
ಬೆಂಗಳೂರಿನ ಅರಮನೆ : ನೀವು ಫೋಟೋ ಶೂಟ್ ಮಾಡಿಸಲು ಬಯಸಿದರೆ ಬೆಂಗಳೂರು ಅರಮನೆಯು ಉತ್ತಮ ಆಯ್ಕೆ ಎನ್ನಬಹುದು. ಅದರಲ್ಲಿ ವೆಡ್ಡಿಂಗ್ ಫೋಟೋ ಶೂಟ್ ಗಳಿಗೆ ಈ ತಾಣವನ್ನು ಆಯ್ಕೆ ಮಾಡಿಕೊಳ್ಳಬಹುದು. ಹಚ್ಚ ಹಸಿರಿನಉದ್ಯಾನಗಳು, ರಾಯಲ್ ಆಗಿರುವ ಒಳಾಂಗಣ, ಪುರಾತನ ಮರದ ಮೆಟ್ಟಿಲುಗಳು, ವಿಸ್ತಾರವಾದ ಹುಲ್ಲುಹಾಸುಗಳಿದ್ದು ನಿಮ್ಮನ್ನು ಬೇರೆಯದ್ದೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.

ಭೋಗ ನಂದೀಶ್ವರ ದೇವಸ್ಥಾನ : ದೇವಸ್ಥಾನದಲ್ಲಿ ಫೋಟೊ ಶೂಟ್ ಮಾಡಲು ಬಯಸುತ್ತಿದ್ದರೆ ಭೋಗ ನಂದೀಶ್ವರ ದೇವಸ್ಥಾನ ಉತ್ತಮ ಆಯ್ಕೆಯಾಗಿದೆ. ಪರಿಣಿತ ಛಾಯಾಗ್ರಾಹಕರಿಂದ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರೆ ಯಾವ ಸ್ಥಳವು ಆಯ್ಕೆ ಮಾಡಿಕೊಂಡಿದ್ದೀರಿ ಎನ್ನುವುದು ಅಷ್ಟೇ ಮುಖ್ಯವಾಗುತ್ತದೆ. ಶಿವನಿಗೆ ಅರ್ಪಿತವಾದ ಹಿಂದೂ ದೇವಾಲಯ ಇದಾಗಿದ್ದು, ಇಲ್ಲಿ ನಿಮ್ಮ ಮದುವೆಯ ಪೂರ್ವ ಫೋಟೋಶೂಟ್ ಮಾಡಿಸಬಹುದು.

ಬೆಂಗಳೂರಿನ ನಂದಿ ಹಿಲ್ಸ್ : ಪ್ರೇಮಿಗಳು ಹೆಚ್ಚಾಗಿ ಭೇಟಿ ನೀಡುವ ಸ್ಥಳವು ಇದಾಗಿದ್ದು ಫೋಟೋಶೂಟ್ ಗೂ ಹೇಳಿ ಮಾಡಿಸಿದ ಜಾಗವೆನ್ನಬಹುದಾಗಿದೆ. ನಂದಿ ಬೆಟ್ಟಗಳ ಗುಹೆಗಳು ಮತ್ತು ಆಕರ್ಷಕ ಟಿಪ್ಪುವಿನ ಕೋಟೆಯಂತಹ ಹಿನ್ನೆಲೆಯಲ್ಲಿ ಪ್ರಕೃತಿಯ ಸೌಂದರ್ಯವು ಪ್ರೀ ವೆಡ್ಡಿಂಗ್ ಶೂಟ್ ಗೆ ಹೇಳಿ ಮಾಡಿಸಿದೆ ಸ್ಥಳವಾಗಿದೆ.

ಕೆಆರ್ ಹೂವಿನ ಮಾರುಕಟ್ಟೆ : ಎಲ್ಲೆಲ್ಲೂ ನೋಡಿದರಲ್ಲಿ ಹೂವುಗಳದ್ದೇ ರಾಶಿ. ಇದು ಫೋಟೋ ಶೂಟ್ ಗೆ ಅತ್ಯುತ್ತಮ ಸ್ಥಳವಾಗಿದೆ. ಇಲ್ಲಿ ಪ್ರತಿದಿನ ಮುಂಜಾನೆಯ ವೇಳೆ ತಾಜಾ ಹೂವುಗಳನ್ನು ಮಾರಾಟ ಮಾಡಲಾಗುತ್ತದೆ. ಈ ದೃಶ್ಯವು ನಿಮ್ಮ ಫೋಟೋ ಶೂಟ್ ನ ಅಂದವನ್ನು ಹೆಚ್ಚಿಸುತ್ತದೆ. ಬಣ್ಣ ಬಣ್ಣದ ಹೂವುಗಳ ರಾಶಿಯ ನಡುವೆ ಫೋಟೋ ಶೂಟ್ ಮಾಡಿಸಿದರೆ ಸಿನಿಮಾದ ರೀತಿಯ ಭಾವವು ಕಾಡುತ್ತದೆ.

ಗುಹಾಂತರ ರೆಸಾರ್ಟ್ : ಬೆಂಗಳೂರಿನಲ್ಲಿರುವ ಗುಹಾಂತರ ರೆಸಾರ್ಟ್ ಫೋಟೋ ಶೂಟ್ ಗೆ ಹೇಳಿ ಮಾಡಿಸಿದ ತಾಣವಾಗಿದೆ. ಮರದ ಸೇತುವೆಗಳು , ಸರೋವರವು ಫೋಟೋ ಶೂಟ್ ಗೆ ಉತ್ತಮ ಬ್ಯಾಕ್ ಗ್ರೌಂಡನ್ನು ಒದಗಿಸುತ್ತದೆ. ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಳ್ಳಲು ಬಯಸಿದರೆ ಇಲ್ಲಿ ಆಕರ್ಷಕ ಸೆಟ್ಟಿಂಗ್‌ಗಳನ್ನು ಕಾಣಬಹುದು.