Updated on: Feb 24, 2022 | 11:36 AM
ತಲೆಯ ಕೂದಲಿ ಮತ್ತು ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಸವಾಲಿನ ಕೆಲಸವಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಶ್ಯಾಂಪೂ, ಕ್ರೀಮಗಳನ್ನು ಎಷ್ಟು ಬಳಸಿದರೂ ಸರಿಯಾದ ಪರಿಹಾರ ದೊರಕುವುದಿಲ್ಲ. ಹೀಗಾಗಿ ಅದಕ್ಕೆ ಆರ್ಗಾನ್ ಎಣ್ಣೆ ಉಪಯುಕ್ತವಾಗಿದೆ.
ಆರ್ಗಾನ್ ಎಣ್ಣೆ ಕೂದಲಿನ ಮತ್ತು ಚರ್ಮದ ಬುಡಕ್ಕೆ ಹೋಗಿ ಮಾಶ್ಚರೈಸ್ ಮಾಡುತ್ತದೆ. ಇದು ಕೂದಲಿನ ಬುಡವನ್ನೂ ಗಟ್ಟಿಗೊಳಿಸಿ, ಕೂದಲು ಉದುರುವಿಕೆಯನ್ನು ತಡೆಯುತ್ತದೆ.
ಚರ್ಮ ವಯಸ್ಸಾದಂತೆ ಕಾಣುವುದನ್ನು ಆರ್ಗಾನ್ ಎಣ್ಣೆ ತಡೆಯುತ್ತದೆ. ಹೀಗಾಗಿ ಪ್ರತಿದಿನ ಚರ್ಮಕ್ಕೆ ಆರ್ಗಾನ್ ಎಣ್ಣೆಯನ್ನು ಹಚ್ಚಿ ಒಂದೈದು ನಿಮಿಷ ಮಸಾಜ್ ಮಾಡಿಕೊಳ್ಳಿ.
ಆರ್ಗಾನ್ ಎಣ್ಣೆಯಲ್ಲಿರುವ ವಿಟಮಿನ್ ಸಿ ಅಂಶ ಚರ್ಮದ ಮೇಲೆ ಕಾಣಿಸಿಕೊಳ್ಳುವ ಗೆರೆಗಳನ್ನು ಕಡಿಮೆ ಮಾಡುತ್ತದೆ. ಚರ್ಮ ಮೃದುವಾಗುವಂತೆ ಮಾಡುತ್ತದೆ.
ಚರ್ಮಕ್ಕೆ ಸಂಬಂಧಿಸಿದ ಸೋಂಕುಗಳನ್ನು ತಡೆಗಟ್ಟಲು ಆರ್ಗಾನ್ ಎಣ್ಣೆ ಸಹಾಯಕವಾಗಿದೆ. ಚರ್ಮಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಸತ್ತ ಜೀವಕೋಶಗಳನ್ನು ತೆಗದೆ ಕಾಂತಿಯುತ ಚರ್ಮ ನೀಡುತ್ತದೆ.
ಆರ್ಗಾನ್ ಎಣ್ಣೆಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಅಂಶಗಳು ಚರ್ಮದ ಮೇಲಿನ ಗಾಯಗಳನ್ನು ಬೇಗನೆ ವಾಸಿಯಾಗುವಂತೆ ಮಾಡುತ್ತದೆ.