Updated on: May 18, 2022 | 12:14 PM
ಪ್ರತಿ ಬಾರಿ ಕೇವಲ ಬಾಲಿವುಡ್ ತಾರೆಯರು ಮಾತ್ರ ಕಾನ್ ಚಿತ್ರೋತ್ಸವದಲ್ಲಿ ಮಿಂಚುತ್ತಿದ್ದರು. ಈ ಬಾರಿ ತಮನ್ನಾ ಭಾಟಿಯಾ, ಪೂಜಾ ಹೆಗ್ಡೆ ಮುಂತಾದ ದಕ್ಷಿಣ ಭಾರತದ ನಟಿಯರಿಗೂ ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವ ಅವಕಾಶ ಸಿಕ್ಕಿದೆ.
ನಟಿ ತಮನ್ನಾ ಅವರು ತಮ್ಮ ಸಿನಿಮಾ ಕೆಲಸಗಳಿಗೆ ಬಿಡುವು ಮಾಡಿಕೊಂಡು ಕಾನ್ ಚಿತ್ರೋತ್ಸವಕ್ಕೆ ಹಾಜರಿ ಹಾಕಿದ್ದಾರೆ. ತಾರೆಯರು ಆಕರ್ಷಕವಾಗಿ ಉಡುಗೆ ಧರಿಸಿ ಈ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವುದು ವಾಡಿಕೆ. ತಮನ್ನಾ ಕೂಡ ಮನ ಸೆಳೆಯುವ ಪೋಷಾಕಿನಲ್ಲಿ ಕಾಣಿಸಿಕೊಂಡಿದ್ದಾರೆ.
ವಿಶೇಷವಾಗಿ ವಿನ್ಯಾಸಗೊಂಡ ಗೌನ್ ಧರಿಸಿ ತಮ್ಮನಾ ಭಾಟಿಯಾ ಅವರು ಪೋಸ್ ನೀಡಿದ್ದಾರೆ. ಅವರ ಈ ಕಾಸ್ಟ್ಯೂಮ್ ಕಂಡು ಅಭಿಮಾನಿಗಳು ವಾವ್ ಎಂದಿದ್ದಾರೆ. ನೆರೆದಿದ್ದ ನೂರಾರು ಕ್ಯಾಮೆರಾಗಳು ತಮನ್ನಾ ಆವರ ಚೆಲುವನ್ನು ಸೆರೆ ಹಿಡಿದಿವೆ.
ನಟಿ ಊರ್ವಶಿ ರೌಟೇಲಾ ಅವರು ಹಿಂದಿ ಮತ್ತು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ‘ಮಿಸ್ಟರ್ ಐರಾವತ’ ಸಿನಿಮಾದಲ್ಲಿ ಅಭಿನಯಿಸಿ ಕನ್ನಡಿಗರಿಗೆ ಪರಿಚಿತರಾದ ಅವರು ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.
ಶ್ವೇತ ವರ್ಣದ ಗೌನ್ ಧರಿಸಿ ಊರ್ವಶಿ ರೌಟೇಲಾ ಅವರು ಕಾಣಿಸಿಕೊಂಡಿದ್ದಾರೆ. ಅನೇಕ ಪ್ರತಿಷ್ಠಿತ ಕಂಪನಿಗಳಿಗೆ ಅವರು ರಾಯಭಾರಿ ಕೂಡ ಹೌದು. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಊರ್ವಶಿ ರೌಟೇಲಾ ಫೋಟೋಗಳು ವೈರಲ್ ಆಗಿವೆ.