- Kannada News Photo gallery World Cancer Day 2023: Celebrities raise Awareness about Cancer through their own Experiences
World Cancer Day 2023: ಭರವಸೆಯ ಹೊಂಗಿರಣ; ಕ್ಯಾನ್ಸರ್ ಗೆದ್ದು ಭರವಸೆ ಮೂಡಿಸಿದ ಸೆಲೆಬ್ರಿಟಿಗಳಿವರು
ವಿಶ್ವ ಕ್ಯಾನ್ಸರ್ ದಿನ: ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದು ಬಂದ ಕೆಲವು ಸೆಲೆಬ್ರಿಟಿಗಳು ಕ್ಯಾನ್ಸರ್ ಮತ್ತು ಜನರ ಜೀವನದ ಮೇಲೆ ಅದರ ಪ್ರಭಾವದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
Updated on:Feb 04, 2023 | 2:12 PM

ಕ್ಯಾನ್ಸರ್ನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಲುವಾಗಿ ಪ್ರತಿ ವರ್ಷ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದು ಬಂದ ಕೆಲವು ಸೆಲೆಬ್ರಿಟಿಗಳು ಕ್ಯಾನ್ಸರ್ ಮತ್ತು ಜನರ ಜೀವನದ ಮೇಲೆ ಅದರ ಪ್ರಭಾವದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ಮನಿಷಾ ಕೊಯಿರಾಲಾ: ಅಂಡಾಶಯದ ಕ್ಯಾನ್ಸರ್(Ovarian Cancer) ವಿರುದ್ಧದ ಹೋರಾಟದಲ್ಲಿ ಗೆದ್ದು, ಕ್ಯಾನ್ಸರ್ ನನಗೆ ಹೊಸ ಜೀವನವನ್ನು ಹೇಗೆ ನೀಡಿತು?(How Cancer Gave Me a New Life) ಎಂಬ ಆತ್ಮಚರಿತ್ರೆಯನ್ನು ಬರೆದಿದ್ದಾರೆ. ಈ ಆತ್ಮ ಚರಿತ್ರೆಯೂ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ.

ಸೊನಾಲಿ ಬೇಂದ್ರೆ: 2018 ರಲ್ಲಿ ನಟಿಗೆ ಮೆಟಾಸ್ಟಾಟಿಕ್ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಸ್ತನ ಕ್ಯಾನ್ಸರ್ ದೇಹದ ಇತರ ಭಾಗಗಳಿಗೆ ಹರಡಿದಾಗ, ಅದನ್ನು ಮೆಟಾಸ್ಟಾಟಿಕ್ ಸ್ತನ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ನೀಡಿ ನಟಿ ಕ್ಯಾನ್ಸರ್ ವಿರುದ್ಧ ಗೆದ್ದು ಬಂದಿದ್ದಾರೆ. ಇವರು ತಾನು ಗೆದ್ದು ಬಂದ ಘಟನೆಗಳನ್ನು ಸಮಾಜದ ಮುಂದೆ ಹಂಚಿಕೊಂಡು ಸಾಕಷ್ಟು ಜನರಿಗೆ ಮಾದರಿಯಾಗಿದ್ದಾರೆ.

ತಾಹಿರಾ ಕಶ್ಯಪ್: ಲೇಖಕಿ-ನಿರ್ದೇಶಕಿ ಮತ್ತು ನಟ ಆಯುಷ್ಮಾನ್ ಖುರಾನಾ ಅವರ ಪತ್ನಿ ತಾಹಿರಾ ಕಶ್ಯಪ್ ಅವರಿಗೆ 2018 ರಲ್ಲಿ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಇವರು ಪ್ರಪಂಚದಾದ್ಯಂತ ಇತರ ಮಹಿಳೆಯರಿಗೆ ಸ್ಫೂರ್ತಿ ನೀಡಲು ಸಾಮಾಜಿಕ ಮಾಧ್ಯಮದಲ್ಲಿ ತನ್ನ ಕ್ಯಾನ್ಸರ್ ಅನುಭವವನ್ನು ಹಂಚಿಕೊಂಡು ಕ್ಯಾನ್ಸರ್ ಬಗೆಗೆ ಜಾಗೃತಿ ನೀಡಿದ್ದಾರೆ.

ಯುವರಾಜ್ ಸಿಂಗ್: ಭಾರತದ ಮಾಜಿ ಕ್ರಿಕೆಟಿಗನಿಗೆ 2012 ರಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು ಮತ್ತು ಅಮೇರಿಕಾದಲ್ಲಿ ಚಿಕಿತ್ಸೆ ಪಡೆದು ಕ್ಯಾನ್ಸರ್ ವಿರುದ್ಧ ಗೆದ್ದು ಬಂದಿದ್ದಾರೆ. ಜೊತೆಗೆ ಜನರಲ್ಲಿ ಕ್ಯಾನ್ಸರ್ ಬಗೆಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.

ಲಿಸಾ ರೇ: ಕ್ಯಾನ್ಸರ್ ವಿರುದ್ಧದ ತನ್ನ ಧೈರ್ಯದ ಹೋರಾಟದಿಂದ ಲಿಸಾ ಅನೇಕ ಜನರಿಗೆ ಸ್ಫೂರ್ತಿ ನೀಡಿದ್ದಾಳೆ. 2009 ರಲ್ಲಿ, ಆಕೆಗೆ ಮಲ್ಟಿಪಲ್ ಮೈಲೋಮಾ, ಒಂದು ರೀತಿಯ ರಕ್ತದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ತನ್ನ ಸ್ಪೂರ್ತಿದಾಯಕ ಪ್ರಯಾಣದ ಮೂಲಕ, ಧೈರ್ಯ ಮತ್ತು ದೃಢಸಂಕಲ್ಪದಿಂದ ಕಠಿಣ ಸವಾಲುಗಳನ್ನು ಸಹ ಜಯಿಸಲು ಸಾಧ್ಯ ಎಂದು ಲಿಸಾ ಜಗತ್ತಿಗೆ ತೋರಿಸಿದ್ದಾಳೆ.
Published On - 2:12 pm, Sat, 4 February 23




