- Kannada News Photo gallery Vastu Tips: According to Vastu, in which part of the house should a peacock feather be kept? Does a peacock feather bring good luck to the house?
Vastu Tips: ವಾಸ್ತು ಪ್ರಕಾರ ಮನೆಯ ಯಾವ ಭಾಗದಲ್ಲಿ ನವಿಲು ಗರಿ ಇಡಬೇಕು? ಮನೆಗೆ ನವಿಲು ಗರಿ ಶುಭ ತರುವುದೇ?
ನೀವು ವಾಸ್ತು ಶಾಸ್ರ್ತದಲ್ಲಿ ಕೆಲವೊಂದನ್ನು ನಂಬಲೇಬೇಕು, ಯಾಕೆಂದರೆ ನಿಮ್ಮ ಮನೆಯ ಶುಭಾ - ಅಶುಭಗಳನ್ನು ತಿಳಿಸುವುದು ಈ ವಾಸ್ತುಗಳು, ಹೌದು ನಿಮ್ಮ ಮನೆಯಲ್ಲಿ ವಾಸ್ತು ಪ್ರಕಾರವೇ ಎಲ್ಲವನ್ನು ಮಾಡುವ ಕ್ರಮವನ್ನು ನೀವು ಪಾಲಿಸಬೇಕು. ನಿಮ್ಮ ಮನೆಯಲ್ಲಿ ನೆಮ್ಮದಿ, ಸುಖ, ಶಾಂತಿ ನೆಲೆಯಾಗಬೇಕಾದರೆ ಖಂಡಿತ ನಿಮ್ಮ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡಬೇಕು, ಕೆಲವೊಂದನ್ನು ಇಡಬಾರದು.
Updated on:Nov 08, 2022 | 7:35 PM

peacock feather

peacock feather

ಅನೇಕ ಜನ ಮನೆಯಲ್ಲಿ ನವಿಲು ಗರಿಮನೆಯಲ್ಲಿ ಇಡುವುದರಿಂದ ಅನೇಕ ತೊಂದರೆಗಳನ್ನು ಅನುಭವಿಸುತ್ತೀರಾ ಎಂದು ಹೇಳಿದ್ದಾರೆ. ಸರಿಯಾದ ಸ್ಥಳದಲ್ಲಿ ಮನೆಯಲ್ಲಿ ನವಿಲಿನ ಗರಿ ಇಡುವುದು ಶುಭದಾಯಕ ಎಂದು ವಾಸ್ತುತಜ್ಞರು ಹಳಿದ್ದಾರೆ. ಮನೆಯಲ್ಲಿರುವ ಅನೇಕ ಕಷ್ಟಗಳು ಈ ನವಿಲಿನ ಗರಿಯಿಂದ ದೂರವಾಗುತ್ತದೆ. ಮನೆಯಲ್ಲಿ ನಿರಂತರ ಜಗಳ, ಕಲಹಗಳು ಇದ್ದರೆ ಅದನ್ನು ನವಿಲುಗರಿ ದೂರ ಮಾಡುತ್ತದೆಯಂತೆ.

ನಿಮ್ಮ ಮನೆಯ ಸಂಪತ್ತು ಮತ್ತು ಹಣಕ್ಕಾಗಿ ನವಿಲುಗರಿಯನ್ನು ಈ ಭಾಗದಲ್ಲಿ ಇಡಬೇಕು ಎಂದು ತಜ್ಞರು ಹೇಳಿದ್ದಾರೆ. ಮನೆಯಲ್ಲಿ ಲಕ್ಷ್ಮೀ ಇರುವ ಸ್ಥಳದಲ್ಲಿ ಅಂದರೆ ದೇವರ ಮನೆಯಲ್ಲಿ ಇಡಬಹುದು. ನಿಮ್ಮ ಮನೆಯಲ್ಲಿ ಹಣ ಇಡುವ ಸ್ಥಳದಲ್ಲಿ ಈ ನವಿಲು ಗರಿಯನ್ನು ಇಡಬಹುದು. ನವಿಲು ಗರಿಗಳು ಮನೆಗೆ ಸಂಪತ್ತನ್ನು ನೀಡುತ್ತದೆ. ಪೂಜೆಯ ಪೀಠದ ಮೇಲೆ ನವಿಲುಗರಿಗಳನ್ನು ಇಡುವುದರಿಂದ ಅನಗತ್ಯ ಖರ್ಚುಗಳು ಕಡಿಮೆಯಾಗುತ್ತವಂತೆ.

ನವಿಲು ಗರಿಯನ್ನು ರೇಷ್ಮೆ ಬಟ್ಟೆಯಲ್ಲಿ ಬೀರುವಿನ ಹಣ ಶೇಖರಿಸುವ ಜಾಗದಲ್ಲಿ ಇಡುವುದರಿಂದ ಧನಲಾಭ ಹೆಚ್ಚಾಗುತ್ತದೆ. ಹಾಗೆಯೇ ಕಾಳಸರ್ಪ ದೋಷವಿದ್ದರೆ ಮನೆಯಲ್ಲಿ ನವಿಲು ಗರಿ ಇಡುವುದರಿಂದ ದೋಷ ಕಡಿಮೆಯಾಗುತ್ತದೆ.

ನಿಮ್ಮ ಮನೆಯ ದಕ್ಷಿಣ ದಿಕ್ಕಿನಲ್ಲಿ ನವಿಲು ಗರಿಯನ್ನು ಇರಿಸಿ. ಇದರಿಂದ ಮನೆಯಲ್ಲಿ ಆನಂದ, ಸುಖ ಶಾಂತಿ ನೆಲೆಸಲಿದೆ. ಈ ದಿಕ್ಕಿನಲ್ಲ ಇಟ್ಟರೆ ಕುಟುಂಬದಲ್ಲಿ ಸಂಪತ್ತು ಹೆಚ್ಚುತ್ತದೆ. ಹೀಗಾಗಿ, ಮನೆಯ ದಕ್ಷಿಣ ದಿಕ್ಕಿನಲ್ಲಿ ನವಿಲು ಗರಿಯನ್ನು ಇಡಬಹುದು.
Published On - 7:26 pm, Tue, 8 November 22




