಗಳನ್ನು ಮೋದಿಯವರು ಬಿಚ್ಚಿಟ್ಟಿದ್ದಾರೆ. ಯಾವ್ಯಾವ ಪ್ರಮುಖಾಂಶಗಳು ಚರ್ಚೆಯಾದವು? ಇಲ್ಲಿದೆ ಮಾಹಿತಿ.

1 / 6
ಟಿವಿ9 ಗ್ರೂಪ್​​ನ 6 ಭಾಷೆಗಳ ಸಂಪಾದಕರು ಪ್ರಧಾನಿ ನರೇಂದ್ರ ಮೋದಿ(Narendra Modi)ಯವರೊಂದಿಗೆ ಇಂದು(ಮೇ.02) 8 ಗಂಟೆಯಿಂದ 10 ಗಂಟೆಯವರೆಗೆ ದುಂಡು ಮೇಜಿನ ಸಂದರ್ಶನವನ್ನು ನಡೆಸಿದ್ದು, ಕೆಲ ವಿಚಾರಗಳನ್ನು ಮೋದಿಯವರು ಬಿಚ್ಚಿಟ್ಟಿದ್ದಾರೆ. 

ಟಿವಿ9 ಗ್ರೂಪ್​​ನ 6 ಭಾಷೆಗಳ ಸಂಪಾದಕರು ಪ್ರಧಾನಿ ನರೇಂದ್ರ ಮೋದಿ(Narendra Modi)ಯವರೊಂದಿಗೆ ಇಂದು(ಮೇ.02) 8 ಗಂಟೆಯಿಂದ 10 ಗಂಟೆಯವರೆಗೆ ದುಂಡು ಮೇಜಿನ ಸಂದರ್ಶನವನ್ನು ನಡೆಸಿದ್ದು, ಕೆಲ ವಿಚಾರಗಳನ್ನು ಮೋದಿಯವರು ಬಿಚ್ಚಿಟ್ಟಿದ್ದಾರೆ. 

2 / 6

ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳು ಫಲಪ್ರದವಾಗುವುದಿಲ್ಲ. ದೇಶದ ಜನರು ಬುದ್ದಿವಂತರಿದ್ದಾರೆ. ಕಾಂಗ್ರೆಸ್​ನವರ ಪ್ರತಿಯೊಂದು ಆಟವನ್ನೂ ಅವರು ಬಲ್ಲವರಾಗಿದ್ದು, ಅವರು 5 ಗ್ಯಾರಂಟಿ ತರಲಿ, 25 ಗ್ಯಾರಂಟಿ ತರಲಿ ಅಥವಾ 75 ಗ್ಯಾರಂಟಿ ತರಲಿ ಜನರ ಮನಸಿನಲ್ಲಿ ಜಾಗ ಪಡೆಯಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

3 / 6

ಈ 10 ವರ್ಷಗಳ ಕಾಲ ಮಾಡಿದ್ದು ಕೇವಲ ಟ್ರೇಲರ್, ಇನ್ನೂ ಪಿಕ್ಚರ್ ಬಾಕಿ ಇದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಈ ಬಗ್ಗೆ ಟಿವಿ9 ಕನ್ನಡದ ರಂಗನಾಥ್ ಭಾರಧ್ವಾಜ್ ಪ್ರಧಾನಿ ಮೋದಿಯವರನ್ನು ಪ್ರಶ್ನೆ ಮಾಡಿದ್ದು, ಆ ಪಿಕ್ಚರ್​ನಲ್ಲಿ ಏನೇನಿದೆ? ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಮೋದಿ, ನಾನು ನಿದ್ರೆಯನ್ನೂ ಬಿಟ್ಟು ಈ ದೇಶದ ಅಭಿವೃದ್ಧಿಗೆ ದುಡಿಯುತ್ತೇನೆ. ನಾನು ಇದಕ್ಕಿಂತ ಮೇಲೆ ಈ ದೇಶವನ್ನು ಕೊಂಡೊಯ್ಯುತ್ತೇನೆ. ಮತ್ತಷ್ಟು ಹೊಸ ಹೊಸ ಯೋಜನೆಗಳನ್ನು ಮಾಡುತ್ತೇನೆ. ನನಗೆ ಜಗತ್ತಿನಲ್ಲಿ ಹಿಂದೂಸ್ಥಾನದ ಪರ ಜೈಕಾರ ಹಾಕಬೇಕು ಎಂಬುದೊಂದೇ ಆಸೆಯಿದೆ ಎಂದಿದ್ದಾರೆ.

4 / 6

ಇನ್ನು ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ವಿರೋಧ ಪಕ್ಷದವರು ಬಾರದಿರುವುದರ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮೋದಿ, ಪ್ರಭು ಶ್ರೀರಾಮನ ಮೇಲೆ ನಾವು ಅಧಿಕಾರ ಚಲಾಯಿಸಲು ಸಾಧ್ಯವೇ? ಪ್ರಭು ರಾಮನದ್ದು ಎಷ್ಟೊಂದು ಮಹಾನ್ ವ್ಯಕ್ತಿತ್ವ. ಕಾಂಗ್ರೆಸ್​ ಸುಮ್ಮನೆ ಏನೇನೋ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ. ಆತ ಎಲ್ಲರ ರಾಮ. ರಾಮನ ಮೇಲೆ ಯಾರ ಮಾಲೀಕತ್ವವೂ ನಡೆಯೋದಿಲ್ಲ. ಕಾಂಗ್ರೆಸ್​ನವರಿಗೆ ರಾಮ ಮಂದಿರ ಆದರೆ ಅವರ ವೋಟ್ ಬ್ಯಾಂಕ್ ಹೋಗುತ್ತದೆ ಎನಿಸಿದೆ. ಅದೇ ಭಯದಿಂದ ಅವರು ಮಾತನಾಡುತ್ತಿದ್ದಾರೆ ಎಂದರು. 

5 / 6

ಇದೇ ವೇಳೆ ತೆಲಂಗಾಣ ರಾಜಕಾರಣದ ಬಗ್ಗೆಯೂ ಮಾತನಾಡಿರುವ ಪ್ರಧಾನಿ , ತೆಲಂಗಾಣದಲ್ಲಿ ಭ್ರಷ್ಟಾಚಾರದ ಜಾಲ ಇದ್ದು, ಅದರಲ್ಲಿ ಬಿಆರ್​ಎಸ್​ ಮತ್ತು ಕಾಂಗ್ರೆಸ್ ಜನರು ಇದ್ದಾರೆ. ಅಬಕಾರಿ ವಿಚಾರವಾಗಿ ಎಷ್ಟು ಹಗರಣ ಇದೆಯೋ ಅದರಲ್ಲಿ ಬಿಆರ್​ಎಸ್​ನವರ ಹೆಸರು ಕೇಳಿಬಂದಿದೆ. ದೆಹಲಿ ಸರ್ಕಾರ ಇದೇ ಕೇಸ್​ನಲ್ಲಿ ಸಿಲುಕಿಕೊಂಡಿದೆ. ಈ ಪಂಜಾಬ್ ಸರ್ಕಾರದ ನೆತ್ತಿ ಮೇಲೂ ಕತ್ತಿ ಬೀಸುತ್ತಿದೆ. ರೇವಂತ್ ರೆಡ್ಡಿ ಅಲ್ಲಿ ಕಮಿಷನ್ ಸಿಗುವ ಯಾವ ಸಣ್ಣ ವಿಚಾರವನ್ನೂ ಬಿಡುತ್ತಿಲ್ಲ ಎಂದಿದ್ದಾರೆ.

6 / 6

ಕಾಂಗ್ರೆಸ್​ನಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿಯ ಹೆಸರನ್ನೇ ಹೇಳಲು ಆಗುತ್ತಿಲ್ಲ. ಆದ್ದರಿಂದ ಜನರು ಯಾರ ಮುಖ ನೋಡಿ ಮತ ಹಾಕುತ್ತಾರೆ? ಒಂದೊಂದು ವರ್ಷ ಒಬ್ಬೊಬ್ಬರು ಪ್ರಧಾನಿ ಆಗುತ್ತಾರೆ ಎಂದು ಹೊಸ ಆಟವಾಡುತ್ತಿದ್ದಾರೆ. ಇದರಿಂದ ದೇಶದ ಅಭಿವೃದ್ಧಿ ಹೇಗೆ ಆಗುತ್ತದೆ? ಎಂದರು.

Published On - 10:17 pm, Thu, 2 May 24

Loading...
Unable to load recommendations.
Follow Us