
ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಮಾರುಕಟ್ಟೆಯ ತುಂಬೆಲ್ಲಾ ಮಾವಿನ ಹಣ್ಣಿನದ್ದೆ ದರ್ಬಾರ್. ಸಹಜವಾಗಿ ಎಲ್ಲರೂ ಕೂಡ ಇಷ್ಟ ಪಟ್ಟು ಸವಿಯುವ ಹಣ್ಣಾದ ಇದರ ರುಚಿ ಎಲ್ಲರೂ ಕೂಡ ಸವಿದೇ ಇರುತ್ತಾರೆ. ಆದರೆ ಮಾವಿನ ಕಾಯಿಯಿಂದ ಹಿಡಿದು ಹಣ್ಣಿನವರೆಗೂ ಎಲ್ಲವನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ.

ವಿವಿಧ ತಳಿಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಮಾವಿನ ಹಣ್ಣು ರುಚಿಯಲ್ಲಿ ಮಾತ್ರ ಒಂದಕ್ಕಿಂತ ಇನ್ನೊಂದನ್ನು ಮೀರಿಸುತ್ತದೆ. ನಮ್ಮ ಭಾರತದಲ್ಲಿ ಬೈಂಗನಪಲ್ಲಿ, ದುಸ್ಸೆಹ್ರಿ, ಅಲ್ಫೊನ್ಸೊ, ಲಾಂಗ್ಡಾ ಸೇರಿ ಅನೇಕ ವಿವಿಧ ತಳಿಯ ಮಾವನ್ನು ಬೆಳೆಯಲಾಗುತ್ತದೆ.

ಆದರೆ ಈ ಮಾವಿನ ಹಣ್ಣು ಮಾತ್ರ ಬಲುದುಬಾರಿಯಂತೆ. ರುಚಿ ಹಾಗೂ ಇದರ ಬಣ್ಣ ದಿಂದಲೇ ಎಲ್ಲರ ಗಮನ ಸೆಳೆಯುತ್ತದೆ. ಬೆಲೆಯಲ್ಲಿ ದುಬಾರಿಯಾದ ಕಾರಣ ಮಧ್ಯಮವರ್ಗದ ಜನರಿಗೆ ಇದನ್ನು ಖರೀದಿಸಿ ರುಚಿ ಸವಿಯುವುದು ಕಷ್ಟ.

ವಿಶ್ವದಲ್ಲೇ ಅತಂತ್ಯ ದುಬಾರಿ ಮಾವು ಎಂದು ಕರೆಸಿಕೊಂಡಿರುವ ಮಾವುಗಳಲ್ಲಿ ಮಿಯಾಝಾಕಿ ಮಾವು. ನೀವೆಲ್ಲಾ ಮಾವಿನ ಹಣ್ಣನ್ನು ಹೊರಗೆ ಹಸಿರು ಇಲ್ಲದಿದ್ದರೆ ಹಳದಿ ಬಣ್ಣದಿರುವುದರಲ್ಲೂ ಆದರೆ ಈ ದುಬಾರಿ ಮಾವು ಬಣ್ಣದ ನೇರಳೆ ಬಣ್ಣದಾಗಿದ್ದು ಹಣ್ಣಾದ ಮೇಲೆ ಕಡುಗೆಂಪು ಬಣ್ಣದಲ್ಲಿರುತ್ತದೆ.

ಜಪಾನ್ನ ಮಿಯಾಝಾಕಿ ಎಂಬ ನಗರದಲ್ಲಿ ಇದನ್ನು ಬೆಳೆಯಲಾಗುತ್ತದೆಯಂತೆ. ಈ ಮಾವನ್ನು ಎಗ್ ಆಫ್ ದಿ ಸನ್ (ಸೂರ್ಯನ ಮೊಟ್ಟೆ) ಎಂದು ಕರೆಯಲಾಗುತ್ತಿದೆ.

ಈ ಮಾವು ವಿಶ್ವದ ದುಬಾರಿ ಮಾವುಗಳಲ್ಲಿ ಮೊದಲ ಸ್ಥಾನದಲ್ಲಿದ್ದು, ಕೆಂಪು ಬಣ್ಣದ ಈ ಮಾವಿನ ಬೆಲೆ ಬರೋಬ್ಬರಿ 2.7 ಲಕ್ಷ ರೂಪಾಯಿಯಂತೆ. ಹೀಗಾಗಿ ಈ ಮಾವಿನ ಬೆಲೆ ವಜ್ರಕ್ಕಿಂತಲೂ ದುಬಾರಿ ಎನ್ನಲಾಗಿದೆ.