- Kannada News Photo gallery Anushka Sharma Celebrate her Birthday With Virat Kohli Maxwell and Faf Du plessis
ಆರ್ಸಿಬಿ ಆಟಗಾರರ ಜೊತೆ ಅನುಷ್ಕಾ ಶರ್ಮಾ ಬರ್ತ್ಡೇ; ಹೇಗಿತ್ತು ನೋಡಿ ಸೆಲೆಬ್ರೇಷನ್
ವಿರಾಟ್ ಕೊಹ್ಲಿ ಅವರು ಅನುಷ್ಕಾ ಶರ್ಮಾ ಜೊತೆ ರೆಸ್ಟೋರೆಂಟ್ ಒಂದರಲ್ಲಿ ಪೋಸ್ ಕೊಟ್ಟಿದ್ದಾರೆ. ಇವರ ಜೊತೆಗೆ ಆರ್ಸಿಬಿ ಆಟಗಾರರು ಕೂಡ ಇದ್ದರು ಅನ್ನೋದು ವಿಶೇಷ. ಈ ಫೋಟೋಗಳು ಈಗ ವೈರಲ್ ಆಗಿವೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ,
Updated on: May 03, 2024 | 12:52 PM

ಮೇ 1ರಂದು ಅನುಷ್ಕಾ ಶರ್ಮಾ ಅವರು ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಅವರು ಪ್ರೆಗ್ನೆಂಟ್ ಆದಾಗಿನಿಂದಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಕಡಿಮೆ. ಈಗ ಮಗು ಜನಿಸಿದ ಬಳಿಕ ಅವರು ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಅವರು ಅನುಷ್ಕಾ ಶರ್ಮಾ ಜೊತೆ ರೆಸ್ಟೋರೆಂಟ್ ಒಂದರಲ್ಲಿ ಪೋಸ್ ಕೊಟ್ಟಿದ್ದಾರೆ. ಇವರ ಜೊತೆಗೆ ಆರ್ಸಿಬಿ ಆಟಗಾರರು ಕೂಡ ಇದ್ದರು ಅನ್ನೋದು ವಿಶೇಷ. ಈ ಫೋಟೋಗಳು ಈಗ ವೈರಲ್ ಆಗಿವೆ.

ಆರ್ಸಿಬಿ ಕ್ಯಾಪ್ಟನ್ ಫಾಪ್ ಡುಪ್ಲೆಸಿಸ್ ಹಾಗೂ ಅವರ ಪತ್ನಿ, ಮ್ಯಾಕ್ಸ್ವೆಲ್ ಹಾಗೂ ಅವರ ಪತ್ನಿ, ವಿರಾಟ್-ಅನುಷ್ಕಾ ಜೊತೆ ಪೋಸ್ ಕೊಟ್ಟಿದ್ದಾರೆ. ಅನುಷ್ಕಾ ಸಹೋದರ ಕರ್ಣೇಶ್ ಕೂಡ ಪಾರ್ಟಿಯಲ್ಲಿ ಇದ್ದರು.

ವಿರಾಟ್ ಅವರು ಆರ್ಸಿಬಿಯ ಕೆಲವೇ ಆಟಗಾರರ ಜೊತೆ ಅನುಷ್ಕಾ ಬರ್ತ್ಡೇ ಮಾಡಿದ್ದಾರೆ. ಈ ಫೋಟೋಗಳು ಈಗ ವೈರಲ್ ಆಗುತ್ತಿವೆ.

ಕಳೆದ ಭಾನುವಾರ (ಏಪ್ರಿಲ್ 28) ಜಿಟಿ ವಿರುದ್ಧ ಆರ್ಸಿಬಿ ಗೆದ್ದಿದೆ. ಇದಾದ ಬಳಿಕ ಒಂದು ವಾರ ಗ್ಯಾಪ್ ಇತ್ತು. ಹೀಗಾಗಿ ಕೊಹ್ಲಿ ಪತ್ನಿ ಜೊತೆ ಸಮು ಕಳೆದಿದ್ದಾರೆ. ಮೇ 4ರಂದು ಬೆಂಗಳೂರಿನಲ್ಲಿ ಆರ್ಸಿಬಿ ಗುಜರಾತ್ ತಂಡವನ್ನು ಎದುರಿಸಲಿದೆ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿಗೆ ಇಬ್ಬರು ಮಕ್ಕಳು. ಮೊದಲ ಮಗಳಿಗೆ ವಮಿಕಾ ಎಂದು ಹೆಸರು ಇಟ್ಟಿರುವ ಅವರು, ಇತ್ತೀಚೆಗೆ ಜನಿಸಿದ ಮಗನಿಗೆ ಅಕಾಯ್ ಎಂದು ನಾಮಕರಣ ಮಾಡಿದ್ದಾರೆ.




