- Kannada News Photo gallery Water apple Health Benefits Why You Should Eat Water Apple Nutritionist Explains
Water Apple: ಹಿತ್ತಲಲ್ಲಿರುವ ನೀರು ಸೇಬು ಹಣ್ಣನ್ನು ನಿರ್ಲಕ್ಷ್ಯಿಸಬೇಡಿ!
ನೀರು ಸೇಬು ತೆಳ್ಳಗಿನ ಸಿಪ್ಪೆಯನ್ನು ಹೊಂದಿರುವ ಸಣ್ಣ ಹಣ್ಣಾಗಿದ್ದು ಕಡು ಗುಲಾಬಿ ಅಥವಾ ಬಿಳಿ ಬಣ್ಣದಲ್ಲಿರುತ್ತದೆ. ನೀರಿನ ಸೇಬು ಹಣ್ಣುಗಳು ಹೆಚ್ಚಿನ ನೀರಿನ ಅಂಶವನ್ನು ಹೊಂದಿರುತ್ತವೆ. ಇದು ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಹಳ್ಳಿಗಳಲ್ಲಿ ಹಲವರ ಮನೆಯ ಅಂಗಳ, ತೋಟದಲ್ಲಿರುವ ಈ ಹಣ್ಣುಗಳ ಪ್ರಯೋಜನಗಳ ಬಗ್ಗೆ ವಿವರ ಇಲ್ಲಿದೆ.
Updated on: Oct 02, 2023 | 12:29 PM

ನೀರು ಸೇಬು, ಜಂಬು ನೇರಳೆ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುವ ಸಣ್ಣ ಸಣ್ಣ ಹಣ್ಣುಗಳು ನಿಮ್ಮ ತೋಟದಲ್ಲೋ, ಮನೆಯಲ್ಲೋ ಇರಬಹುದು. ಗೊಂಚಲು ಗೊಂಚಲಾಗಿ ಬಿಡುವ ಈ ಹಣ್ಣುಗಳಲ್ಲಿ ನೀರಿನಂಶ ಹೆಚ್ಚಾಗಿರುತ್ತದೆ.

ನೀರು ಸೇಬು ಹಣ್ಣನ್ನು ಸಿಜಿಜಿಯಮ್ ಅಕ್ವಿಯಮ್ ಎಂದೂ ಕರೆಯಲ್ಪಡುತ್ತದೆ. ಇದು ಆಗ್ನೇಯ ಏಷ್ಯಾದ ಉಷ್ಣವಲಯದ ಹಣ್ಣು. ಇದು ತೆಳ್ಳಗಿನ ಸಿಪ್ಪೆಯನ್ನು ಹೊಂದಿರುವ ಸಣ್ಣ ಹಣ್ಣಾಗಿದ್ದು ಕಡು ಗುಲಾಬಿ ಅಥವಾ ಬಿಳಿ ಬಣ್ಣದಲ್ಲಿರುತ್ತದೆ. ನಮ್ಮ ಆರೋಗ್ಯಕ್ಕೆ ನೀರಿನ ಸೇಬು ಎಷ್ಟು ಒಳ್ಳೆಯದು ಎಂಬ ಬಗ್ಗೆ ಪೌಷ್ಟಿಕತಜ್ಞೆ ಲೊವ್ನೀತ್ ಬಾತ್ರಾ ಮಾಹಿತಿ ನೀಡಿದ್ದಾರೆ.

ನೀರಿನ ಸೇಬು ಹಣ್ಣುಗಳು ಹೆಚ್ಚಿನ ನೀರಿನ ಅಂಶವನ್ನು ಹೊಂದಿರುತ್ತವೆ. ಇದು ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ಬೇಸಿಗೆಯಲ್ಲಿ ಅಥವಾ ದೈಹಿಕ ಚಟುವಟಿಕೆ ಹೆಚ್ಚಾಗಿರುವ ಸಂದರ್ಭದಲ್ಲಿ ಈ ಹಣ್ಣುಗಳನ್ನು ಮರೆಯದೆ ಸೇವಿಸಿ.

ಈ ಹಣ್ಣುಗಳಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಹೇರಳವಾಗಿರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯಕರ ಚರ್ಮವನ್ನು ನೀಡುತ್ತದೆ.

ನೀರು ಸೇಬುಗಳಲ್ಲಿ ಫ್ಲೇವನಾಯ್ಡ್ಗಳು ಮುಂತಾದ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ದೇಹವನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನೀರು ಸೇಬಿನಲ್ಲಿರುವ ಹೆಚ್ಚಿನ ಫೈಬರ್ ಅಂಶವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ತಡೆಯುತ್ತದೆ.

ನೀರು ಸೇಬಿನಲ್ಲಿರುವ ಪೊಟ್ಯಾಸಿಯಮ್ ಅಂಶವು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಈ ಹಣ್ಣಿನಲ್ಲಿರುವ ಹೆಚ್ಚಿನ ನೀರಿನಂಶ ಮತ್ತು ಫೈಬರ್ ಅಂಶದಿಂದಾಗಿ ನೀರಿನ ಸೇಬುಗಳು ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ.

ನೀರು ಸೇಬುಗಳು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನೀರು ಸೇಬು ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಲ್ಲಿನ ಹುಳುಕು ಮತ್ತು ಒಸಡು ಕಾಯಿಲೆಯಂತಹ ಹಲ್ಲಿನ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ನೀರು ಸೇಬು ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶಗಳನ್ನು ಹೊಂದಿರುತ್ತದೆ. ಇದು ಮಾಲಿನ್ಯಕಾರಕಗಳು ಮತ್ತು ವಿಷಕಾರಿ ರಾಸಾಯನಿಕಗಳಿಂದ ದೇಹವನ್ನು ತಡೆಯುತ್ತದೆ.

ನೀರಿನ ಸೇಬಿನಲ್ಲಿರುವ ಅತ್ಯಲ್ಪ ಪ್ರಮಾಣದ ಸೋಡಿಯಂ ಮತ್ತು ಕೊಲೆಸ್ಟ್ರಾಲ್ ಪಾರ್ಶ್ವವಾಯು ಮತ್ತು ಆರೋಗ್ಯದ ಕಾಯಿಲೆಗಳಾದ ಉರಿಯೂತ, ಆಕ್ಸಿಡೇಟಿವ್ ಹಾನಿ, ಹೃದಯದ ಸಮಸ್ಯೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.




