
ಬಾಲಿವುಡ್ ನಟಿ ಹುಮಾ ಖುರೇಷಿ ಸಹ ‘ಟಾಕ್ಸಿಕ್’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರದ ಹೆಸರು ಎಲಿಜಬೆತ್. ಪೋಸ್ಟರ್ ನೋಡಿದರೆ ಕ್ಯೂಟ್ ಆದ, ಮುಗ್ಧತೆಯಿಂದ ಕೂಡಿದ ಪಾತ್ರದಲ್ಲಿ ಹುಮಾ ನಟಿಸಿದಂತಿದೆ.

ನಟಿ ಕಿಯಾರಾ ಅಡ್ವಾಣಿ ‘ಟಾಕ್ಸಿಕ್’ ಸಿನಿಮಾದ ಪ್ರಮುಖ ನಾಯಕಿ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ಅವರ ಪಾತ್ರದ ಹೆಸರು ನಾದಿಯಾ. ಕಿಯಾರಾ ಅಡ್ವಾಣಿಯ ಪಾತ್ರ ತುಸು ಮುಗ್ಧತೆಯಿಂದ ಕೂಡಿರುವಂತಿದೆ.

ಲೇಡಿ ಸೂಪರ್ಸ್ಟಾರ್ ಎಂದೇ ಕರೆಯಲಾಗುವ ನಯನತಾರಾ ಸಹ ‘ಟಾಕ್ಸಿಕ್’ ಸಿನಿಮಾದ ನಾಯಕಿಯರಲ್ಲೊಬ್ಬರು. ನಯನತಾರಾ ಪಾತ್ರದ ಹೆಸರು ಗಂಗಾ. ನಯನತಾರಾ ಸಖತ್ ಮಾಸ್ ಮತ್ತು ಡಾನ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿರುವ ಬಂದೂಕು ನೋಡಿದಿರಾ?

ನಟಿ ರುಕ್ಮಿಣಿ ವಸಂತ್ ಅವರು ಸಹ ‘ಟಾಕ್ಸಿಕ್’ ಸಿನಿಮಾದ ನಾಯಕಿಯರಲ್ಲಿ ಒಬ್ಬರು. ರುಕ್ಮಿಣಿ ವಸಂತ್ ಗಂಭೀರವಾದ ಪಾತ್ರದಲ್ಲಿ ನಟಿಸಿದಂತಿದ್ದಾರೆ. ರುಕ್ಮಿಣಿಯವರ ಪಾತ್ರದ ಹೆಸರು ಮೆಲ್ಲಿಸಾ.

ಬಾಲಿವುಡ್ ನಟಿ ತಾರಾ ಸುತಾರಿಯಾ ಸಹ ‘ಟಾಕ್ಸಿಕ್’ ಸಿನಿಮಾನಲ್ಲಿದ್ದಾರೆ. ತಾರಾ ಸುತಾರಿಯಾ ಅವರು ಸಹ ಸಖತ್ ಖಡಕ್ ಪಾತ್ರದಲ್ಲಿ ನಟಿಸಿದ್ದಾರೆ. ತಾರಾ ಸುತಾರಿಯಾ ಅವರ ಪಾತ್ರದ ಹೆಸರು ರೆಬೆಕಾ, ತಾರಾ ಅವರದ್ದು ಸಖತ್ ರೆಬಲ್ ಪಾತ್ರ.

ಯಶ್ ಅವರು ನಟಿಸಿರುವ ‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್ದಾಸ್ ನಿರ್ದೇಶನ ಮಾಡಿದ್ದಾರೆ. ಕೆವಿಎನ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ಸ್ ಜಂಟಿಯಾಗಿ ನಿರ್ಮಾಣ ಮಾಡಿದ್ದು, ಮಾರ್ಚ್ 19ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.