Kannada News » Photo gallery » Cricket photos » India vs Australia Test We will pick bowlers who can take 20 wickets says Pat Cummins Cricket News in Kannada
IND vs AUS Test: ನಮ್ಮಲ್ಲಿ 20 ವಿಕೆಟ್ ಕೀಳುವ ಬೌಲರ್ ಇದ್ದಾರೆ: ಭಾರತಕ್ಕೆ ಭಯ ಹುಟ್ಟಿಸಲು ಮತ್ತೊಂದು ಹೇಳಿಕೆ ನೀಡಿದ ಆಸ್ಟ್ರೇಲಿಯಾ
India vs Australia 1st Test: ಬಾರ್ಡರ್- ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿ ಆರಂಭಕ್ಕೆ ಇನ್ನೇನು ನಾಲ್ಕು ದಿನಗಳಷ್ಟೇ ಬಾಕಿಯಿದೆ. ಇದಕ್ಕೂ ಮುನ್ನ ಆಸೀಸ್ ಆಟಗಾರರ ಒಂದರ ಮೇಲೊಂದು ಹೇಳಿಕೆ ನೀಡುತ್ತಿದ್ದಾರೆ.
Feb 05, 2023 | 8:11 AM
ಇಡೀ ವಿಶ್ವವೇ ಕಾದುಕುಳಿತಿರುವ ಬಹುನಿರೀಕ್ಷಿತ ಬಾರ್ಡರ್- ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿ ಆರಂಭಕ್ಕೆ ಇನ್ನೇನು ನಾಲ್ಕು ದಿನಗಳಷ್ಟೇ ಬಾಕಿಯಿದೆ. ಫೆಬ್ರವರಿ 9 ರಂದು ನಾಗ್ಪುರದಲ್ಲಿ ಇಂಡೋ-ಆಸೀಸ್ ನಡುವೆ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಇದಕ್ಕೂ ಮುನ್ನ ಆಸೀಸ್ ಆಟಗಾರರ ಒಂದರ ಮೇಲೊಂದು ಹೇಳಿಕೆ ನೀಡುತ್ತಿದ್ದಾರೆ.
1 / 9
ಈಗಾಗಲೇ ಭಾರತದ ಪಿಚ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕುಗ್ಗಿಸಲು ಪ್ರಯತ್ನಿಸಿರುವ ಆಸ್ಟ್ರೇಲಿಯಾ ಇದೀಗ ಭಯ ಹುಟ್ಟಿಸಲು ಮತ್ತೊಂದು ಹೇಳಿಕೆ ನೀಡಿದೆ. ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರು ನಮ್ಮಲ್ಲಿ 20 ವಿಕೆಟ್ ಪಡೆಯುವ ಬೌಲರ್ ಇದ್ದಾರೆ ಎಂದು ಹೇಳಿದ್ದಾರೆ.
2 / 9
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ಯಾಟ್ ಕಮಿನ್ಸ್, ನಮ್ಮ ತಂಡದಲ್ಲೂ 20 ವಿಕೆಟ್ಗಳನ್ನೂ ಕಬಳಿಸಬಲ್ಲ ಬೌಲರ್ ಇದ್ದಾರೆ. ಸಾಕಷ್ಟು ಸ್ಪಿನ್ ಬೌಲಿಂಗ್ ಆಯ್ಕೆಗಳಿವೆ. ಬೆರಳಿನ ಸ್ಪಿನ್ನರ್, ಮಣಿಕಟ್ಟಿನ ಸ್ಪಿನ್ನರ್, ಎಡಗೈ ಸ್ಪಿನ್ನರ್, ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಜೊತೆಗಿದ್ದಾರೆ. ಇವರನ್ನು ಸರಿಯಾದ ಸಂದರ್ಭದಲ್ಲಿ ಸೂಕ್ತ ಕಾರಣಕ್ಕೆ ಬಳಸಬಹುದು ಎಂದು ಹೇಳಿದ್ದಾರೆ.
3 / 9
ಆಸ್ಟನ್ ಅಗರ್ ಈ ಹಿಂದಿನ ತಂಡದಲ್ಲಿ ಆಡಿದ್ದಾರೆ. ಸ್ವೆಪ್ಸನ್ ಕಳೆದ ಎರಡು ಪ್ರವಾಸಗಳಲ್ಲಿ ಆಡಿದ್ದಾರೆ. ಮರ್ಫಿ ಕೂಡ ಕಳೆದ ಪ್ರವಾಸದಲ್ಲಿ ಜತೆಗಿದ್ದರು. ಹೀಗಾಗಿ ಅವರೆಲ್ಲರೂ ಭಾರತದ ಎದುರು ಉತ್ತಮ ಅನುಭವ ಹೊಂದಿದ್ದಾರೆ- ಪ್ಯಾಟ್ ಕಮಿನ್ಸ್.
4 / 9
ಅವಳಿ ಸ್ಪಿನ್ ದಾಳಿ ಬಗ್ಗೆ ಮಾತನಾಡಿದ ಪ್ಯಾಟ್ ಕಮಿನ್ಸ್, ಈಗಲೇ ಏನೂ ಹೇಳಲಾಗದು. ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಯಾವುದಕ್ಕೂ ನಾಗ್ಪುರಕ್ಕೆ ತೆರಳಿದ ನಂತರ ಅಲ್ಲಿ ಪಿಚ್ ಬಗ್ಗೆ ಗಮನಿಸಿ ಒಂದು ಹಂತದ ನಿರ್ಧಾರಕ್ಕೆ ಬರಲು ಸಾಧ್ಯ. ಸೋಮವಾರ ನಾಗ್ಪುರಕ್ಕೆ ಪ್ರಯಾಣ ಬೆಳೆಸುತ್ತೇವೆ ಎಂದರು.
5 / 9
ಇದರ ನಡುವೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಗೆಲ್ಲಲು ಆಸ್ಟ್ರೇಲಿಯಾ ಫೇವರೇಟ್ ಆಗಿದೆ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಗ್ರೆಗ್ ಚಾಪೆಲ್ ಹೇಳಿದ್ದಾರೆ. ಪಂತ್ ಮತ್ತು ಬುಮ್ರಾ ಅವರಂತಹ ಪ್ರಮುಖ ಆಟಗಾರರಿಗೆ ಗಾಯಗಳಿಂದಾಗಿ ಭಾರತವು ಈ ಬಾರಿ ದುರ್ಬಲವಾಗಿರುವುದರಿಂದ ಮುಂಬರುವ ಈ ಸರಣಿಯನ್ನು ಆಸ್ಟ್ರೇಲಿಯಾ ಗೆಲ್ಲಬಹುದು ಎಂದಿದ್ದಾರೆ.
6 / 9
ಮತ್ತೊಂದೆಡೆ ಟೀಮ್ ಇಂಡಿಯಾ ಕೂಡ ನಾಗ್ಪುರದಲ್ಲಿ ಕಠಿಣ ಅಭ್ಯಾಸ ಮಾಡುತ್ತಿದೆ. ಭಾರತದಲ್ಲಿ ಸ್ಪಿನ್ ಪಿಚ್‌ಗಳಲ್ಲಿ ಆಡಲು ಸಿದ್ಧವಾಗುತ್ತಿರುವ ಆಸ್ಟ್ರೇಲಿಯಾ ತಂಡಕ್ಕೆ ಶಾಕ್ ಕೊಡಲು ತೀರ್ಮಾನಿಸಿರುವ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಹೊಸ ಉಪಾಯ ಮಾಡಿದ್ದಾರೆ.
7 / 9
ನಾಯಕ ರೋಹಿತ್ ಹಾಗೂ ಕೋಚ್ ದ್ರಾವಿಡ್ ಸರಣಿಯ ನಾಲ್ಕು ಪಂದ್ಯಗಳನ್ನು ಆಯೋಜಿಸುವ ಕ್ರೀಡಾಂಗಣಗಳ ಪಿಚ್ ಕ್ಯುರೇಟರ್‌ಗಳಿಗೆ ಮನವಿ ಮಾಡಿದ್ದು, ಎಲ್ಲಾ ಸ್ಥಳಗಳಲ್ಲಿ ಉತ್ತಮವಾದ ಟೆಸ್ಟ್ ಕ್ರಿಕೆಟ್ ಪಿಚ್ ನಿರ್ಮಿಸುವಂತೆ ಕೇಳಿಕೊಂಡಿದ್ದಾರೆ.
8 / 9
ಫೆಬ್ರವರಿ 9 ರಿಂದ ಈ ಬಹುನಿರೀಕ್ಷಿತ ಟೆಸ್ಟ್ ಸರಣಿ ಪ್ರಾರಂಭವಾಗಲಿದೆ. ಇದು ಒಟ್ಟು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಾಗಿದೆ. ಇದಾದ ಬಳಿಕ ಮಾರ್ಚ್ 17 ರಿಂದ ಏಕದಿನ ಸರಣಿ ನಡೆಯಲಿದೆ. ಟೆಸ್ಟ್ ಪಂದ್ಯಗಳು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದಾಗಿದ್ದು, ಸರಣಿ ಜಯಿಸಿದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರುವ ಅವಕಾಶ ಹೊಂದಿದೆ.