‘ರಾಮಾಯಣ’ ಟೀಸರ್ ಅಲ್ಲಿ ಯಶ್ ಲುಕ್ ಹೇಗಿದೆ? ಇಲ್ಲಿದೆ ಫೋಟೋಸ್

Updated on: Apr 02, 2026 | 10:57 AM

Yash Ravana Look In Ramayana: ‘ರಾಮಾಯಣ’ ಸಿನಿಮಾದ ಟೀಸರ್ ಇಂದು (ಏಪ್ರಿಲ್ 2) ರಿಲೀಸ್ ಆಗಿದೆ. ಹನುಮಜಯಂತಿ ಪ್ರಯುಕ್ತ ಟೀಸರ್ ತೆರೆಗೆ ಬಂದಿದೆ. ಈ ಟೀಸರ್ ನೋಡಿದ ಅನೇಕರು ಯಶ್ ಲುಕ್ ಅನ್ನು ಹೊಗಳಿದ್ದಾರೆ. ಆದರೆ, ಅವರಿಗೆ ಒಂದು ಕೊರತೆ ಕೂಡ ಕಾಣಿಸಿದೆ. ಆ ಬಗ್ಗೆ ಇಲ್ಲಿದೆ ವಿವರ.

1 / 6
ರಾಕಿಂಗ್ ಸ್ಟಾರ್ ಯಶ್ ಅವರು ‘ರಾಮಾಯಣ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಇಂದು (ಏಪ್ರಿಲ್ 2) ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಯಶ್ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಇತ್ತು. ಅದಕ್ಕೆ ಪೂರ್ಣ ಪ್ರಮಾಣದಲ್ಲಿ ಉತ್ತರ ಸಿಕ್ಕಿಲ್ಲ.

ರಾಕಿಂಗ್ ಸ್ಟಾರ್ ಯಶ್ ಅವರು ‘ರಾಮಾಯಣ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಇಂದು (ಏಪ್ರಿಲ್ 2) ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಯಶ್ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಇತ್ತು. ಅದಕ್ಕೆ ಪೂರ್ಣ ಪ್ರಮಾಣದಲ್ಲಿ ಉತ್ತರ ಸಿಕ್ಕಿಲ್ಲ.

2 / 6

ರಾಮನಾಗಿ ರಣಬೀರ್ ಕಪೂರ್ ಅವರು ಕಾಣಿಸಿಕೊಂಡಿದ್ದಾರೆ. ಅವರ ಲುಕ್ ಗಮನ ಸೆಳೆದಿದೆ. ರಾಮನ ಪಾತ್ರಕ್ಕೆ ಅವರು ಸೂಕ್ತವಾಗಿ ಹೊಂದಿಕೆ ಆಗಿದ್ದಾರೆ ಎಂದು ಅನೇಕರು ಹೇಳಿದ್ದಾರೆ. ಅವರ ಪಾತ್ರಕ್ಕೆ 10ಕ್ಕೆ 10 ಅಂಕ ಸಿಕ್ಕಿದೆ.

3 / 6

ಸೀತಾ ಮಾತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ನಿಜವಾದ ಸೀತಾ ಮಾತೆಯೇ ಧರೆಗಿಳಿದಿದ್ದಾರೆ ಎಂಬ ರೀತಿಯಲ್ಲಿ ಸಾಯಿ ಪಲ್ಲವಿ ಕಾಣಿಸುತ್ತಿದ್ದಾರೆ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. ಅವರ ಕ್ಲೋಸಪ್​ ಲುಕ್ ರಿವೀಲ್ ಆಗಿಲ್ಲ.

4 / 6

‘ರಾಮಾಯಣ’ ಸಿನಿಮಾದಲ್ಲಿ ಯಶ್ ಪಾತ್ರ ತುಂಬಾನೇ ಪ್ರಮುಖವಾದುದ್ದು. ಅವರದ್ದು ರಾವಣನ ಪಾತ್ರ. ಈ ಪಾತ್ರ ಹೇಗಿರಲಿದೆ ಎಂಬುದನ್ನು ರಿವೀಲ್ ಮಾಡಿಲ್ಲ. ಅವರನ್ನು ಹಿಂಭಾಗದಿಂದ ಮಾತ್ರ ತೋರಿಸಲಾಗಿದೆ.

5 / 6

ಮುಂದಿನ ದಿನಗಳಲ್ಲಿ ಯಶ್ ಅವರ ರಾವಣನ ಲುಕ್ ಅನ್ನು ರಿವೀಲ್ ಮಾಡುವ ಉದ್ದೇಶ ತಂಡದವರಿಗೆ ಇದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಯಶ್ ಅಭಿಮಾನಿಗಳು ಕೊಂಚ ನಿರಾಸೆಗೊಂಡಿದ್ದಾರೆ.

6 / 6

ದೀಪಾವಳಿ ಪ್ರಯುಕ್ತ ‘ರಾಮಾಯಣ’ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರ ಎರಡು ಪಾರ್ಟ್​​​ಗಳಲ್ಲಿ ಬರಲಿದ್ದು ಮತ್ತೊಂದು ಭಾಗ 2027ರ ದೀಪಾವಳಿಗೆ ರಿಲೀಸ್ ಆಗಲಿದೆ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us