
ನಿಮಗೆ ತಂಬಾಕು ಸೇವನೆಯಿಂದ ಉಂಟಾಗುವ ಹಾನಿಯ ಬಗ್ಗೆ ತಿಳಿದಿರಬಹುದು. ಯಾವುದೇ ಒಂದು ಅಭ್ಯಾಸವನ್ನು ಬಿಡಲು ಕಷ್ಟವಾದಾಗ ಅದನ್ನು'ಚಟ' ಎಂದು ಕರೆಯಲಾಗುತ್ತದೆ. ತಂಬಾಕಿನ ವ್ಯಸನವೂ ಕೂಡ ಪ್ರಪಂಚದಾದ್ಯಂತ ಅನೇಕರನ್ನು ಆವರಿಸಿದೆ. ಎಷ್ಟೇ ಪ್ರಯತ್ನಪಟ್ಟರೂ ಆ ಚಟದಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಹಾಗಾದರೆ ಅದರಲ್ಲಿ ಏನಿದೆ?

ತಂಬಾಕಿನಲ್ಲಿ ನಿಕೋಟಿನ್ ಅಂಶವಿರುತ್ತದೆ. ಇದು ದೇಹಕ್ಕೆ ಹೋಗಿ ಅನೇಕ ರೀತಿಯ ಗಂಭೀರ ಕಾಯಿಲೆಗಳನ್ನು ಉಂಟುಮಾಡುತ್ತದೆ. ನಿಕೋಟಿನ್ ಮೆದುಳಿನಲ್ಲಿ ಡೋಪಮೈನ್ ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ. ಅದು ಜನರಿಗೆ ಒಳ್ಳೆಯ ಭಾವನೆಯನ್ನು ನೀಡುತ್ತದೆ.

ಅಲ್ಲದೆ ಖಿನ್ನತೆಗೆ ಒಳಗಾದವರು ಧೂಮಪಾನ ಮಾಡಲು ಕೂಡ ನಿಕೋಟಿನ್ ಕಾರಣವಾಗಿದೆ. ಇದು ಮೆದುಳಿಗೆ ತಲುಪಲು ಕೇವಲ 10 ಸೆಕೆಂಡುಗಳು ತೆಗೆದುಕೊಳ್ಳುತ್ತದೆ. ಇದರಿಂದ ಅವರಿಗೆ ಉತ್ತಮ ಭಾವನೆಯನ್ನು ನೀಡುತ್ತದೆ. ಹಾಗಾಗಿ ಅವರು ತಂಬಾಕು, ಸಿಗರೇಟ್ ಗಳ ದಾಸರಾಗುತ್ತಾರೆ.

ನೀವು ಪದೇ ಪದೆ ಸಿಗರೇಟ್ ಸೇದುವ ಚಟ ಹೊಂದಿದ್ದರೆ ಅದನ್ನು ನಿಯಂತ್ರಿಸಲು ಮೊದಲು ನಿಮ್ಮ ಮನಸ್ಸಿನಲ್ಲಿ ಉಂಟಾಗುವ ಕಡುಬಯಕೆಗಳನ್ನು ನಿಗ್ರಹಿಸಿ. ನಿಮಗೆ ಆನಂದ ನೀಡುವ ಮತ್ತು ಮನಸ್ಸನ್ನು ನಿಗ್ರಹಿಸುವ ಕೆಲಸದಲ್ಲಿ ಮಗ್ನರಾಗಿ.

ನೀವು ಧೂಮಪಾನವನ್ನು ತ್ಯಜಿಸಲು ಪ್ರಯತ್ನಿಸುತ್ತಿದ್ದರೆ ನಿಮ್ಮ ಕುಟುಂಬ, ಸ್ನೇಹಿತರಿಗೆ ಈ ವಿಷಯ ತಿಳಿಸಿ ಅವರ ಸಹಾಯ ಪಡೆಯಿರಿ. ಅವರು ಹೇಳುವ ಮಾತನ್ನು ಕೇಳಿ ಇದರಿಂದ ನಿಮಗೆ ಮತ್ತಷ್ಟು ಒಳ್ಳೆಯ ಆಲೋಚನೆಗಳು ಬರುತ್ತದೆ.