- Kannada News Photo gallery Woman celebrates divorce with unique photoshoot Here is what the Internet thinks
ನನಗೆ 99 ಸಮಸ್ಯೆಗಳಿವೆ, ಆದ್ರೆ ಪತಿ ಇಲ್ಲ: ಡಿವೋರ್ಸ್ ಮಹಿಳೆಯ ಫೋಟೋಶೂಟ್ ವೈರಲ್
ಪ್ರಿ ವೆಡ್ಡಿಂಗ್, ಬೇಬಿ ಶವರ್ ಸೇರಿದಂತೆ ಹಲವು ಫೋಟೋ ಶೂಟ್‌ಗಳು ಇದೀಗ ಟ್ರೆಂಡ್. ಚಿತ್ರ-ವಿಚಿತ್ರ ರೀತಿಯಲ್ಲಿ ಫೋಟೋಶೂಟ್ ಮಾಡಿಕೊಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ. ಆದರೆ ಇಲ್ಲೋರ್ವ ಮಹಿಳೆ ಡಿವೋರ್ಸ್ ಪಡೆದ ಖುಷಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದಾಳೆ. ಅಚ್ಚರಿ ಅನ್ನಿಸಿದರೂ ಸತ್ಯ. ಫೋಟೋಶೂಟ್ನ ಮೂಲ ಉದ್ದೇಶದ ಕಾರಣಕ್ಕಾಗಿಯೇ ವೈರಲ್ ಆಗಿದೆ. ಹಾಗಾದ್ರೆ, ಈ ಡಿವೋರ್ಸ್ ಮಹಿಳೆಯ ಫೋಟೋಶೂಟ್ನ ಮೂಲ ಉದ್ದೇಶ ಎನ್ನುವುದನ್ನು ಈ ಕೆಳಗಿನಂತಿದೆ ನೋಡಿ.
Updated on: May 02, 2023 | 7:50 AM

ವಿಚ್ಚೇದನಕ್ಕೂ ಫೋಟೋ ಶೂಟ್ ಮಾಡಿಸಿಕೊಳ್ಳುವ ಟ್ರೆಂಡ್ ಶುರುವಾಗಿದೆ. ಅದರಂತೆ ಇಲ್ಲಿ ಮಹಿಳೆಯೊಬ್ಬರು ಡಿವೋರ್ಸ್ ಪಡೆದ ಖುಷಿಯಲ್ಲಿ ಫೋಟೋಶೂಟ್ ಮಾಡಿಸಿದ್ದಾಳೆ.

ಮದುವೆ ಫೋಟೋ ಹಿಡಿದು, ಅದರಲ್ಲಿದ್ದ ಮಾಜಿ ಪತಿಯ ಫೋಟೋ ಹರಿಯುತ್ತಾ, ಮದುವೆ ಫೋಟೋವನ್ನು ಕಾಲಿನಿಂದ ತುಳಿಯುವ ಸೇರಿದಂತೆ ವಿವಿಧ ಭಂಗಿಗಳಲ್ಲಿ ಮಹಿಳೆ ಡಿವೋರ್ಟ್ ಫೋಟೋ ಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಕೇವಲ ಫೋಟೋಶೂಟ್ ಅಷ್ಟೇ ಅಲ್ಲ, ನನಗೆ 99 ಸಮಸ್ಯೆಗಳಿವೆ. ಇದರಲ್ಲಿ ಪತಿ ಕೂಡ ಒಂದಾಗಿತ್ತು. ಈ ಸಮಸ್ಯೆಗೆ ಮುಕ್ತಿ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

ಫ್ಯಾಶನ್ ಡಿಸೈನರ್ ಶಾಲಿನಿ ಎನ್ನುವ ಮಹಿಳೆ ರೆಡ್ ಬಣ್ಣದ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾಳೆ.


ಅಲ್ಲದೆ ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!' ಎಂಬ ಫಲಕವನ್ನು ಹಿಡಿದು ಸಂತಸದಿಂದ ಬೀಗುವಂಥ ಫೋಟೋ ಮೂಲಕ 'ಪತಿ ಎಂಬ ಒಂದು ಸಮಸ್ಯೆಯನ್ನು ನಿವಾರಿಸಿಕೊಂಡಿದ್ದೇನೆ' ಎಂಬ ಸಂದೇಶವನ್ನೂ ಈಕೆ ಸಾರಿದ್ದಾಳೆ.

ಅಂದಹಾಗೆ ಫ್ಯಾಷನ್ ಡಿಸೈನರ್ ಹಾಗೂ ನಟಿಯೂ ಆಗಿರುವ ಶಾಲಿನಿ ಎಂಬಾಕೆ ವಿಚ್ಛೇದನ ಪಡೆದಿದ್ದಕ್ಕೆ ಈ ರೀತಿಯ ವಿಶೇಷವಾದ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ತನ್ನ ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಈಕೆ ಅದರಲ್ಲಿ ವಿಚ್ಛೇದಿತ ಮಹಿಳೆಯ ಸಂದೇಶವನ್ನೂ ತಿಳಿಸಿದ್ದಾಳೆ

ಕೆಟ್ಟ ಮದುವೆಯನ್ನು ಮುಂದುವರಿಸಿಕೊಂಡು ಹೋಗುವುದಕ್ಕಿಂತ ಹೊರಬರವುದೇ ಲೇಸು. ನೀವು ಸಂತಸದಿಂದ ಇರಲು ಅರ್ಹರು. ಆದರೆ ಕೊರತೆಯಿಂದ ಜೀವನ ಮುಂದೂಡಬೇಕಿಲ್ಲ. ಬದುಕು ಹಾದಿ ತಪ್ಪಿದಾಗ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಮುಖ್ಯ. ಅದು ನಿಮ್ಮ ಉತ್ತಮ ಭವಿಷ್ಯಕ್ಕಾಗಿ, ಮಕ್ಕಳ ಭವಿಷ್ಯಕ್ಕಾಗಿ ಅವಶ್ಯಕ ಎಂದಿದ್ದಾಳೆ.

ವಿಚ್ಚೇದನ ವೈಫಲ್ಯವಲ್ಲ, ಬದುಕಿನ ತಿರುವು. ಪಾಸಿಟೀವ್ ಬದಲಾವಣೆ ತನ್ನಿ. ಮದುವೆ ಬಂಧನದಿಂದ ಹೊರಬರಲು ಸಾಕಷ್ಟು ಧೈರ್ಯ ಬೇಕು. ಈ ಪೋಸ್ಟ್ ಎಲ್ಲಾ ಧೈರ್ಯವಂತ ಮಹಿಳೆಯರಿಗೆ ಅರ್ಪಣೆ ಎಂದು ಶಾಲಿನಿ ಹೇಳಿಕೊಂಡಿದ್ದಾರೆ.

ಐರಿಸ್ ಫೋಟೋಗ್ರಫಿ ಎನ್ನುವ ಸಂಸ್ಥೆ ಈ ಫೋಟೋಶೂಟ್ ನಡೆಸಿದ್ದು, ವಿಚ್ಛೇದನವನ್ನೂ ಸಂಭ್ರಮಿಸುತ್ತಿರುವ ಈ ಮಹಿಳೆಯ ಫೋಟೋಗಳು ವೈರಲ್ ಆಗಿವೆ. ಶಾಲಿನಿ ಡಿವೋರ್ಸ್ ಬಗ್ಗೆ ಹಲವರು ತಮ್ಮದೇ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಧೈರ್ಯವಾಗಿ ನಿರ್ಧಾರ ತೆಗೆದುಕೊಂಡ ನಿಮಗೆ ಅಭಿನಂದನೆಗಳು ಎಂದು ಹಲವರು ಕಮೆಂಟ್ ಮಾಡಿದ್ದಾರೆ.




