AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp: ವಾಟ್ಸ್ಆ್ಯಪ್​ನಲ್ಲಿ ತಪ್ಪಿಯೂ ರೆಡ್ ಹಾರ್ಟ್ ಎಮೋಜಿ ಸೆಂಡ್ ಮಾಡಬೇಡಿ: ಜೈಲಿಗೆ ಹೋಗ್ತಿರಿ ಎಚ್ಚರ

WhatsApp emoji: ನೀವು ಸೌದಿ ಅರೇಬಿಯಾದಲ್ಲಿದ್ದರೆ ಇಲ್ಲಿ ರೆಡ್ ಹಾರ್ಟ್ ವಾಟ್ಸ್ಆ್ಯಪ್ ಎಮೋಜಿಯನ್ನು ಯಾರಿಗೂ ಕಳುಹಿಸಬೇಡಿ. ಅಥವಾ ಕಳಿಸಿದರೆ ನೀವು ಜೈಲಿಗೆ ಹೋಗಬಹುದು. ಸೌದಿ ಅರೇಬಿಯಾದಲ್ಲಿ ಇದು ಅಪರಾಧ. ಅಪ್ಪಿತಪ್ಪಿ ರೆಡ್ ಹಾರ್ಟ್ ಎಮೋಜಿ ಕಳುಹಿಸಿದರೆ ಜೈಲು ಸೇರುವುದು ಖಚಿತ.

Vinay Bhat
|

Updated on:Feb 22, 2022 | 12:36 PM

Share
ವಿಶ್ವದಲ್ಲಿ ಕೋಟಿಗಟ್ಟಲೆ ಬಳಕೆದಾರರನ್ನು ಹೊಂದಿರುವ ವಾಟ್ಸ್ಆ್ಯಪ್​​ನಲ್ಲಿ ಪ್ರತಿಯೊಬ್ಬರು ಎಮೋಜಿಗಳನ್ನು ಬಳಸಿಯೇ ಬಳಸಿರುತ್ತಾರೆ. ವೇಗವಾಗಿ ಓಡುತ್ತಿರುವ ಈ ದುನಿಯಾದಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲು ಮಾತುಗಳ ಬದಲಾಗಿ ಬಹುತೇಕರು ಎಮೋಜಿಗಳನ್ನೇ ಬಳಸುತ್ತಾರೆ. ಪ್ರೀತಿಯನ್ನ ತೋರ್ಪಡಿಸುವಾಗ ಕೆಂಪು ಹೃದಯದ ಎಮೋಜಿಯನ್ನ (Red Heart Emoji) ಕಳುಹಿಸ್ತಾರೆ.

1 / 7
ಆದರೆ, ನೀವು ಸೌದಿ ಅರೇಬಿಯಾದಲ್ಲಿದ್ದರೆ ಇಲ್ಲಿ ರೆಡ್ ಹಾರ್ಟ್ ವಾಟ್ಸ್ಆ್ಯಪ್​​ ಎಮೋಜಿಯನ್ನು ಯಾರಿಗೂ ಕಳುಹಿಸಬೇಡಿ. ಅಥವಾ ಕಳಿಸಿದರೆ ನೀವು ಜೈಲಿಗೆ ಹೋಗಬಹುದು. ಸೌದಿ ಅರೇಬಿಯಾದಲ್ಲಿ ಇದು ಅಪರಾಧ. ಅಪ್ಪಿತಪ್ಪಿ ರೆಡ್ ಹಾರ್ಟ್ ಎಮೋಜಿ ಕಳುಹಿಸಿದರೆ ಜೈಲು ಸೇರುವುದು ಖಚಿತ.

2 / 7
ಸೌದಿ ಅರೇಬಿಯಾದ ಸೈಬರ್ ಕ್ರೈಂ ತಜ್ಞರು ವಾಟ್ಸ್ಆ್ಯಪ್​​ನಲ್ಲಿ ರೆಡ್ ಹಾರ್ಟ್ ಎಮೋಜಿಗಳನ್ನು ಕಳುಹಿಸುವುದರ ವಿರುದ್ಧ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಸೌದಿ ಅರೇಬಿಯಾದ ಕಾನೂನಿನ ಅನ್ವಯ ರೆಡ್ ಹಾರ್ಟ್ ಎಮೋಜಿಯನ್ನು ಕಳುಹಿಸುವವರು ತಪ್ಪಿತಸ್ಥರೆಂದು ಕಂಡುಬಂದರೆ ಎರಡರಿಂದ ಐದು ವರ್ಷಗಳ ಜೈಲು ಶಿಕ್ಷೆಯೊಂದಿಗೆ SAR 100,000 (ಸುಮಾರು 20 ಲಕ್ಷ ರೂ.) ದಂಡವನ್ನು ವಿಧಿಸಬಹುದು ಎಂದು ವರದಿಯಾಗಿದೆ.

3 / 7
ಕಾನೂನಿನ ಪ್ರಕಾರ, "ಆನ್​ಲೈನ್ ಚಾಟ್​ಗಳ ಸಮಯದಲ್ಲಿ ಕೆಲವು ಚಿತ್ರಗಳು ಮತ್ತು ಅಭಿವ್ಯಕ್ತಿಗಳ ಬಳಕೆಯು ಪೀಡಿತ ವ್ಯಕ್ತಿಯು ಮೊಕದ್ದಮೆಯನ್ನು ದಾಖಲಿಸಿದರೆ ಕಿರುಕುಳದ ಅಪರಾಧವಾಗಿ ಬದಲಾಗಬಹುದು." ಅವರ ಒಪ್ಪಿಗೆಯಿಲ್ಲದೆ ಇತರ ಬಳಕೆದಾರರೊಂದಿಗೆ ಅಹಿತಕರ ಅಥವಾ ಅನಗತ್ಯ ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳುವುದರ ವಿರುದ್ಧ ಅವರು ವಾಟ್ಸ್ಆ್ಯಪ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.

4 / 7
ಸಂಭಾಷಣೆಯಲ್ಲಿ ಯಾವುದೇ ರೀತಿಯ ನಿಂದನೆಗಳು ನಡೆದರೆ ಮತ್ತು ಘಟನೆಯನ್ನು ಅಧಿಕಾರಿಗಳಿಗೆ ವರದಿ ಮಾಡಿದರೆ ಮೇಸೇಜ್ ಕಳುಹಿಸುವವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಆರೋಪ ಸಾಬೀತಾದರೆ, ಶಂಕಿತನ ವಿರುದ್ಧ SR100,000 ದಂಡ ಮತ್ತು/ಅಥವಾ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ. ಪುನರಾವರ್ತಿತ ಉಲ್ಲಂಘನೆಯ ಸಂದರ್ಭದಲ್ಲಿ, ದಂಡವು 5 ವರ್ಷಗಳ ಜೈಲು ಜೊತೆಗೆ SR300,000 ವರೆಗೆ ತಲುಪಬಹುದಂತೆ.

5 / 7
ಕಿರುಕುಳ ವಿರೋಧಿ ವ್ಯವಸ್ಥೆಯು ಸ್ವೀಕರಿಸುವವರ ದೇಹದ ಮೇಲೆ ಪರಿಣಾಮ ಬೀರುವ, ಗೌರವ ಅಥವಾ ಆಧುನಿಕ ತಂತ್ರಜ್ಞಾನ ಸೇರಿದಂತೆ ಯಾವುದೇ ವಿಧಾನದ ಮೂಲಕ ಅವನ/ಅವಳ ನಮ್ರತೆಯನ್ನು ಉಲ್ಲಂಘಿಸುವ ಯಾರಿಗಾದರೂ ಲೈಂಗಿಕ ಅರ್ಥವನ್ನು ಹೊಂದಿರುವ ಪ್ರತಿ ಹೇಳಿಕೆ, ಆಕ್ಟ್ ಅಥವಾ ಗೆಸ್ಚರ್ ಅನ್ನು ಒಳಗೊಂಡಿರುತ್ತದೆ ಎಂದು ವರದಿಯು ಉಲ್ಲೇಖಿಸಿದೆ. ಹೀಗಾಗಿ ಕಾನೂನು ಕೆಂಪು ಹೃದಯ ಅಥವಾ ಕೆಂಪು ಹೂವುಗಳ ಎಮೋಟಿಕಾನ್​ಗಳ ಬಳಕೆಯನ್ನು ನಿರ್ಬಂಧಿಸಿದೆ.

6 / 7
ಸದ್ಯದಲ್ಲೇ ವಾಟ್ಸ್ಆ್ಯಪ್​​ಗೆ ಇನ್ನಷ್ಟು ಎಮೋಜಿಗಳ ರಾಶಿ ಬಂದು ಬೀಳಲಿದೆ. ಸದ್ಯ ಹೊಸ ಮಾದರಿಯ ಅನೇಕ ಎಮೋಜಿಗಳು ಪರೀಕ್ಷಾ ಹಂತದಲ್ಲಿದ್ದು ಕೆಲವೇ ತಿಂಗಳುಗಳಲ್ಲಿ ಎಲ್ಲ ಬಳಕೆದಾರರಿಗೆ ಸಿಗಲಿದೆಯಂತೆ.

7 / 7

Published On - 12:05 pm, Tue, 22 February 22

ಶ್ರೇಯಾ ಘೋಷಾಲ್ ಹಾಡಬೇಕಿದ್ದ ಸಾಂಗ್ ಈಗ ಲಹರಿ ಮಹೇಶ್ ಪಾಲಾಯ್ತು
ಶ್ರೇಯಾ ಘೋಷಾಲ್ ಹಾಡಬೇಕಿದ್ದ ಸಾಂಗ್ ಈಗ ಲಹರಿ ಮಹೇಶ್ ಪಾಲಾಯ್ತು
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ