
ಮುಖದ ಕೂದಲು ತೆಗೆಯಲು ಬ್ಯೂಟಿ ಪಾರ್ಲರ್‌ಗೆ ಹೋಗಿ ಸಾಕಷ್ಟು ಹಣ ಖರ್ಚು ಮಾಡಿ ನಾನಾ ರೀತಿಯ ಟ್ರೀಟ್‌ಮೆಂಟ್‌ಗಳನ್ನು ಮಾಡಿಸಿಕೊಳ್ಳುತ್ತಾರೆ. ಆದರೆ ಅಂತಹ ಯಾವುದೇ ಸಮಸ್ಯೆಗಳಿಲ್ಲದೆ ಮನೆಯಲ್ಲಿ ಸಿಗುವ ಸಿಂಪಲ್ ಮನೆಮದ್ದುಗಳಿಂದ ಮುಖದ ಕೂದಲು ತೆಗೆಯಬಹುದು.

ಪಪ್ಪಾಯಿ ಹಣ್ಣಿನ ಪೇಸ್ಟ್: ಪಪ್ಪಾಯಿ ಹಣ್ಣಿನ ತುಂಡುಗಳನ್ನು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ಅರಿಶಿನ ಹಾಕಿ ಮುಖಕ್ಕೆ ಹಚ್ಚಿದರೆ ಅನಗತ್ಯ ಕೂದಲು ಬೆಳೆಯುವುದನ್ನು ತಡೆಯಬಹುದಾಗಿದೆ.

ಕಡಲೆ ಹಿಟ್ಟು ಮತ್ತು ರೋಸ್ ವಾಟರ್: ಎರಡನ್ನು ಜೊತೆಗೆ ಲೇಪಿಸುವುದರಿಂದ ಮುಖದಲ್ಲಿ ಅನಗತ್ಯ ಕೂದಲು ಬೆಳೆಯುವುದನ್ನು ನಿಲ್ಲಿಸುತ್ತದೆ.

ಸ್ವಲ್ಪ ಸಕ್ಕರೆ, ನಿಂಬೆ ರಸ, ಜೇನುತುಪ್ಪ ಮತ್ತು ಕಾರ್ನ್ ಫ್ಲೋರ್ನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಕೂದಲು ಬೆಳೆಯುವುದಿಲ್ಲ.

ಪುದೀನಾ ಚಹಾವು ಮುಖದ ಕೂದಲನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಟೆಸ್ಟೋಸ್ಟೆರಾನ್ನ್ನು ಕಡಿಮೆ ಮಾಡುತ್ತದೆ. ಇದು ಅನಗತ್ಯ ಮುಖದ ಕೂದಲನ್ನು ಹೋಗಲಾಡಿಸಿ ನಿಮ್ಮ ಮುಖವನ್ನು ಕಾಂತಿಯುತವಾಗಿಸುತ್ತದೆ.