ಸ್ಟ್ರೆಸ್​ ಬಾಲ್ ನಿಜಕ್ಕೂ ನಿಮ್ಮ ಒತ್ತಡ ನಿಯಂತ್ರಣಕ್ಕೆ ಸಹಕಾರಿಯೇ?

|

Updated on: Sep 23, 2023 | 11:41 AM

ಸ್ಟ್ರೆಸ್ ಬಾಲ್ ಬಳಸುವುದರಿಂದ ಏಕಾಗ್ರತೆ ಮತ್ತು ಗಮನವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸ್ಟ್ರೆಸ್ ಬಾಲ್ ಅನ್ನು ನಿಯಮಿತವಾಗಿ ಬಳಸುವುದರಿಂದ ಕೈ ಮತ್ತು ತೋಳಿನ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಸ್ಟ್ರೆಸ್ ಬಾಲ್ ಬಳಸುವುದರಿಂದ ನಿಜವಾಗಿಯೂ ಒತ್ತಡ ಕಂಟ್ರೋಲ್ ಆಗುತ್ತಾ?

1 / 10
ಒತ್ತಡವನ್ನು ನಿಯಂತ್ರಿಸಿಕೊಳ್ಳಲು ಕೆಲವು ಡಾಕ್ಟರ್ ಸ್ಟ್ರೆಸ್ ಬಾಲ್ ಬಳಸಬೇಕೆಂದು ಸಲಹೆ ನೀಡುತ್ತಾರೆ. ತಾತ್ಕಾಲಿಕ ಒತ್ತಡ ಮತ್ತು ಉದ್ವೇಗವನ್ನು ನಿರ್ವಹಿಸಲು ಈ ಬಾಲ್ ಅನ್ನು ಬಳಸಲಾಗುತ್ತದೆ.

2 / 10
ಸ್ಟ್ರೆಸ್ ಬಾಲ್ ಮೃದುವಾದ, ಸುಲಭವಾಗಿ ಸ್ಕ್ವೀಝ್ ಮಾಡುವ ವಸ್ತುವಾಗಿದ್ದು, ಒತ್ತಡ, ಉದ್ವೇಗವನ್ನು ನಿರ್ವಹಿಸುತ್ತದೆ. ಹಾಗಾದರೆ, ಈ ಸ್ಟ್ರೆಸ್ ಬಾಲ್​ಗಳು ಪರಿಣಾಮಕಾರಿಯೇ?

3 / 10
ಸ್ಟ್ರೆಸ್ ಬಾಲ್​ಗಳ ಪರಿಣಾಮ ಆಯಾ ವ್ಯಕ್ತಿಗಳಲ್ಲಿ ಬದಲಾವಣೆಗಳು ಆಗುತ್ತಿರುತ್ತವೆ. ಒತ್ತಡ ಅಥವಾ ಆತಂಕದ ಆಧಾರವಾಗಿರುವ ಕಾರಣಗಳನ್ನು ಈ ಪರಿಸ್ಥಿತಿಗಳು ಅವಲಂಬಿಸಿರುತ್ತದೆ. ಒತ್ತಡದ ಪರಿಣಾಮ ಕಡಿಮೆಯಾಗಿದ್ದಾಗ ಈ ಸ್ಟ್ರೆಸ್ ಬಾಲ್​ಗಳು ಉಪಯೋಗಕರವಾಗಿರುತ್ತವೆ. ಆದರೆ, ಈ ಪ್ರಮಾಣ ಹೆಚ್ಚಾದಾಗ ಈ ಸ್ಟ್ರೆಸ್ ಬಾಲ್​ನಿಂದ ಹೆಚ್ಚೇನೂ ಉಪಯೋಗವಾಗುವುದಿಲ್ಲ.

4 / 10
ಮೂತ್ರಪಿಂಡ ಅಥವಾ ಮೂತ್ರನಾಳದ ಕಲ್ಲುಗಳಿಗೆ ಲಿಥೊಟ್ರಿಪ್ಸಿ ಕಾರ್ಯವಿಧಾನಗಳ ಸಮಯದಲ್ಲಿ ಬಳಸಿದ ಸ್ಟ್ರೆಸ್ ಬಾಲ್​ಗಳು ರೋಗಿಗಳಲ್ಲಿ ನೋವಿನ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪಾಸಿಟಿವ್ ಪರಿಣಾಮ ಬೀರುತ್ತವೆ.

5 / 10
ಈ ಸ್ಟ್ರೆಸ್ ಬಾಲ್​ಗಳು ಕೆಲವು ಸಂದರ್ಭಗಳಲ್ಲಿ ಆತಂಕ ನಿವಾರಿಸಬಹುದು. ಸ್ಟ್ರೆಸ್ ಬಾಲನ್ನು ಹಿಸುಕುವ ಮೂಲಕ ನೀವು ವಿಶ್ರಾಂತಿ ಪಡೆಯಬಹುದು.

6 / 10
ಸ್ಟ್ರೆಸ್ ಬಾಲ್​ನ ಪ್ರಯೋಜನಗಳು ಹೀಗಿವೆ. ಸ್ಟ್ರೆಸ್ ಬಾಲ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

7 / 10
ಸ್ಟ್ರೆಸ್ ಬಾಲ್ ಅನ್ನು ಪದೇಪದೆ ಹಿಸುಕುವುದರಿಂದ ಮನಸಿಗೆ ವಿಶ್ರಾಂತಿ ನೀಡಬಹುದು ಮತ್ತು ಶಾಂತತೆಯ ಭಾವವನ್ನು ಉತ್ತೇಜಿಸಬಹುದು.

8 / 10
ಸ್ಟ್ರೆಸ್ ಬಾಲ್ ಬಳಸುವುದರಿಂದ ಏಕಾಗ್ರತೆ ಮತ್ತು ಗಮನವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಒತ್ತಡದ ಅಥವಾ ಆತಂಕದ ಕ್ಷಣಗಳಲ್ಲಿ ಇದು ಸಹಕಾರಿಯಾಗಿದೆ.

9 / 10
ಸ್ಟ್ರೆಸ್ ಬಾಲ್ ಅನ್ನು ನಿಯಮಿತವಾಗಿ ಬಳಸುವುದರಿಂದ ಕೈ ಮತ್ತು ತೋಳಿನ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಸಂಧಿವಾತಕ್ಕೆ ಅಥವಾ ದೈಹಿಕ ಚಿಕಿತ್ಸೆಯ ಭಾಗವಾಗಿ ಪ್ರಯೋಜನಕಾರಿಯಾಗಿದೆ.

10 / 10
ಸ್ಟ್ರೆಸ್ ಬಾಲ್ ಅನ್ನು ಹಿಸುಕುವುದು ಸಮಾಧಾನದ ಅಭ್ಯಾಸದ ಒಂದು ರೂಪವಾಗಿ ಕಾರ್ಯ ನಿರ್ವಹಿಸುತ್ತದೆ. ಸ್ಟ್ರೆಸ್ ಬಾಲ್  ಚಿಕ್ಕದಾಗಿರುತ್ತವೆ ಮತ್ತು ಪೋರ್ಟಬಲ್ ಆಗಿರುತ್ತವೆ. ಒತ್ತಡದ ಪರಿಹಾರಕ್ಕಾಗಿ ಅವುಗಳನ್ನು ಪ್ರಯಾಣ ಮಾಡುವಾಗಲೂ ಬಳಸಲು ಸಹಕಾರಿಯಾಗಿದೆ.