AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: 6,6,6,6,6,6,6.. ಅಫ್ರಿಕಾ ವಿರುದ್ಧ ಅಬ್ಬರಿಸಿದ ಇಶಾನ್ ಕಿಶನ್

Ishan Kishan's Explosive 53: 2026ರ ಟಿ20 ವಿಶ್ವಕಪ್​ಗೂ ಮುನ್ನ ನಡೆದ ಭಾರತ-ದಕ್ಷಿಣ ಆಫ್ರಿಕಾ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ 241 ರನ್ ಗಳಿಸಿತು. ಆರಂಭಿಕ ಇಶಾನ್ ಕಿಶನ್ ಕೇವಲ 20 ಎಸೆತಗಳಲ್ಲಿ 53 ರನ್ (7 ಸಿಕ್ಸರ್) ಗಳಿಸಿ ಮಿಂಚಿದರು. ತಂಡದ ಉಳಿದ ಬ್ಯಾಟ್ಸ್‌ಮನ್‌ಗಳಿಗೆ ಅವಕಾಶ ನೀಡಲು ಕಿಶನ್ ನಿವೃತ್ತಿ ಪಡೆದರು. ಈ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಟಿ20 ವಿಶ್ವಕಪ್‌ಗೆ ಭಾರತದ ಸಿದ್ಧತೆಯನ್ನು ತೋರಿಸುತ್ತದೆ.

ಪೃಥ್ವಿಶಂಕರ
|

Updated on: Feb 04, 2026 | 9:06 PM

Share
2026 ರ ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನ ನವಿ ಮುಂಬೈನ ಡಿವೈ ಸ್ಟೇಡಿಯಂ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಭಾರತ ಹಾಗೂ ದಕ್ಷಿಣ ಆಪ್ರಿಕಾ ತಂಡಗಳು ಅಭ್ಯಾಸ ಪಂದ್ಯವನ್ನಾಡಿದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಬರೋಬ್ಬರಿ 241 ರನ್ ಕಲೆಹಾಕಿತು. ತಂಡದ ಪರ ಆಡಿದ ಎಲ್ಲಾ ಬ್ಯಾಟ್ಸ್‌ಮನ್​ಗಳು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

1 / 5
ಇಂದಿನ ಅಭ್ಯಾಸ ಪಂದ್ಯದಲ್ಲಿ ಭಾರತದ ಆರಂಭಿಕ ಜೋಡಿ ಬದಲಾಗಿತ್ತು. ಕಳೆದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಆರಂಭಿಕ ಜವಾಬ್ದಾರಿ ನಿಭಾಯಿಸಿದ್ದರು. ಆದರೆ ಸಂಜು ಸ್ಯಾಮ್ಸನ್ ಕಳಪೆ ಪ್ರದರ್ಶನ ನೀಡಿದ್ದರಿಂದ ಅವರ ಬದಲಿಗೆ ಇಶಾನ್ ಕಿಶನ್​ಗೆ ಆರಂಭಿಕ ಸ್ಥಾನ ನೀಡಲಾಯಿತು. ಇತ್ತ ಸಿಕ್ಕ ಅವಕಾಶವನ್ನು ಕಿಶನ್ ಎರಡೂ ಕೈಗಳಿಂದ ಬಾಚಿಕೊಂಡರು.

2 / 5
ಅಭಿಷೇಕ್ ಜೊತೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಇಶಾನ್ ಕಿಶನ್ ಕ್ರೀಸ್‌ಗೆ ಬಂದ ತಕ್ಷಣವೇ ಬಿರುಗಾಳಿ ಸೃಷ್ಟಿಸಿದರು. ಇಶಾನ್ ಕಿಶನ್ ಕೇವಲ 20 ಎಸೆತಗಳಲ್ಲಿ 53 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಮಾತ್ರವಲ್ಲದೆ ತಮ್ಮ ಇನ್ನಿಂಗ್ಸ್‌ನಲ್ಲಿ 7 ಸಿಕ್ಸರ್‌ಗಳು ಮತ್ತು 2 ಬೌಂಡರಿಗಳನ್ನು ಬಾರಿಸಿದರು. ಅಂದರೆ, ಅವರು ಕೇವಲ ಬೌಂಡರಿಗಳಿಂದಲೇ 50 ರನ್ ಪೂರೈಸಿದರು.

3 / 5
ಆರಂಭಿಕ ಆಟಗಾರನಾಗಿ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಕಿಶನ್ ಮೊದಲ ಓವರ್‌ನಲ್ಲಿಯೇ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಲುಂಗಿ ಎನ್‌ಗಿಡಿ, ಕಗಿಸೊ ರಬಾಡ, ಅನ್ರಿಚ್ ನೋಕಿಯಾರಂತಹ ಘಾತಕ ವೇಗಿಗಳ ಬೌಲಿಂಗ್​ನಲ್ಲೂ ಸಿಕ್ಸರ್​ಗಳ ಮಳೆಗರೆದರು. ನೋಕಿಯಾ ಓವರ್‌ನ ನಾಲ್ಕು ಎಸೆತಗಳಲ್ಲಿ ಮೂರು ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಬಾರಿಸಿದರು. ನಂತರ ಆರನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಸಿಕ್ಸರ್‌ ಬಾರಿಸುವ ಮೂಲಕ ಅರ್ಧಶತಕವನ್ನು ಪೂರ್ಣಗೊಳಿಸಿದರು.

4 / 5
ಇಶಾನ್ ಕಿಶನ್ ಅರ್ಧಶತಕ ಗಳಿಸಿದ ತಕ್ಷಣ ತಂಡದ ಮ್ಯಾನೇಜ್​ಮೆಂಟ್ ಅವರನ್ನು ಮೈದಾನದಿಂದ ಹೊರಗೆ ಕರೆಸಿಕೊಂಡಿತು. ಅಂದರೆ ಕಿಶನ್ ನಿವೃತ್ತಿ ಘೋಷಿಸಿ ಹೊರ ನಡೆದರು. ಇದು ಅಭ್ಯಾಸ ಪಂದ್ಯವಾಗಿದ್ದ ಕಾರಣ ತಂಡದ ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ಗೂ ಆಡುವ ಅವಕಾಶ ನೀಡುವ ಸಲುವಾಗಿ ಕಿಶನ್ ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿದರು. ಕಿಶನ್​ ಬಳಿಕ ಬಂದ ತಿಲಕ್ ವರ್ಮಾ ಕೂಡ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ನೀಡಿದರು.

5 / 5
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us
ಏಳು ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಈ ವಾರ ಹೊರ ಹೋಗೋದು ಯಾರು?

ಬೆಂಗಳೂರು: ಬ್ರಿಗೇಡ್ ರಸ್ತೆ ಲೇಡಿಸ್​​ ಪಬ್​​ಗಳ ಮೇಲೆ ಪೊಲೀಸರ ದಿಢೀರ್ ದಾಳಿ

ಮೈಸೂರಿನ ಪ್ರತಿಭೆ ರಿಷಿತಾ ಸಾಧನೆ
ಮೈಸೂರಿನ ಪ್ರತಿಭೆ ರಿಷಿತಾ ಸಾಧನೆ
ಸಿಜೆಪಿ ಪ್ರತಿಭಟನೆ ನಿಷೇಧಿಸಿ: ಎಲ್ಲ ರಾಜ್ಯಗಳಿಗೆ ಗೃಹ ಇಲಾಖೆ ಸೂಚನೆ

ಇಂದು ಮಹಾಲಯ ಅಮವಾಸ್ಯೆ; ನಿಮ್ಮ ಪೂರ್ವಜರನ್ನು ಸ್ಮರಿಸಿ

ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ

ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?

ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?

ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ

‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್