Kannada News Photo gallery World Biriyani Day 2024: There are different varieties of Biryani in India Kannada News
World Biriyani Day 2024: ಭಾರತೀಯರ ಫೇವರೆಟ್ ಫುಡ್ ಲಿಸ್ಟ್ ನಲ್ಲಿ ವೆರೈಟಿ ವೆರೈಟಿ ಬಿರಿಯಾನಿ, ಯಾವುದೆಲ್ಲಾ ಗೊತ್ತಾ?
ಭಾರತೀಯರು ಇಷ್ಟ ಪಟ್ಟು ತಿನ್ನುವ ಆಹಾರಗಳಲ್ಲಿ ಈ ಬಿರಿಯಾನಿ ಕೂಡ ಒಂದು. ಭಾರತ ಸೇರಿದಂತೆ ಇರಾಕ್, ಥೈಲ್ಯಾಂಡ್, ಸಿಂಗಾಪುರ್ ಮತ್ತು ಮಲೇಷಿಯಾ ಹೀಗೆ ಪ್ರಪಂಚದ ವಿವಿಧ ಭಾಗಗಳಲ್ಲಿಯೂ ವಿಭಿನ್ನ ರುಚಿಯಲ್ಲಿ ಘಮ್ ಎನ್ನುವ ಈ ಆಹಾರವು ದೊರೆಯುತ್ತದೆ. ಇಂತಹ ಬಿರಿಯಾನಿಗೂ ಒಂದು ದಿನವಿದ್ದು, ಪ್ರತಿ ವರ್ಷ ಜುಲೈ ತಿಂಗಳ ಮೊದಲ ಭಾನುವಾರವನ್ನು ಪ್ರಪಂಚದಾದ್ಯಂತ ವಿಶ್ವ ಬಿರಿಯಾನಿ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಜುಲೈ 7 ರಂದು ವಿಶ್ವ ಬಿರಿಯಾನಿ ದಿನವನ್ನು ಆಚರಿಸಲಾಗುತ್ತಿದೆ. ಹಾಗಾದ್ರೆ ಭಾರತದಲ್ಲಿ ಸಿಗುವ ರುಚಿಕರ ಬಿರಿಯಾನಿಗಳಾವುವು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.