ಶಿವಮೊಗ್ಗ: ಶರಾವತಿ ಹಿನ್ನೀರಿನಲ್ಲಿ ಎರಡು ದಿನಗಳ ಕಾಲ ಕಪ್ಪೆ ಹಬ್ಬ; ಅಪರೂಪದ ಕಪ್ಪೆಗಳ ಫೋಟೋ ಇಲ್ಲಿದೆ ನೋಡಿ

| Updated By: preethi shettigar

Updated on: Dec 21, 2021 | 9:52 AM

ವಿನಾಶದ ಅಂಚಿನಲ್ಲಿರುವ ಪ್ರಾಣಿ-ಪಕ್ಷಿಗಳ ರಕ್ಷಣೆಗಾಗಿ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ನಾನಾ ರೀತಿಯ ಹಬ್ಬ ಆಚರಿಸುವುದು ಸಾಮಾನ್ಯ. ಆದರೆ ಇದೀಗ ಕಪ್ಪೆ ಹಬ್ಬ ಆಚರಿಸುವ ಮೂಲಕ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಕಪ್ಪೆಗಳ ಉಳಿವಿಗಾಗಿ ಅರಿವು ಮೂಡಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ.

1 / 5
ಸೃಷ್ಟಿ ಎಂಬ ಕೌತುಕದಲ್ಲಿ ಪ್ರತಿಯೊಂದು ಜೀವಿಗೂ ಅದರದ್ದೇ ಆದ ಮಹತ್ವದ ಸ್ಥಾನ ಇದೆ. ಇದರಿಂದ ಉಭಯವಾಸಿ ಎನಿಸಿಕೊಂಡಿರುವ ಕಪ್ಪೆಯೂ ಹೊರತಾಗಿಲ್ಲ. ಆದರೆ ಹವಾಮಾನ ವೈಪರೀತ್ಯ, ವಿಪರೀತ ರಾಸಾಯನಿಕಗಳ ಬಳಕೆ, ಅರಣ್ಯ ನಾಶ, ಜಲ ಮೂಲಗಳ ಒತ್ತುವರಿ ಇವೇ ಮೊದಲಾದ ಕಾರಣಕ್ಕೆ ಕಪ್ಪೆ ಸಂಕುಲ ಈಗ ಅಪಾಯಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ಕಪ್ಪೆಯ ಮಹತ್ವದ ಬಗ್ಗೆ ಯುವ ಜನತೆ ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ಅರಣ್ಯ ಇಲಾಖೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನ ಮುಪ್ಪಾನೆ ಪ್ರಕೃತಿ ಶಿಬಿರದಲ್ಲಿ ಎರಡು ದಿನ ರಾಜ್ಯಮಟ್ಟದ ಕಪ್ಪೆ ಹಬ್ಬವನ್ನು ಇದೇ ಮೊದಲ ಬಾರಿಗೆ ಆಯೋಜಿಸಿದೆ.

2 / 5
ಅರಣ್ಯ ಇಲಾಖೆ ಈ ತನಕ ದೊಡ್ಡ ಪ್ರಾಣಿಗಳ ರಕ್ಷಣೆಗೆ ಗಮನ ಹರಿಸುತ್ತಾ ಬಂದಿದೆ. ಆದರೆ ಇದೀಗ ಸಣ್ಣ ಜೀವಿಯಾದ ಕಪ್ಪೆಯ ರಕ್ಷಣೆ ಬಗ್ಗೆ ಗಮನ ಹರಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಕಪ್ಪೆ ಹಬ್ಬ ಆಯೋಜಿಸಿದೆ. ಮುಂದಿನ ದಿನಗಳಲ್ಲಿ ಕೊಪ್ಪಳ ಭಾಗದಲ್ಲಿ ತೋಳ ಹಬ್ಬ, ದಕ್ಷಿಣ ಕನ್ನಡದಲ್ಲಿ ಕಾಂಡ್ಲಾ ಹಬ್ಬ, ಉತ್ತರ ಕನ್ನಡ ಭಾಗದಲ್ಲಿ ಆಮೆ ಹಬ್ಬ, ಮೈಸೂರಿನ ಕಾವೇರಿ ನದಿ ತೀರ ಪ್ರದೇಶದಲ್ಲಿ ಕಣ್ಮರೆಯಾಗುತ್ತಿರುವ ಮಹಶೀರ್ ಮೀನಿನ ಪ್ರಬೇಧ ರಕ್ಷಣೆಗೆ ಮಹಶೀರ್ ಹಬ್ಬ ಮೊದಲಾದವುಗಳನ್ನು ಹಮ್ಮಿಕೊಳ್ಳಲಾಗುತ್ತದೆ.

3 / 5
ಕಪ್ಪೆ ಎಂದರೆ ಕೇವಲ ಪಶ್ಚಿಮಘಟ್ಟಕ್ಕೆ ಬರಬೇಕು ಎಂದೇನಿಲ್ಲ. ಹಾಗೆ ನೋಡಿದರೆ ಕಪ್ಪೆ ರಕ್ಷಣೆಗೆ ಹುಲಿ ರಕ್ಷಣೆಗೆ ಬೇಕಾದಷ್ಟು ಜಾಗವೂ ಬೇಕಾಗಿಲ್ಲ. ಮನೆ ಬಾಗಿಲಲ್ಲೇ ಕಾಣುವ ಕಪ್ಪೆಯನ್ನು ಉಳಿಸುವ ಕೆಲಸವಾದರೂ ಸಾಕು. ಈ ನಿಟ್ಟಿನಲ್ಲಿ ಕಪ್ಪೆಗಳ ಮಹತ್ವದ ಬಗ್ಗೆ ಅರಿವು ಮೂಡಿಸಿದರೆ ಮುಂದೆ ಇದರ ರಕ್ಷಣೆ ಸಾಧ್ಯವಾಗುತ್ತದೆ. ಆದರೆ ರಾಜ್ಯದಲ್ಲಿ ಕಪ್ಪೆಗಳ ಸ್ಥಿತಿಗತಿ ಬಗ್ಗೆ ಸರಿಯಾದ ಮಾಹಿತಿ ಇಲ್ಲ.

4 / 5
ದೇಶದಲ್ಲಿ ಇನ್ನೂ ಬಹಳಷ್ಟು ಕಪ್ಪೆಗಳ ಪ್ರಬೇಧ ಬೆಳಕಿಗೆ ಬಂದಿಲ್ಲ. ಆದರೆ ನಗರೀಕರಣ ಹಾಗೂ ಕೆರೆಗಳ ನಾಶದಿಂದಾಗಿ ಕಪ್ಪೆ ಸಂಕುಲಕ್ಕೆ ಅಪಾಯ ಎದುರಾಗಿದೆ ಎಂದು ತಜ್ಞರು ಹೇಳುತ್ತಾರೆ. ಇನ್ನು ಅರಣ್ಯದ ನಡುವೆ ಆಯೋಜಿಸಿರುವ ಕಪ್ಪೆ ಹಬ್ಬಕ್ಕೆ ಯುವ ಜನತೆ, ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಪರಿಸರಾಸಕ್ತರು ಹೆಚ್ಚಿನ ಆಸಕ್ತಿಯಿಂದ ಪಾಲ್ಗೊಂಡಿದ್ದಾರೆ.

5 / 5
ಕಪ್ಪೆಯ ಕುರಿತು ತಜ್ಞರ ಉಪನ್ಯಾಸದ ಜೊತೆಗೆ ರಾತ್ರಿ ವೇಳೆ ಶರಾವತಿ ಅರಣ್ಯ ಭಾಗದಲ್ಲಿ ಕಾಣಸಿಗುವ ವಿವಿಧ ಪ್ರಬೇಧದ ಕಪ್ಪೆಗಳನ್ನು ಗುರುತಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಇದರಿಂದಾಗಿ ಕಪ್ಪೆಯ ಜೀವನ ಕ್ರಮ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಕಪ್ಪೆಯ ಮಹತ್ವ ಅರಿಯಲು ಸಾಧ್ಯವಾಗಿದೆ ಎಂದು ಶಿಬಿರಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ.

Published On - 9:49 am, Tue, 21 December 21