- Kannada News Photo gallery World Most Expensive Coffee : This coffee is made from animal faeces, price is very expensive
ಒಂದು ಕಪ್ ಕಾಫಿ ಬೆಲೆ ಬರೋಬ್ಬರಿ ಆರು ಸಾವಿರ ರೂಪಾಯಿಯಂತೆ, ಈ ಕಾಫಿ ಅಷ್ಟೊಂದು ದುಬಾರಿ ಯಾಕೆ?
ಕಾಫಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಹೌದು, ಹೆಚ್ಚಿನವರು ಈ ಟೀ ಕಾಫಿಗೆ ಅಡಿಕ್ಟ್ ಆಗಿಬಿಟ್ಟಿದ್ದಾರೆ. ಕೆಲವರು ಕಾಫಿ ಕುಡಿಯುವುದನ್ನು ಮಾತ್ರ ಯಾವುದೇ ಕಾರಣಕ್ಕೂ ಮಿಸ್ ಮಾಡುವುದೇ ಇಲ್ಲ. ಆದ್ರೆ ವಿಶ್ವದ ದುಬಾರಿ ಬೆಲೆಯ ಕಾಫಿಯ ಬಗ್ಗೆ ನಿಮಗೆ ಗೊತ್ತಾ? ಹೌದು ದುಬಾರಿ ಬೆಲೆ ಬಾಳುವ ಈ ಕಾಫಿಯನ್ನು ತಯಾರಿಸುವ ರೀತಿ ತಿಳಿದ್ರೆ ಅಚ್ಚರಿ ಪಡ್ತೀರಾ. ಹಾಗಾದ್ರೆ ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.
Updated on:May 30, 2025 | 8:12 PM

ಕಾಫಿ ಪ್ರಿಯರು ಯಾರಿಲ್ಲ ಹೇಳಿ? ಹೌದು ಎಷ್ಟೇ ಕೆಲಸದ ಒತ್ತಡವಿರಲಿ, ಒಂದು ಲೋಟ ಕಾಫಿ ಕುಡಿದ್ರೆ ಸಾಕು ಮೂಡ್ ಫ್ರೆಶ್ ಆಗುತ್ತದೆ. ಹೀಗಾಗಿ ಸ್ಟ್ರಾಂಗ್ ಡಿಕಾಶನ್ ಗೆ ಚೆನ್ನಾಗಿ ಕುದಿಸಿದ ಹಾಲನ್ನು ಬೆರೆಸಿ ಕುಡಿದರೆ ಅದರ ಖುಷಿನೇ ಬೇರೆ.

ನೀವು ಫಿಲ್ಟರ್ ಕಾಫಿ, ಬ್ಲ್ಯಾಕ್ ಕಾಫಿ, ಕೋಲ್ಡ್ ಕಾಫಿ ಹೀಗೆ ವಿವಿಧ ಕಾಫಿಯನ್ನು ಸವಿದಿರಬಹುದು.ಆದರೆ ಈ ವಿಶ್ವದ ಈ ದುಬಾರಿ ಕಾಫಿಯನ್ನು ಸವಿಯಲೇಬೇಕು. ವಿಭಿನ್ನ ರುಚಿಯನ್ನು ಹೊಂದಿರುವ ಈ ಕಾಫಿ ಅಷ್ಟೇ ದುಬಾರಿ ಕೂಡ.

ಬೆಲೆಯಷ್ಟೇ ಇದನ್ನು ತಯಾರಿಸುವ ರೀತಿಯೂ ವಿಭಿನ್ನವೆಂದೇ ಹೇಳಬಹುದು. ಇದರ ಕಾಫಿ ಹೆಸರು ಕೊಪಿ ಲುವಾಕ್. ಒಂದು ಕಪ್ ಕಾಫಿ ಖರೀದಿಸಬೇಕೆಂದರೆ ನಿಮ್ಮ ಬಳಿ 6000 ರೂಪಾಯಿ ಇರಲೇಬೇಕು.

ಅಷ್ಟೇ ಅಲ್ಲದೇ ಕೊಪಿ ಲುವಾಕ್ ತಯಾರಿಸುವುದು ಪ್ರಾಣಿಯ ಮಲದಿಂದ ಎನ್ನಲಾಗಿದೆ.ಬೆಕ್ಕಿನಂತೆ ಹೋಲುವ ಪ್ರಾಣಿ ಈ ಸಿವೆಟ್. ಇದು ತಿಂದು ಹೊರಹಾಕಿದ ಕಾಫಿ ಬೀಜಗಳಿಂದ ಈ ಕಾಫಿಯನ್ನು ತಯಾರಿಸಲಾಗುತ್ತದೆ. ಹೀಗಾಗಿ ಈ ಕಾಫಿಯಲ್ಲಿ ಸಿವೆಟ್ ಕಾಫಿ ಎಂದು ಕರೆಯಲಾಗುತ್ತದೆ.

ಇಂಡೋನೇಷ್ಯಾದಿಂದ ಜನಪ್ರಿಯತೆ ಪಡೆದುಕೊಂಡಿರುವ ಈ ಕಾಫಿ ಇಷ್ಟು ಬೆಲೆ ಬರಲು ಮುಖ್ಯ ಕಾರಣವೇ ಇದರ ಉತ್ಪಾದನಾ ವಿಧಾನ. ಹಣ್ಣಾದ ಕಾಫಿ ಬೀಜಗಳನ್ನು ಸೇವಿಸುತ್ತವೆ. ಕೊನೆಗೆ ಅರ್ಧ ಜೀರ್ಣವಾದ ಈ ಕಾಫಿ ಬೀಜಗಳನ್ನು ಈ ಪ್ರಾಣಿ ತನ್ನ ಮಲದ ಮೂಲಕ ಹೊರ ಹಾಕುತ್ತದೆ.

ಈ ಮಲದಿಂದ ಹೊರ ಬಂದ ಈ ಕಾಫಿಬೀಜಗಳಿಂದ ವಿಶ್ವದ ದುಬಾರಿ ಕೊಪಿ ಲುವಾಕ್ ಕಾಫಿಯನ್ನು ತಯಾರಿಸಲಾಗುತ್ತದೆ. ಈ ಕಾಫಿ ತನ್ನ ಪರಿಮಳ ಹಾಗೂ ರುಚಿಯಿಂದಲೇ ಜನಪ್ರಿಯವಾಗಿದೆ.
Published On - 8:10 pm, Fri, 30 May 25




