- Kannada News Photo gallery US Open 2023 Daniil Medvedev defeat defending champion Carlos Alcaraz to set up final with Novak Djokovic
US Open 2023: ಹಾಲಿ ಚಾಂಪಿಯನ್ ಅಲ್ಕರಾಝ್ಗೆ ಸೋಲು! ಮೆಡ್ವೆಡೆವ್- ಜೊಕೊವಿಚ್ ನಡುವೆ ಫೈನಲ್ ಫೈಟ್
US Open 2023: ಯುಎಸ್ ಓಪನ್ 2023 ರ ಪುರುಷರ ಸಿಂಗಲ್ಸ್ ವಿಭಾಗದ ಸೆಮಿ-ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಝ್ರನ್ನು ಮಣಿಸಿದ ಡೇನಿಯಲ್ ಮೆಡ್ವೆಡೆವ್ ಪ್ರಶಸ್ತಿ ಸುತ್ತಿಗೆ ಕಾಲಿರಿಸಿದ್ದಾರೆ.ಮೆಡ್ವೆಡೆವ್ 7-6, 6-1, 3-6, 6-3 ಸೆಟ್‌ಗಳಿಂದ ಅಲ್ಕರಾಝ್ರನ್ನು ಸೋಲಿಸಿ ಈ ವರ್ಷದ ಯುಎಸ್ ಓಪನ್‌ನ ಫೈನಲ್‌ಗ್ಗೆ ಲಗ್ಗೆ ಇಟ್ಟಿದ್ದು, ಪ್ರಶಸ್ತಿ ಸುತ್ತಿನಲ್ಲಿ ನೊವಾಕ್ ಜೊಕೊವಿಚ್ರನ್ನು ಎದುರಿಸಲಿದ್ದಾರೆ.
Updated on:Sep 09, 2023 | 9:37 AM

ಯುಎಸ್ ಓಪನ್ 2023 ರ ಪುರುಷರ ಸಿಂಗಲ್ಸ್ ವಿಭಾಗದ ಸೆಮಿ-ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಝ್ರನ್ನು ಮಣಿಸಿದ ಡೇನಿಯಲ್ ಮೆಡ್ವೆಡೆವ್ ಪ್ರಶಸ್ತಿ ಸುತ್ತಿಗೆ ಕಾಲಿರಿಸಿದ್ದಾರೆ.

ಮೆಡ್ವೆಡೆವ್ 7-6, 6-1, 3-6, 6-3 ಸೆಟ್‌ಗಳಿಂದ ಅಲ್ಕರಾಝ್ರನ್ನು ಸೋಲಿಸಿ ಈ ವರ್ಷದ ಯುಎಸ್ ಓಪನ್‌ನ ಫೈನಲ್‌ಗ್ಗೆ ಲಗ್ಗೆ ಇಟ್ಟಿದ್ದು, ಪ್ರಶಸ್ತಿ ಸುತ್ತಿನಲ್ಲಿ ನೊವಾಕ್ ಜೊಕೊವಿಚ್ರನ್ನು ಎದುರಿಸಲಿದ್ದಾರೆ.

ಮೊದಲ ಸೆಟ್ ತೀವ್ರ ಪೈಪೋಟಿಯಿಂದ ಕೂಡಿತ್ತು. ಹೀಗಾಗಿ ಆಟ ಟೈ-ಬ್ರೇಕ್‌ಗೆ ಹೋಯಿತು. ಇಲ್ಲಿ ಮೇಲುಗೈ ಸಾಧಿಸಿದ ಮೆಡ್ವೆಡೆವ್ ಟೈ-ಬ್ರೇಕ್ ಅನ್ನು 7-3 ಅಂತರದಿಂದ ಗೆದ್ದು ಬೀಗಿದರು. ಆದರೆ ಎರಡನೇ ಸೆಟ್‌ನಲ್ಲಿ ತನ್ನ ಪ್ರಾಬಲ್ಯ ಮುಂದುವರೆಸಿದ ಮೆಡ್ವೆಡೆವ್, ಅಲ್ಕರಾಝ್ ಅವರ ಸರ್ವ್‌ಗಳನ್ನು ಮುರಿದು 6-1 ಅಂಕಗಳೊಂದಿಗೆ ಸೆಟ್ ಅನ್ನು ಮುಗಿಸಿದರು.

ಆದಾಗ್ಯೂ, ಅಲ್ಕರಾಝ್ ಮೂರನೇ ಸೆಟ್‌ನಲ್ಲಿ ಮೆಡ್ವೆಡೆವ್‌ಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು. ಎರಡು ಬ್ರೇಕ್ ಪಾಯಿಂಟ್‌ಗಳನ್ನು ಉಳಿಸಿದ ಅಲ್ಕರಾಝ್, ಮೆಡ್ವೆಡೆವ್ ಮಾಡಿದ ತಪ್ಪುಗಳ ಲಾಭವನ್ನು ಪಡೆದು ಮೂರನೇ ಸೆಟ್ ಅನ್ನು 6-3 ರಿಂದ ಗೆದ್ದುಕೊಂಡರು. ಈ ಗೆಲುವು ಪಂದ್ಯಕ್ಕೆ ಹೊಸ ಜೀವ ತುಂಬಿ ರೋಚಕ ನಾಲ್ಕನೇ ಸೆಟ್‌ಗೆ ವೇದಿಕೆ ಕಲ್ಪಿಸಿತು.

ನಾಲ್ಕನೇ ಸೆಟ್‌ನಲ್ಲಿ ಇಬ್ಬರೂ ಆಟಗಾರರಿಂದ ತೀವ್ರ ಪೈಪೋಟಿ ಕಂಡು ಬಂತು. ಆದರೆ ಸೆಟ್‌ನ ಆರಂಭದಲ್ಲಿ ಅಲ್ಕರಾಝ್ ಅವರ ಸರ್ವ್ ಅನ್ನು ಮುರಿಯುವಲ್ಲಿ ಯಶಸ್ವಿಯಾದ ಮೆಡ್ವೆಡೆವ್, ನಾಲ್ಕನೇ ಸೆಟ್ ಅನ್ನು 6-3 ರಿಂದ ಗೆದ್ದು ಪ್ರಶಸ್ತಿ ಸುತ್ತಿಗೆ ಕಾಲಿರಿಸಿದರು.

ಇತ್ತ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಅಮೆರಿಕದ ಬೆನ್ ಶೆಲ್ಟನ್ ಅವರನ್ನು ಎದುರಿಸಿದ್ದ ಜೊಕೊವಿಚ್ ಮೊದಲ ಎರಡು ಸೆಟ್‌ಗಳನ್ನು ಸುಲಭವಾಗಿ ಗೆದ್ದರು. ಆದರೆ, ಅಮೆರಿಕದ ಟೆನಿಸ್ ತಾರೆ ಮೂರನೇ ಸೆಟ್‌ನಲ್ಲಿ ತಿರುಗೇಟು ನೀಡಿದರು. ಹೀಗಾಗಿ ಈ ಸೆಟ್ ಟೈಬ್ರೇಕರ್‌ಗೆ ಹೋಯಿತು. ಆದರೆ, ಜೊಕೊವಿಚ್ ಪ್ರಬಲ ಆಡದ ಮುಂದೆ ಶೆಲ್ಟನ್ ಸೋಲಪ್ಪಿಕೊಳ್ಳಲೇಬೇಕಾಯಿತು. ಅಂತಿಮವಾಗಿ ಜೊಕೊವಿಚ್ 6-3, 6-2, 7-6 (7-4) ಸೆಟ್‌ಗಳಿಂದ ಜಯ ಸಾಧಿಸಿದರು.

ಇದರೊಂದಿಗೆ ಸರ್ಬಿಯಾದ ಟೆನಿಸ್ ಸ್ಟಾರ್ ಜೊಕೊವಿಚ್ 10 ನೇ ಬಾರಿ ಯುಎಸ್ ಓಪನ್‌ನ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಇತ್ತ ರಷ್ಯಾದ ಟೆನಿಸ್ ತಾರೆ ಡೇನಿಯಲ್ ಮೆಡ್ವೆಡೆವ್ ಮೂರನೇ ಬಾರಿಗೆ ಯುಎಸ್ ಓಪನ್‌ನ ಫೈನಲ್ ತಲುಪಿದದ್ದಾರೆ. ಇನ್ನು ಈ ಹಿಂದೆ ಯುಎಸ್ ಓಪನ್ ಫೈನಲ್‌ನಲ್ಲಿ ಮೆಡ್ವೆಡೆವ್, ಜೊಕೊವಿಚ್ ಅವರನ್ನು ಸೋಲಿಸಿದ್ದರು. ಹೀಗಾಗಿ ಈ ಬಾರಿ ಆ ಸೋಲಿನ ಸೇಡು ತೀರಿಸಿಕೊಳ್ಳಲು ಸರ್ಬಿಯಾದ ಟೆನಿಸ್ ತಾರೆಗೆ ಅವಕಾಶ ಸಿಕ್ಕಿದೆ.
Published On - 9:34 am, Sat, 9 September 23














