Updated on: May 13, 2021 | 8:07 AM
ಕೋವಿಡ್ -19 ರ ಭೀಕರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದೇಣಿಗೆ ನೀಡುವಾಗ ಇತರರಿಂದಲೂ ದೇಣಿಗೆ ಸಂಗ್ರಹಿಸುವುದಾಗಿ ಪ್ರತಿಜ್ಞೆ ಮಾಡಿದ್ದರು. ಭಾರತದಲ್ಲಿ ಕೊರೊನಾ ಪರಿಹಾರ ಕಾರ್ಯಗಳಿಗಾಗಿ ಬುಧವಾರದವರೆಗೆ ಹಣ ಸಂಗ್ರಹಿಸುವ ಅಭಿಯಾನದಲ್ಲಿ ಇಬ್ಬರೂ ಸುಮಾರು 11 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ.
ಕೊಹ್ಲಿ ಮತ್ತು ಅನುಷ್ಕಾ ವೈಯಕ್ತಿಕವಾಗಿ ಎರಡು ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ಈ ಅಭಿಯಾನದಿಂದ ಸಂಗ್ರಹಿಸಿದ ಹಣವನ್ನು ಕೊರೊನಾ ಪರಿಹಾರ ಕಾರ್ಯಗಳಿಗೆ ನೀಡಲಾಗುವುದು.
ಆರಂಭದಲ್ಲಿ, ಕೆಟೊ ಅಡಿಯಲ್ಲಿ ಏಳು ಕೋಟಿ ರೂಪಾಯಿಗಳನ್ನು ಸಂಗ್ರಹಿಸುವುದು ಅವರ ಗುರಿಯಾಗಿತ್ತು, ಆದರೆ ಅದಕ್ಕಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಲಾಗಿದೆ. ಎಂಪಿಎಲ್ ಸ್ಪೋರ್ಟ್ಸ್ ಫೌಂಡೇಶನ್ ಸಹ ಐದು ಕೋಟಿ ರೂಪಾಯಿಗಳನ್ನು ನೀಡಿದೆ.
ಎರಡು ವರ್ಷಗಳಲ್ಲಿ ಇಬ್ಬರೂ ಒಟ್ಟು ಕೊರೊನಾ ಪರಿಹಾರ ಕಾರ್ಯಕ್ಕೆ 5 ಕೋಟಿ ರೂ. ನೀಡಿದ್ದಾರೆ. ಈ ಸಾಂಕ್ರಾಮಿಕ ರೋಗದ ವಿರುದ್ಧದ ಮೊದಲ ಅಲೆಯಲ್ಲಿ ಕೊಹ್ಲಿ ಮತ್ತು ಅನುಷ್ಕಾ 3 ಕೋಟಿ ರೂ. ನೀಡಿದ್ದರು. ಅದೇ ಸಮಯದಲ್ಲಿ, ಈ ಇಬ್ಬರು ಸಾಂಕ್ರಾಮಿಕ ರೋಗದ ವಿರುದ್ಧ ಎರಡನೇ ಅಲೆಯಲ್ಲಿ ಸಹಾಯ ಮಾಡಲು ಎರಡು ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಈ ಸಹಾಯವನ್ನು ಘೋಷಿಸುವಾಗ, ಕೊಹ್ಲಿ, ನಮ್ಮ ದೇಶವು ಈ ಸಮಯದಲ್ಲಿ ಕಠಿಣ ಹಂತವನ್ನು ಎದುರಿಸುತ್ತಿದೆ. ನಮ್ಮ ದೇಶವು ನಮ್ಮೆಲ್ಲರನ್ನೂ ಒಂದುಗೂಡಿಸಬೇಕು ಮತ್ತು ಹೆಚ್ಚು ಹೆಚ್ಚು ಜನರ ಪ್ರಾಣವನ್ನು ಉಳಿಸಬೇಕಾಗಿದೆ ಎಂದಿದ್ದರು.