AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿವೃತ್ತಿಯಿಂದ ಹಿಂದೆ ಸರಿದು ಕುಸ್ತಿ ಅಖಾಡಕ್ಕಿಳಿಯಲು ಸಜ್ಜಾದ ವಿನೇಶ್ ಫೋಗಟ್

Vinesh Phogat comeback: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತೂಕದ ಕಾರಣ ಪದಕ ಕಳೆದುಕೊಂಡು ನಿವೃತ್ತಿ ಘೋಷಿಸಿದ್ದ ಕುಸ್ತಿಪಟು ವಿನೇಶ್ ಫೋಗಟ್ ಈಗ ತನ್ನ ನಿರ್ಧಾರ ಬದಲಿಸಿದ್ದಾರೆ. "ನನ್ನೊಳಗಿನ ಬೆಂಕಿ ಆರಿಲ್ಲ" ಎಂದಿರುವ ವಿನೇಶ್, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುವುದಾಗಿ ಘೋಷಿಸಿದ್ದಾರೆ. ಪದಕದ ಕನಸಿನೊಂದಿಗೆ ಮತ್ತೆ ಅಖಾಡಕ್ಕಿಳಿಯಲು ಅವರು ಸಜ್ಜಾಗಿದ್ದಾರೆ.

ಪೃಥ್ವಿಶಂಕರ
|

Updated on: Dec 12, 2025 | 2:59 PM

Share
ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ತೂಕದ ವಿಚಾರದಿಂದಾಗಿ ಪದಕ ವಂಚಿತರಾಗಿದ್ದ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಇದ್ದಕ್ಕಿದ್ದಂತೆ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು. ಕೂದಲೆಳೆ ಅಂತರದಲ್ಲಿ ಪದಕ ವಂಚಿತರಾದ ನಿರಾಶೆಯಿಂದ ಈ ಆಘಾತಕ್ಕಾರಿ ನಿರ್ಧಾರ ತೆಗೆದುಕೊಂಡಿದ್ದ ವಿನೇಶ್ ಫೋಗಟ್ ಇದೀಗ ತಮ್ಮ ನಿರ್ಧಾರವನ್ನು ಬದಲಿಸಿದ್ದು, ಮತ್ತೊಮ್ಮೆ ಕುಸ್ತಿ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ.

1 / 6
ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂತೆಗೆದುಕೊಂಡಿರುವುದಾಗಿ ಹೇಳಿಕೆ ನೀಡಿರುವ ವಿನೇಶ್ ಫೋಗಟ್, ತನ್ನ ಗಮನ ಏನಿದ್ದರೂ 2028 ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್‌ ಒಲಿಂಪಿಕ್ಸ್ ಮೇಲೆ ಇರಲಿದೆ ಎಂದಿದ್ದಾರೆ. ವಾಸ್ತವವಾಗಿ ಇದೇ ವರ್ಷದ ಆಗಸ್ಟ್‌ನಲ್ಲಿ ಕ್ರೀಡೆಯಿಂದ ದೂರ ಸರಿದು ರಾಜಕೀಯಕ್ಕೆ ಪ್ರವೇಶಿಸಿದ್ದ ವಿನೇಶ್ ಫೋಗಟ್, ಇದೀಗ ಮತ್ತೊಮ್ಮೆ ಕಣಕ್ಕೆ ಇಳಿಯಲು ಸಿದ್ಧರಾಗಿದ್ದಾರೆ.

2 / 6
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿರುವ ವಿನೇಶ್ ಫೋಗಟ್, ‘ಜನರು ಪ್ಯಾರಿಸ್ ಒಲಿಂಪಿಕ್ಸ್​ ನನ್ನ ಕೊನೆಯ ಪ್ರವಾಸವೇ ಎಂದು ನನ್ನನ್ನು ಆಗಾಗ್ಗೆ ಕೇಳುತ್ತಾರೆ? ಆ ಪ್ರಶ್ನೆಗೆ ನನ್ನಲ್ಲಿ ಬಹಳ ಸಮಯದಿಂದ ಉತ್ತರವಿರಲಿಲ್ಲ. ನಾನು ಅಖಾಡ, ಒತ್ತಡ, ನಿರೀಕ್ಷೆಗಳು ಮತ್ತು ನನ್ನ ಕನಸುಗಳಿಂದ ದೂರ ಸರಿಯಬೇಕಾಯಿತು. ವರ್ಷಗಳಲ್ಲಿ ಮೊದಲ ಬಾರಿಗೆ, ನಾನು ನೆಮ್ಮದಿಯ ನಿಟ್ಟುಸಿರು ಬಿಟ್ಟೆ.

3 / 6
ನನ್ನ ಕೆಲಸದ ಹೊರೆ, ಜೀವನದ ಏರಿಳಿತಗಳು, ತ್ಯಾಗಗಳು, ಜಗತ್ತು ಎಂದಿಗೂ ನೋಡದ ನನ್ನ ಮತ್ತೊಂದು ಮಜಲನ್ನು ಅರ್ಥಮಾಡಿಕೊಳ್ಳಲು ನಾನು ಸ್ವಲ್ಪ ಸಮಯ ತೆಗೆದುಕೊಂಡೆ. ನಾನು ಇನ್ನೂ ಕ್ರೀಡೆಯನ್ನು ಪ್ರೀತಿಸುತ್ತೇನೆ. ನಾನು ಇನ್ನೂ ಸ್ಪರ್ಧಿಸಲು ಬಯಸುತ್ತೇನೆ. ಮೌನದಲ್ಲಿ, ನಾನು ಮರೆತಿದ್ದ ಒಂದು ವಿಷಯವನ್ನು ನಾನು ಕಂಡುಕೊಂಡೆ. ‘ಬೆಂಕಿ ಎಂದಿಗೂ ಆರುವುದಿಲ್ಲ.' ಅದು ಆಯಾಸ ಮತ್ತು ಶಬ್ದದ ಕೆಳಗೆ ಹೂತುಹೋಗಿತ್ತು.

4 / 6
ಶಿಸ್ತು, ದಿನಚರಿ, ಹೋರಾಟ... ಅದು ನನ್ನ ಬದುಕಿನಲ್ಲಿ ಬೇರೂರಿದೆ. ನಾನು ಎಷ್ಟೇ ದೂರ ಹೋದರೂ, ನನ್ನ ಒಂದು ಭಾಗವು ಅಖಾಡದ ಮೇಲೆಯೇ ಉಳಿದಿದೆ. ಹಾಗಾಗಿ ಇಲ್ಲಿ ನಾನು, ನಿರ್ಭೀತ ಹೃದಯ ಮತ್ತು ಯಾರಿಗೂ ಬಗ್ಗದ ಮನೋಭಾವದೊಂದಿಗೆ 2028 ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್‌ ಒಲಿಂಪಿಕ್ಸ್​ನಲ್ಲಿ ಭಾಗವಹಿಸಲು ತಯಾರಿ ನಡೆಸಲಿದ್ದೇನೆ. ಈ ಬಾರಿ ನನ್ನ ಬೆಂಬಲಕ್ಕೆ ನನ್ನ ಮಗ ಕೂಡ ಇರುತ್ತಾನೆ ಎಂದು ಬರೆದುಕೊಂಡಿದ್ದಾರೆ.

5 / 6
ವಾಸ್ತವವಾಗಿ ಪ್ಯಾರಿಸ್ ಒಲಿಂಪಿಕ್ಸ್ ವಿನೇಶ್ ಫೋಗಟ್​ಗೆ ದುಃಸ್ವಪ್ನವಾಗಿ ಕಾಡಿತ್ತು. ವಿನೇಶ್ ಮಹಿಳೆಯರ 50 ಕೆಜಿ ವಿಭಾಗದಲ್ಲಿ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಆದಾಗ್ಯೂ, ಫೈನಲ್‌ಗೆ ಕೆಲವೇ ಗಂಟೆಗಳ ಮೊದಲು, ಅವರು ಅಧಿಕ ತೂಕ ಹೊಂದಿರುವುದು ಪತ್ತೆಯಾದ್ದರಿಂದ ಅವರನ್ನು ಅನರ್ಹಗೊಳಿಸಲಾಯಿತು. ಇದರ ಪರಿಣಾಮವಾಗಿ ಅವರಿಗೆ ಧಕ್ಕಬೇಕಿದ್ದ ಪದಕ ಸಿಗಲಿಲ್ಲ. ವಿನೇಶ್ ಈ ಹಿಂದೆ ರಿಯೊ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು, ಆದರೆ ಪದಕ ಗೆಲ್ಲಲು ವಿಫಲರಾಗಿದ್ದರು.

6 / 6
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!

ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್

ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​

ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?

ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?

‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ

ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್

ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ

ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!

ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್