ಹೃದಯಗಳೋ ಹೃದಯಗಳು: ಖುಷಿಯಲ್ಲಿ ವಿಜಯಲಕ್ಷ್ಮಿ ದರ್ಶನ್

Updated on: Jan 30, 2025 | 11:00 PM

Vijayalakshmi Darshan: ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಗೆ ಜಾಮೀನು ದೊರೆತ ಬಳಿಕ ವಿಜಯಲಕ್ಷ್ಮಿ ದರ್ಶನ್ ಖುಷಿಯಾಗಿದ್ದಾರೆ. ದರ್ಶನ್ ಜೈಲಿನಲ್ಲಿದ್ದಾಗ ಸಾಮಾಜಿಕ ಜಾಲತಾಣದಿಂದ ಬಹುತೇಕ ದೂರವೇ ಉಳಿದಿದ್ದರು ವಿಜಯಲಕ್ಷ್ಮಿ. ಯಾವುದೇ ಖುಷಿಯ ಪೋಸ್ಟ್​ಗಳನ್ನು ವಿಜಯಲಕ್ಷ್ಮಿ ಆಗ ಹಂಚಿಕೊಳ್ಳುತ್ತಿರಲಿಲ್ಲ. ಆದರೆ ಈಗ ಒಂದರ ಹಿಂದೊಂದು ಪೋಸ್ಟ್​ ಶೇರ್ ಮಾಡುತ್ತಿದ್ದಾರೆ.

1 / 5
ವಿಜಯಲಕ್ಷ್ಮಿ ದರ್ಶನ್ ಖುಷಿಯಾಗಿದ್ದಾರೆ. ದರ್ಶನ್ ಜಾಮೀನಿನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿರುವ ವಿಜಯಲಕ್ಷ್ಮಿ ನಿಯಮಿತವಾಗಿ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ.

ವಿಜಯಲಕ್ಷ್ಮಿ ದರ್ಶನ್ ಖುಷಿಯಾಗಿದ್ದಾರೆ. ದರ್ಶನ್ ಜಾಮೀನಿನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿರುವ ವಿಜಯಲಕ್ಷ್ಮಿ ನಿಯಮಿತವಾಗಿ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ.

2 / 5

ಇದೀಗ ನಟಿ ವಿಜಯಲಕ್ಷ್ಮಿ ಇನ್​ಸ್ಟಾಗ್ರಾಂನಲ್ಲಿ ಕೆಲ ಫೋಟೊಗಳನ್ನು ಹಂಚಿಕೊಂಡಿದ್ದು, ಫೋಟೊನಲ್ಲಿ ಹೃದಯದಾಕಾರದ ಬಲೂನುಗಳೇ ತುಂಬಿವೆ. ವಿಜಯಲಕ್ಷ್ಮಿ ಸಹ ಖುಷಿಯಿಂದ ಫೋಟೊಕ್ಕೆ ಫೋಸು ನೀಡಿದ್ದಾರೆ.

3 / 5

ಸದ್ಯ ದರ್ಶನ್ ಜೊತೆ ಕಾಲ ಕಳೆಯುತ್ತಿರುವ ವಿಜಯಲಕ್ಷ್ಮಿ, ದರ್ಶನ್ ಜೊತೆ ಪ್ರತಿ ಕ್ಷಣ ಎಂಜಾಯ್ ಮಾಡ್ತಿರುವಂತಿದೆ. ಇತ್ತೀಚೆಗೆ ಖುಷಿಯ ಇನ್​ಸ್ಟಾಗ್ರಾಂ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

4 / 5

ದರ್ಶನ್ ಜೈಲಿನಲ್ಲಿದ್ದಾಗ ಸಾಮಾಜಿಕ ಜಾಲತಾಣದಿಂದ ಬಹುತೇಕ ದೂರವೇ ಉಳಿದಿದ್ದರು ವಿಜಯಲಕ್ಷ್ಮಿ. ಯಾವುದೇ ಖುಷಿಯ ಪೋಸ್ಟ್​ಗಳನ್ನು ವಿಜಯಲಕ್ಷ್ಮಿ ಆಗ ಹಂಚಿಕೊಳ್ಳುತ್ತಿರಲಿಲ್ಲ. ಆದರೆ ಈಗ ಒಂದರ ಹಿಂದೊಂದು ಪೋಸ್ಟ್​ ಶೇರ್ ಮಾಡುತ್ತಿದ್ದಾರೆ.

5 / 5

ದರ್ಶನ್ ಪ್ರಸ್ತುತ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದು, ವಿಜಯಲಕ್ಷ್ಮಿ ಅವರ ಜೊತೆಗೆ ವಾಸಿಸುತ್ತಿದ್ದಾರೆ. ಇನ್ನು ಅವರ ಪ್ರೇಯಸಿ ಪವಿತ್ರಾ ಗೌಡ ಅವರು ದೆಹಲಿಗೆ ಹೋಗಿದ್ದು, ತಮ್ಮ ಉದ್ಯಮವನ್ನು ಮರು ಪ್ರಾರಂಭಿಸುವ ಪ್ರಯತ್ನದಲ್ಲಿದ್ದಾರೆ.

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us