Ramya: ಮತ್ತೆ ಆಕ್ಟೀವ್ ಮೋಡ್ನಲ್ಲಿ ಪದ್ಮಾವತಿ! ಮಂಡ್ಯ ರಾಜಕಾರಣದಲ್ಲಿ ನಟಿ ರಮ್ಯಾ ಸೆಕೆಂಡ್ ಇನ್ನಿಂಗ್ಸ್ ಆರಂಭಿಸ್ತಾರಾ?
TV9 Web | Updated By: ಸಾಧು ಶ್ರೀನಾಥ್
Updated on:
Feb 15, 2023 | 11:25 AM
Former MP, Actress Ramya: ಈಗ ವಿಧಾನಸಭಾ ಚುನಾವಣೆ ಹತ್ತಿರದಲ್ಲಿದೆ. ಈ ವೇಳೆ ಮತ್ತೆ ರಮ್ಯಾ ತಮ್ಮ ಪೊಲಿಟಿಕಲ್ ಕೆರಿಯರ್ ನ ಶುರು ಮಾಡ್ತಾರೆ ಅನ್ನೋ ಗುಸುಗುಸು ಮಾತು ಕೇಳಿ ಬರ್ತಾಯಿದೆ. ಈ ವೇಳೆ ರಮ್ಯಾ ಸ್ಪರ್ಧೆ ಎಲ್ಲಿಂದ ಮಾಡ್ತಾರೆ? ಎಂಬುದು ಕುತೂಹಲ ಸಹ ಮೂಡಿಸಿದೆ.
1 / 7
ಮತ್ತೆ ರಾಜಕಾರಣದಲ್ಲಿ ರಮ್ಯಾ (Actress Ramya) ಸೆಕೆಂಡ್ ಇನ್ನಿಂಗ್ಸ್ ಆರಂಭಿಸುತ್ತಾರಾ? ಯಾವ ಕ್ಷೇತ್ರದಿಂದ ಪದ್ಮಾವತಿ ಕಣಕ್ಕೆ ಇಳಿಯುತ್ತಾರೆ| ಗೆದ್ದಾಗ ಮಂಡ್ಯದಲ್ಲಿ (Mandya) ಬ್ಯೂಟಿ ಕ್ವೀನ್ ಮಾಡ್ಕೊಂಡ ಎಡವಟ್ಟುಗಳೇನು? ಇವೆಲ್ಲದರ ಕಂಪ್ಲೀಟ್ ಝಲಕ್ ನಿಮ್ಮ ಮುಂದೆ. ರಮ್ಯ ಈ ಹೆಸರು ಕೇಳಿದ್ರೆ ಸಾಕು ಹಣ್ಣಣ್ಣು ಮುದುಕರಿಂದ ಹಿಡಿದು ಪಡ್ಡೆ ಹೈಕಳ ಕಿವಿಯೂ ಒಮ್ಮೊಮ್ಮೆ ನೆಟ್ಟಗಾಗಿ ಬಿಡುತ್ತೆ! ಸ್ಯಾಂಡಲ್ ವುಡ್ ನಲ್ಲಿ ತಮ್ಮ ನಟನೆಯಿಂದಲೇ ಫೇಮಸ್ ಆಗಿದ್ದ ರಮ್ಯಾ ಅವರು ರಾಜಕಿಯಕ್ಕೆ ಎಂಟ್ರಿಯಾಗಿ ಮಂಡ್ಯದಿಂದ ಲೋಕಸಭಾ ಚುನಾವಣೆಗೆ ನಿಂತು ಗೆದ್ದು ಬೀಗಿದ್ದರು. ಹೀಗಿದ್ದ ರಮ್ಯಾ ಲೋಕಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾದ ಬಳಿಕ ಮಂಡ್ಯ ತೊರೆದು ವಿದೇಶಕ್ಕೆ ಹಾರಿದರು. ಆದ್ರೆ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವಾಗಲೇ ಮತ್ತೆ ಪದ್ಮಾವತಿ ಆಕ್ಟೀವ್ ಆಗ್ತಾಯಿದ್ದಾರೆ.. ರಾಜಕೀಯಕ್ಕೆ ಮತ್ತೆ ರಮ್ಯಾ ಎಂಟ್ರಿ ಆಗ್ತಾರೆ ಎಂಬ ಮಾತುಗಳು ಈಗ ಎಲ್ಲೆಡೆ ಕೇಳಿ ಬರ್ತಾಯಿದೆ (Karnataka Assembly Elections 2023).
2 / 7
ಸಿನಿ ಜಗತ್ತಿನಲ್ಲಿ ನಟನೆ ಮೂಲಕ ಖ್ಯಾತರಾಗಿದ್ದ ರಮ್ಯಾ 2013 ರಲ್ಲಿ ರಾಜಕೀಯಕ್ಕೆ ಧುಮುಕುತ್ತಾರೆ.. ಮಂಡ್ಯದಲ್ಲಿ ನಡೆದ ಲೋಕಸಭಾ ಉಪಚುನಾವಣೆಯಿಂದ ತಮ್ಮ ಪೊಲಿಟಿಕಲ್ ಕೆರಿಯರ್ ಶುರು ಮಾಡ್ತಾರೆ.. ಅದೇ ರೀತಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಬೀಗ್ತಾರೆ.. (ವರದಿ: ಸೂರಜ್ ಪ್ರಸಾದ್, ಟಿವಿ 9, ಮಂಡ್ಯ)
3 / 7
ಆದ್ರೆ ಚುನಾವಣೆ ಗೆದ್ದ ಬಳಿಕ ಕೆಲವೊಂದು ಎಡವಟ್ಟನ್ನ ರಮ್ಯಾ ಮಾಡ್ಕೋತಾರೆ.. ಅಂಬರೀಷ್ ರಿಂದ ರಮ್ಯಾ ಅಂತರ ಕಾಯ್ದುಕೊಳ್ತಾರೆ, ಅಂಬರೀಷ್ ಬಣವನ್ನ ರಮ್ಯಾ ಕಡೆಗಣಿಸಿ ತಮ್ಮದೇ ಆದ ಪಟಾಲಂ ಅನ್ನು ಕಟ್ಟಿಕೊಳ್ತಾರೆ. ಇದು ಅಂಬರೀಷ್ ರ ಕೆಂಗಣ್ಣಿಗೆ ಕಾರಣವಾಗುತ್ತೆ. ಎಂಪಿ ಆದರೂ ಚೈಲ್ಡಿಶ್ ನೇಚರ್ ನಿಂದ ರಮ್ಯಾ ಆಚೆ ಬರುವುದಿಲ್ಲ. ಅಕ್ಷರಶಃ ಚಿಕ್ಕಮಕ್ಕಳಂತೆ ಹಾದಿಬೀದಿಯಲ್ಲಿ ಕೈಯಲ್ಲಿ ಬ್ಯಾಟ್ ಹಿಡಿದು ರಮ್ಯಾ ಆಟವಾಡ್ತಾರೆ.
4 / 7
ನರೇಂದ್ರ ಮೋದಿ ಡಿ ಮಾನಿಟೈಸೇಷನ್ ಮಾಡಿ ನೋಟ್ ಬ್ಯಾನ್ ಆದಾಗ ಮಂಡ್ಯದ ಮಾರುಕಟ್ಟೆಗೆ ಬಂದು ಪ್ರಧಾನಿ ವಿರುದ್ದ ಮಾತನಾಡ್ತಾರೆ. ಈ ವೇಳೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿ ತರಕಾರಿ ಮಾರ್ಕೆಟ್ ನಿಂದ ಪರಾರಿ ಆಗ್ತಾರೆ.
5 / 7
ಪಾಕಿಸ್ತಾನ ಸ್ವರ್ಗ ಇದ್ದಂತೆ ಎಂಬ ಹೇಳಿಕೆ ನೀಡಿ ಕಾಂಟ್ರವರ್ಸಿಗೆ ಗುರಿ ಆಗ್ತಾರೆ.. 2014 ರ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ರಮ್ಯಾ ಹೇಳ್ದೆ ಕೇಳ್ದೆ ಮಂಡ್ಯದಲ್ಲಿದ್ದ ತಮ್ಮ ಬಾಡಿಗೆ ಮನೆಯನ್ನ ಖಾಲಿ ಮಾಡ್ಕೊಂಡು ಪರಾರಿ ಆಗ್ತಾರೆ. ಈ ಎಲ್ಲಾ ವಿಚಾರಗಳು ನಟಿ ಕಮ್ ಪೊಲಿಟಿಶಿಯನ್ ರಮ್ಯಾಗೆ ಮುಳುವಾಗಿ ಪರಿಣಮಿಸುತ್ತೆ.
6 / 7
ಮಂಡ್ಯದ ಲೋಕ ಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾದ ಬಳಿಕ ರಮ್ಯಾ ವಿದೇಶಕ್ಕೆ ತೆರಳುತ್ತಾರೆ. ಸಾಕಷ್ಟು ವರ್ಷಗಳ ಕಾಲ ಯಾರ ಸಂಪರ್ಕಕ್ಕೂ ರಮ್ಯಾ ಸಿಗುವುದೇ ಇಲ್ಲ. ರಾಜ್ಯ ಹಾಗೂ ಕೇಂದ್ರ ರಾಜಕಾರಣದಿಂದ ರಮ್ಯಾ ದೂರವೇ ಉಳಿದು ಬಿಡ್ತಾರೆ. ಈ ಎಲ್ಲ ಅಂಶಗಳು ರಾಜಕೀಯ ಪಡಸಾಲೆಯಲ್ಲಿ ಸಾಕಷ್ಟು ಚರ್ಚೆ ಆಗುತ್ತವೆ.
7 / 7
ಇನ್ನು ಈಗ ವಿಧಾನಸಭಾ ಚುನಾವಣೆ ಹತ್ತಿರದಲ್ಲಿದೆ. ಈ ವೇಳೆ ಮತ್ತೆ ರಮ್ಯಾ ತಮ್ಮ ಪೊಲಿಟಿಕಲ್ ಕೆರಿಯರ್ ನ ಶುರು ಮಾಡ್ತಾರೆ ಅನ್ನೋ ಗುಸುಗುಸು ಮಾತು ಕೇಳಿ ಬರ್ತಾಯಿದೆ. ಈ ವೇಳೆ ರಮ್ಯಾ ಸ್ಪರ್ಧೆ ಎಲ್ಲಿಂದ ಮಾಡ್ತಾರೆ? ಎಂಬುದು ಕುತೂಹಲ ಸಹ ಮೂಡಿಸಿದೆ. ಮತ್ತೆ ಮಂಡ್ಯಕ್ಕೆ ರಮ್ಯಾ ಬಂದ್ರೆ ಜನ ಸ್ವಾಗತಿಸುತ್ತಾರಾ... ಇದನ್ನೆಲ್ಲಾ ಕಾದು ನೋಡಬೇಕಿದೆ.