Kannada News Photo gallery Valentine Week List 2023: Spend Beautiful Moments with your loved ones with specials throughout the week
Valentine Week List 2023: ಪ್ರೇಮಿಗಳ ದಿನ ಸಮೀಪಿಸುತ್ತಿದೆ, ವಾರಪೂರ್ತಿಯ ವಿಶೇಷತೆಗಳು ಇಲ್ಲಿವೆ
ಪ್ರೇಮಿಗಳ ದಿನಾಚರಣೆ ವಿಶೇಷವಾಗಿ, ವಾರ ಪೂರ್ತಿ ಒಂದೊಂದು ವಿಶೇಷತೆಗಳೊಂದಿಗೆ ನಿಮ್ಮ ಪ್ರೇಮಿಯೊಂದಿಗೆ ಸುಂದರಕ್ಷಣಗಳನ್ನು ಕಳೆಯಿರಿ. ಫೆಬ್ರವರಿ 7 ರಂದು ರೋಸ್ ಡೇಯಿಂದ ಪ್ರಾರಂಭವಾಗಿ ಫೆಬ್ರವರಿ 14 ವರೆಗಿನ ದಿನದ ವಿಶೇಷತೆಗಳು ಇಲ್ಲಿವೆ.
1 / 9
ಪ್ರೇಮಿಗಳ ದಿನದ ವಿಶೇಷವಾಗಿ, ವಾರ ಪೂರ್ತಿ ಒಂದೊಂದು ವಿಶೇಷತೆಗಳೊಂದಿಗೆ ನಿಮ್ಮ ಪ್ರೇಮಿಯೊಂದಿಗೆ ಸುಂದರಕ್ಷಣಗಳನ್ನು ಕಳೆಯಿರಿ. ಫೆಬ್ರವರಿ 7 ರಂದು ರೋಸ್ ಡೇಯಿಂದ ಪ್ರಾರಂಭವಾಗಿ ಫೆಬ್ರವರಿ 14 ವರೆಗಿನ ದಿನದ ವಿಶೇಷತೆಗಳು ಇಲ್ಲಿವೆ.
2 / 9
ಫೆಬ್ರವರಿ 7 - ರೋಸ್ ಡೇ: ತಮ್ಮ ಪ್ರೀತಿಪಾತ್ರರಿಗೆ ಗುಲಾಬಿಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು ಈ ದಿನ ವಿಶೇಷ. ಆದರೆ ಇಲ್ಲಿ ನೀಡುವ ಪ್ರತಿಯೊಂದು ಬಣ್ಣದ ಗುಲಾಬಿಗೂ ಒಂದೊಂದು ಅರ್ಥವಿದೆ. ಕೆಂಪು- ಪ್ರೇಮ, ಗುಲಾಬಿ ಬಣ್ಣ- ಕೃತಜ್ಞತೆ ಹಾಗೂ ಹಳದಿ ಬಣ್ಣವು ಸ್ನೇಹದ ಸಂಕೇತವಾಗಿದೆ.
3 / 9
ಫೆಬ್ರವರಿ 8 - ಪ್ರಪೋಸ್ ಡೇ: ಪ್ರೇಮಿಗಳ ವಾರದ ಎರಡನೇ ದಿನವು ಪ್ರಪೋಸ್ ಡೇ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ನೀವು ನಿಮ್ಮ ಪ್ರೇಮಿಗೆ ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳುವುದರ ಮೂಲಕ ವ್ಯಕ್ತ ಪಡಿಸಬಹುದಾಗಿದೆ.
4 / 9
ಫೆಬ್ರವರಿ 9 - ಚಾಕೊಲೇಟ್ ಡೇ: ವ್ಯಾಲೆಂಟೈನ್ಸ್ ಡೇ ವಾರದ ಮೂರನೇ ದಿನವು ಚಾಕೊಲೇಟ್ ದಿನವಾಗಿದೆ. ನಿಮ್ಮ ಪ್ರೇಮಿಗೆ ಚಾಕೊಲೇಟ್ ನೀಡುವುದರ ಮೂಲಕ ಪರಸ್ಪರ ಸಿಹಿಯೊಂದಿಗೆ ಪ್ರೀತಿ ಹಂಚಿಕೊಳ್ಳುವ ದಿನವಾಗಿದೆ.
5 / 9
ಫೆಬ್ರವರಿ 10 - ಟೆಡ್ಡಿ ಡೇ: ಟೆಡ್ಡಿ ಡೇ ಪ್ರೇಮಿಗಳ ವಾರದ ನಾಲ್ಕನೇ ದಿನವಾಗಿದೆ. ಈ ದಿನ ನಿಮ್ಮ ಪ್ರೀತಿಪಾತ್ರರಿಗೆ ಟೆಡ್ಡಿ ಬೇರ್‌ಗಳನ್ನು ಉಡುಗೊರೆಯಾಗಿ ನೀಡಿ ಪರಸ್ಪರ ಪ್ರೀತಿ ಹಂಚಿಕೊಳ್ಳುವ ದಿನವಾಗಿದೆ.
6 / 9
ಫೆಬ್ರವರಿ 11 - ಪ್ರಾಮಿಸ್ ಡೇ: ಪ್ರೇಮಿಗಳ ವಾರದ ಐದನೇ ದಿನದಂದು, ದಂಪತಿಗಳು ತಮ್ಮ ಸಂಬಂಧವನ್ನು ಬಲಪಡಿಸುವ, ಭರವಸೆಗಳನ್ನು ನೀಡುವ ದಿನವಾಗಿದೆ.
7 / 9
ಫೆಬ್ರವರಿ 12 - ಹಗ್ ಡೇ: ವ್ಯಾಲೆಂಟೈನ್ ವಾರದ ಆರನೇ ದಿನ ಹಗ್ ಡೇ. ಜನರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ತಮ್ಮ ಪ್ರೀತಿಪಾತ್ರರಿಗೆ ಬೆಚ್ಚಗಿನ ಅಪ್ಪುಗೆಯನ್ನು ನೀಡುತ್ತಾರೆ.
8 / 9
ಫೆಬ್ರವರಿ 13 - ಕಿಸ್ ಡೇ: ಪ್ರೇಮಿಗಳ ವಾರದ ಏಳನೇ ದಿನ ಕಿಸ್ ಡೇ ಯನ್ನು ಆಚರಿಸಲಾಗುತ್ತದೆ. ತಮ್ಮ ಪ್ರೀತಿಪಾತ್ರರನ್ನು ಚುಂಬಿಸುವ ಮೂಲಕ ಕಿಸ್ ದಿನವನ್ನು ಆಚರಿಸುತ್ತಾರೆ. ವಿಭಿನ್ನ ಚುಂಬನಗಳು ವಿಭಿನ್ನ ಅರ್ಥವನ್ನು ನೀಡುತ್ತದೆ. ಚುಂಬನಗಳು ಪ್ರೀತಿ, ವಾತ್ಸಲ್ಯ, ಕೃತಜ್ಞತೆ ಮತ್ತು ಕಾಳಜಿಯನ್ನು ತೋರಿಸುತ್ತವೆ.
9 / 9
Published On - 12:09 pm, Sun, 5 February 23