Kannada News Photo gallery Union Transportation Minister Nitin Gadkari to touch down by helicopter on Bangalore Mysore express highway corridor on January 5
ಮೈಸೂರು ಎಕ್ಸ್‌ಪ್ರೆಸ್ ವೇ ಕಾಮಗಾರಿ ಪರಿಶೀಲನೆಗೆ ದಶಪಥ ಹೆದ್ದಾರಿಯಲ್ಲೆ ಹೆಲಿಕಾಪ್ಟರ್ ಇಳಿಸಲಿದ್ದಾರೆ ಸಾರಿಗೆ ಸಚಿವ ನಿತಿನ್ ಗಡ್ಕರಿ
TV9 Web | Updated By: ಸಾಧು ಶ್ರೀನಾಥ್
Updated on:
Jan 05, 2023 | 9:36 AM
Bengaluru Mysuru Expressway: 2 ಹೆಲಿಪ್ಯಾಡ್ ನಿರ್ಮಾಣ ಸೇರಿದಂತೆ ಹತ್ತು ಹಲವು ವಿಶೇಷತೆ ಹೊಂದಿರುವ ಈ ಹೆದ್ದಾರಿ ಬೆಂಗಳೂರು-ಮೈಸೂರು ಕಾರಿಡಾರ್‌ನ ಅಭಿವೃದ್ಧಿಗೆ ಬೂಸ್ಟರ್ ಆಗಲಿದೆ ಎಂದು ಹೇಳಲಾಗಿದೆ.
1 / 22
ನೂತನ ಎಕ್ಸ್ ಪ್ರೆಸ್ ವೇಯನ್ನ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಹ (Union Transportation Minister Nitin Gadkari) ವೀಕ್ಷಣೆ ಮಾಡಲಿದ್ದಾರೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಜನವರಿ 5 ರಂದು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಕಾಮಗಾರಿ ಪರಿಶೀಲನೆ ನಡೆಸಲಿದ್ದು, ಹೊಸ ಹೆದ್ದಾರಿಯಲ್ಲಿಯೇ ಹೆಲಿಕಾಪ್ಟರ್ ಇಳಿಸಲು ಸಹ ಚಿಂತನೆ ನಡೆದಿದೆ.
2 / 22
ಅಂದಹಾಗೆ ಎಕ್ಸ್‌ಪ್ರೆಸ್ ವೇನಲ್ಲಿ ಆಟೊ, ಟ್ರ್ಯಾಕ್ಟರ್, ಎತ್ತಿನಗಾಡಿ, 200 ಸಿ.ಸಿ.ಗಿಂತ ಕಡಿಮೆ ಸಾಮರ್ಥ್ಯದ ಬೈಕ್‌ಗಳಿಗೆ ಪ್ರವೇಶ ನಿರ್ಬಂಧಿಸಲು ಹೆದ್ದಾರಿ ಪ್ರಾಧಿಕಾರ ಚಿಂತಿಸಿದೆ. ಇಂತಹ ವಾಹನಗಳು ಸರ್ವೀಸ್ ರಸ್ತೆಯಲ್ಲೇ ಚಲಿಸಬೇಕಾಗುತ್ತದೆ.
ಎಕ್ಸ್‌ಪ್ರೆಸ್‌ವೇ ಎಡಬಲದಲ್ಲಿ ಆರು ಅಡಿ ಉದ್ದದ ತಂತಿಬೇಲಿ ಹಾಕಲಾಗಿದೆ. ಇದರಿಂದ ಜಾನುವಾರುಗಳು ರಸ್ತೆಗೆ ನುಗ್ಗುವುದು ತಪ್ಪಲಿದ್ದು, ಅಪಘಾತಗಳೂ ಕಡಿಮೆ ಆಗಲಿವೆ. ಇನ್ನು ಎಕ್ಸ್ ಪ್ರೆಸ್ ವೇ ಬಗ್ಗೆ ಕೆಲವೊಂದು ಅಪಸ್ಪರಗಳು ಇವೆ.
3 / 22
ಎಲಿವೇಟೆಡ್ ಕಾರಿಡಾರ್‌ಗಳಲ್ಲಿ ಸ್ಪೈನ್ ಅಂಡ್ ವಿಂಗ್ ಸೆಂಗ್‌ಮೆಂಟ್ ತಂತ್ರಜ್ಞಾನ (elevated corridor spine and wing segment technology) ಬಳಸಿದ್ದು, ವಾಹನಗಳು ಹೆಚ್ಚು ಅಲುಗಾಡುವುದು ತಪ್ಪಲಿದೆ. ಒಟ್ಟಾರೆ ನೂತನ ಬೆಂಗಳೂರು-ಮೈಸೂರು ಹೆದ್ದಾರಿ ಇನ್ನೇನು ಕೆಲವೇ ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಸಾರಿಗೆ ಸಚಿವ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
4 / 22
ಹೆದ್ದಾರಿ ಕಾಮಗಾರಿಯಲ್ಲಿ ಹಲವು ನವೀನ ಬಗೆಯ ತಂತ್ರಜ್ಞಾನವನ್ನು ಬಳಸಲಾಗಿದೆ. ಪ್ರತಿ ಎರಡು ಕಿ.ಮೀ. ಗೆ ಒಂದು ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರಲಿದೆ. ಪ್ರತಿ 5 ಕಿ.ಮೀ. ಗೆ ಕ್ಲೋಸ್ಡ್ ಯೂಟರ್ನ್ ಸಿಗಲಿದೆ.
5 / 22
ಹೊಸ ಹೆದ್ದಾರಿಯಿಂದ ಟ್ರಾಫಿಕ್ ಕಿರಿಕಿರಿ ತಪ್ಪಲಿದ್ದು, ಬೈಪಾಸ್‌ಗಳಿಂದಾಗಿ ಸದ್ಯ ಈ ನಗರಗಳ ನಡುವಿನ ಪ್ರಯಾಣದ ಅವಧಿ ಸಾಕಷ್ಟು ಕಡಿಮೆ ಆಗಿದೆ. ಅಂತಿಮವಾಗಿ ಪ್ರಯಾಣದ ಒಟ್ಟು ಅವಧಿ ಸರಾಸರಿ 90 ನಿಮಿಷಕ್ಕೆ ಇಳಿಕೆ ಆಗುವ ನಿರೀಕ್ಷೆ ಇದೆ.
6 / 22
ಇದರ ಎಡಬಲದಲ್ಲಿ ತಲಾ ಎರಡು ಪಥಗಳ ಸರ್ವೀಸ್ ರಸ್ತೆ ಸಹ ನಿರ್ಮಾಣ ಆಗುತ್ತಿದೆ. ಇನ್ನು ಹಳೇ ಹೆದ್ದಾರಿಯಲ್ಲಿ ಬೆಂಗಳೂರಿನಿಂದ ಮೈಸೂರಿಗೆ ತೆರಳಬೇಕಾದರೆ ಕನಿಷ್ಠ 3–4 ಗಂಟೆ ಬೇಕಿತ್ತು. (ವರದಿ: ಪ್ರಶಾಂತ್ ಹುಲಿಕೆರೆ, ಟಿವಿ 9, ರಾಮನಗರ)
7 / 22
ಪ್ರತಿ ಎರಡು ಕಿ.ಮೀ. ಗೆ ಒಂದು ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರಲಿದೆ. ಪ್ರತಿ 5 ಕಿ.ಮೀ. ಗೆ ಕ್ಲೋಸ್ಡ್ ಯೂಟರ್ನ್ ಸಿಗಲಿದೆ.
8 / 22
ನಿತಿನ್ ಗಡ್ಕರಿ ಭೇಟಿ ವೇಳೆ ಬಿಗಿ ಭದ್ರತೆಯನ್ನು ಕೂಡ ಪೊಲೀಸ್ ಇಲಾಖೆಯಿಂದ ಮಾಡಿಕೊಳ್ಳಲಾಗುತ್ತಿದೆ ಎಂದು ಸಂತೋಷ್ ಬಾಬು ಕೆ, ರಾಮನಗರ ಎಸ್ ಪಿ ಹೇಳಿದ್ದಾರೆ.
9 / 22
ಎಕ್ಸ್‌ಪ್ರೆಸ್ ವೇನಲ್ಲಿ ಆಟೊ, ಟ್ರ್ಯಾಕ್ಟರ್, ಎತ್ತಿನಗಾಡಿ, 200 ಸಿ.ಸಿ.ಗಿಂತ ಕಡಿಮೆ ಸಾಮರ್ಥ್ಯದ ಬೈಕ್‌ಗಳಿಗೆ ಪ್ರವೇಶ ನಿರ್ಬಂಧಿಸಲು ಹೆದ್ದಾರಿ ಪ್ರಾಧಿಕಾರ ಚಿಂತಿಸಿದೆ.
10 / 22
ಅಲ್ಲಲ್ಲಿ ಬೈಪಾಸ್, ಸೇತುವೆ ನಿರ್ಮಾಣ ಕಾಮಗಾರಿಗಳು ಸದ್ಯ ನಡೆದಿವೆ. ಹತ್ತು ಪಥದಲ್ಲಿ ಆರು ಪಥಗಳು ಎಕ್ಸ್‌ಪ್ರೆಸ್ ವೇಗೆ ಮೀಸಲು. ಇದರಲ್ಲಿ ಬೆಂಗಳೂರು–ಮೈಸೂರು ಕಡೆಗೆ ತಲಾ ಮೂರು ಪಥಗಳು ಮೀಸಲಿವೆ.
11 / 22
ಈಗಾಗಲೇ ಬೈಪಾಸ್ ರಸ್ತೆ ಸಹ ಸಂಚಾರಕ್ಕೆ ಮುಕ್ತವಾಗಿದ್ದು, ವಾಹನಗಳು ಸಂಚರಿಸುತ್ತಿವೆ. ನಿಡಘಟ್ಟದಿಂದ ಮೈಸೂರಿನ ಮಣಿಪಾಲ್ ಆಸ್ಪತ್ರೆ ಜಂಕ್ಷನ್ (ಕೊಲಂಬಿಯಾ ಏಷ್ಯಾ) ವರೆಗಿನ 62 ಕಿ.ಮೀ. ಉದ್ದದ ಕಾಮಗಾರಿಯು ಪ್ರಗತಿಯಲ್ಲಿದೆ.
12 / 22
ಎರಡು ಹಂತದಲ್ಲಿ ಕೆಲಸ ನಡೆದಿದ್ದು, ಮೊದಲ ಹಂತದಲ್ಲಿ ಬೆಂಗಳೂರಿನ ನೈಸ್ ರಸ್ತೆ ಜಂಕ್ಷನ್‌ನಿಂದ ಮದ್ದೂರು ತಾಲ್ಲೂಕಿನ ನಿಡಘಟ್ಟವರೆಗಿನ 56.2 ಕಿ.ಮೀ. ಉದ್ದದ ಹತ್ತು ಪಥದ ಹೆದ್ದಾರಿ ಕಾಮಗಾರಿ ಬಹುತೇಕ ಮುಗಿದಿದೆ.
13 / 22
ಹೆಲಿಪ್ಯಾಡ್ ನಿರ್ಮಾಣ ಸೇರಿದಂತೆ ಹತ್ತು ಹಲವು ವಿಶೇಷತೆ ಹೊಂದಿರುವ ಈ ಹೆದ್ದಾರಿ ಬೆಂಗಳೂರು-ಮೈಸೂರು ಕಾರಿಡಾರ್‌ನ ಅಭಿವೃದ್ಧಿಗೆ ಬೂಸ್ಟರ್ ಆಗಲಿದೆ ಎಂದು ಹೇಳಲಾಗಿದೆ.
14 / 22
ಬಹುನಿರೀಕ್ಷಿತ ಬೆಂಗಳೂರು-ಮೈಸೂರು ಹೆದ್ದಾರಿ ಹತ್ತು ಪಥ ಕಾಮಗಾರಿ ಅಂತಿಮ ಘಟ್ಟ ತಲುಪಿದ್ದು, ಪ್ರಯಾಣಿಕರು ಹೆಚ್ಚಿನ ಟ್ರಾಫಿಕ್ ಕಿರಿಕಿರಿ ಇಲ್ಲದೇ ಮೈಸೂರುನಿಂದ ಬೆಂಗಳೂರು, ಬೆಂಗಳೂರಿನಿಂದ ಮೈಸೂರು ತಲುಪಬಹುದಾಗಿದೆ.
15 / 22
ಬೆಂಗಳೂರು-ಮೈಸೂರು ಹತ್ತು ಪಥಗಳ ಹೆದ್ದಾರಿಯನ್ನು ಫೆಬ್ರವರಿ ಅಂತ್ಯ ಇಲ್ಲವೇ ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ನಿರೀಕ್ಷೆ ಇದೆ ಎಂದು ರಾಮನಗರ ಎಸ್ ಪಿ ಸಂತೋಷ್ ಬಾಬು ಕೆ ತಿಳಿಸಿದ್ದಾರೆ.
16 / 22
ವೈಮಾನಿಕ ಸಮೀಕ್ಷೆ ಬಳಿಕ ಹೆಲಿಕಾಪ್ಟರ್ ರಾಮನಗರದಲ್ಲಿ ಇಳಿಯಲಿದ್ದು, ಅಲ್ಲಿಂದ ಸುಮಾರು 20 ಕಿ.ಮೀ. ದೂರ ಸಚಿವರೇ ಕಾರು ಚಲಾಯಿಸಿ ರಸ್ತೆ ಗುಣಮಟ್ಟ ವೀಕ್ಷಿಸಲಿದ್ದಾರೆ.
17 / 22
ಈ ಹಿಂದೆ ಗಡ್ಕರಿ ಹೊಸತಾಗಿ ನಿರ್ಮಾಣಗೊಂಡ ಎಕ್ಸ್‌ಪ್ರೆಸ್ ವೇನಲ್ಲಿ 180 ಕಿ.ಮೀ. ವೇಗದಲ್ಲಿ ಕಾರು ಚಲಾಯಿಸಿ ಗಮನ ಸೆಳೆದಿದ್ದರು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿಯೂ ಗಡ್ಕರಿ ಕಾರು ಚಲಾಯಿಸಲಿದ್ದಾರೆ.
18 / 22
ಈಗಾಗಲೇ ರಾಮನಗರ ತಾಲೂಕಿನ ಕೆಂಪೇಗೌಡನದೊಡ್ಡಿ ಗ್ರಾಮದ ಬಳಿ ಎಕ್ಸಪ್ರೆಸ್ ಹೈವೆಯಲ್ಲೇ ಎರಡು ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತಿದೆ.
19 / 22
ರಾಮನಗರ-ಚನ್ನಪಟ್ಟಣ ನಡುವೆ ನಿರ್ಮಾಣ ಆಗಿರುವ ದಶಪಥಗಳ ಬೈಪಾಸ್ ರಸ್ತೆಯಲ್ಲಿ ಗಡ್ಕರಿ ಹೆಲಿಕಾಪ್ಟರ್‌ನಲ್ಲಿ ಬಂದಿಳಿಯಲಿದ್ದಾರೆ. ಸಚಿವರ ಭೇಟಿ ಹಿನ್ನೆಲೆಯಲ್ಲಿ
ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು ಹೆಲಿಕಾಪ್ಟರ್ ಇಳಿಸಲು ಎರಡು ಸ್ಥಳ ಗುರುತಿಸಿದ್ದಾರೆ.
20 / 22
ಇದರಿಂದ ಈ ಮಹಾನಗರಗಳ ನಡುವಿನ ಪ್ರಯಾಣದ ಅವಧಿ ನಾಲ್ಕು ಗಂಟೆಯಿಂದ ಒಂದೂವರೆ ಗಂಟೆಗೆ ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ.
21 / 22
ಹೌದು ಬೆಂಗಳೂರು–ಮೈಸೂರು ಹೆದ್ದಾರಿಯು (Bengaluru Mysuru Expressway) ಈಗ ನಾಲ್ಕು ಪಥದಿಂದ ದಶಪಥಕ್ಕೆ ವಿಸ್ತಾರಗೊಳ್ಳುತ್ತಿದೆ. ಮೊದಲ ಹಂತದ ಕಾಮಗಾರಿಗಳು ಅಂತಿಮ ಘಟ್ಟ ತಲುಪಿದ್ದು, ಎರಡನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ.
22 / 22
ಅದು ಸಾವಿರಾರು ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರೋ ಎಕ್ಸ್ ಪ್ರೆಸ್ ವೇ. ಎರಡು ಮಹಾನಗರಗಳನ್ನ ಬೆಸೆಯುವ ಆ ಹೆದ್ದಾರಿ ಇನ್ನೇನೂ ಕೆಲವೇ ತಿಂಗಳಲ್ಲಿ ಪ್ರಧಾನಿ ಮೋದಿ ಅವರಿಂದ ಉದ್ಘಾಟನೆಯಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಾರಿಗೆ ಸಚಿವರು ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಲಿದ್ದಾರೆ.
Published On - 11:24 am, Wed, 4 January 23