ಇದು ಯಾವ ಸಿಗ್ನಲ್ಲೋ ಮಾರಾಯಾ!? 2021ರಲ್ಲಿ ಕ್ರಿಕೆಟ್​ ಮೈದಾನ ದಲ್ಲಿ ನಡೆದ ವಿಚಿತ್ರ ಘಟನೆಗಳ ರಿವೈಂಡ್​ ಮಾಡೋಣಾ ಬನ್ನೀ

| Updated By: ಸಾಧು ಶ್ರೀನಾಥ್​

Updated on: Dec 29, 2021 | 11:37 AM

ಈ ವರ್ಷ ಕ್ರಿಕೆಟ್ ದುನಿಯಾ ಹತ್ತು ಹಲವು ಅವಿಸ್ಮರೀಣಿಯ ಕ್ಷಣಗಳಿಗೆ ಸಾಕ್ಷಿಯಾಗಿದೆ. ಐತಿಹಾಸಿಕ ಸಾಧನೆಗೆ ವೇದಿಕೆಯಾಗಿದೆ. ಹಾಗೇ ಸಾಕಷ್ಟು ವಿವಾದಗಳನ್ನು ಕೂಡ ಕಂಡಿದೆ. ಇದರ ಮಧ್ಯೆ ಕೆಲವೊಂದು ವಿಲಕ್ಷಣ ಸಂಗತಿಗಳು ಅಭಿಮಾನಿಗಳನ್ನ ಮನಸಲ್ಲಿ ಅಚ್ಚಳಿಯದೇ ಹಾಗೇ ಉಳಿದಿವೆ.

1 / 5
ಮೈದಾನಕ್ಕೆ ಎಂಟ್ರಿ ಕೊಟ್ಟ ಅಭಿಮಾನಿ: ಲಾರ್ಡ್ಸ್ನಲ್ಲಿ ನಡೆದ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ನಡೆದ ವಿಲಕ್ಷಣ ಸಂಗತಿ ಇದು. ಟೀಮ್ ಇಂಡಿಯಾ ಜೆರ್ಸಿ ತೊಟ್ಟಿದ್ದ ಜಾರ್ವೋ ಎಂದು ಹೆಸರು ಹಾಕಿಸಿಕೊಂಡಿದ್ದ ವ್ಯಕ್ತಿ, ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಮೈದಾನಕ್ಕೆ ನುಗ್ಗಿದ್ದ. ಈ ಆಸಾಮಿ ಎರಡು ಬಾರಿ ಮೈದಾನಕ್ಕೆ ನುಗ್ಗಿ ಅವಾಂತರ ಸೃಷ್ಟಿಸಿದ್ದ. ನಾನು ಟೀಮ್ ಇಂಡಿಯಾ ಆಟಗಾರ ಎಂದು, ಹೇಳಿಕೊಂಡು ಮಜಾ ಉಡಾಯಿಸಿದ್ದ. ಈತನ ಅವಾಂತರ ನೋಡಿ, ಟೀಮ್ ಇಂಡಿಯಾ ಆಟಗಾರರು ಕೂಡ ನಗುವಿನ ಅಲೆಯಲ್ಲಿ ತೇಲಿದ್ರು. ಕಡೆಗೆ ಜಾರ್ವೋ ಪ್ರಾಂಕ್ ಮಾಡಲು ಹೀಗೆ ಮಾಡಿದ್ದ ಅನ್ನೋ ಸಂಗತಿ ಬಯಲಾಗಿತ್ತು. ಹೀಗಾಗಿ ಜಾರ್ವೋಗೆ ಇಂಗ್ಲೆಂಡ್ನ ಬಹುತೇಕ ಮೈದಾನ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಜಾರ್ವೋ ಮೇಲೆ ಭದ್ರತಾ ಉಲ್ಲಂಘನೆಯ ಪ್ರಕರಣವನ್ನು ದಾಖಲಿಸಿತ್ತು.

2 / 5
ಶೂನಲ್ಲಿ ಬಿಯರ್ ಕುಡಿದ ಕಾಂಗರೂಗಳು: ಈ ಬಾರಿ ಟಿಟ್ವೆಂಟಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಟಿಟ್ವೆಂಟಿ ಕ್ರಿಕೆಟ್ನಲ್ಲಿ ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸ್ತು. ಇದೇ ಖುಷಿಗೆ ಆಸಿಸ್ ಕ್ರಿಕೆಟಿಗರು ಸಂಭ್ರಮಾಚರಣೆಯ ಭಾಗವಾಗಿ ಶೂಗೆ ಬಿಯರ್ ತುಂಬಿಸಿ ಕುಡಿದು ಕುಣಿದು ಕುಪ್ಪಳಿಸಿದ್ದಾರೆ. ಆಸಿಸ್ ಕ್ರಿಕೆಟಿಗರ ಈ ವಿಲಕ್ಷಣ ಸಂಭ್ರಮ ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳಿಗೆ ಇರಿಸು ಮುರಿಸು ಉಂಟು ಮಾಡಿತ್ತು. ಆದ್ರೆ ಆಸ್ಟ್ರೇಲಿಯಾದಲ್ಲಿ ಯಾವುದೇ ದೊಡ್ಡ ಪಾರ್ಟಿಗಳಲ್ಲಿ ಈ ರೀತಿ ಶೂನಿಂದ ಡ್ರಿಂಕ್ಸ್ ಕುಡಿಯುವುದು ಸಂಪ್ರದಾಯವಾಗಿದೆ. ಇದರಿಂದ ಸಂಪತ್ತು, ಯಶಸ್ಸು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಕಾಂಗರೂಗಳಿಗಿದೆ. ಇದೇ ಕಾರಣಕ್ಕೆ ಫಿಂಚ್ ಪಡೆ ವಿಶ್ವಕಪ್ ಗೆಲುವಿನ ಸಂಭ್ರಮವನ್ನ ಹೀಗೆ ವಿಲಕ್ಷಣವಾಗಿ ಆಚರಿಸಿತ್ತು.

3 / 5
ಐಸಿಸಿ ಪ್ರಶಸ್ತಿ ಪಡೆದ ನಾಯಿ: ಐರ್ಲೆಂಡ್ನಲ್ಲಿ ನಡೆದ ಮಹಿಳಾ ಟಿಟ್ವೆಂಟಿ ಕಪ್ನಲ್ಲಿ ಸರೆಯಾದ ದೃಶ್ಯವಿದು. ಪಂದ್ಯದ ಮಧ್ಯೆ ನಾಯಿಯೊಂದು ಮಾಲೀಕನ ಕೈ ತಪ್ಪಿಸಿಕೊಂಡು ಮೈದಾನಕ್ಕೆ ನುಗ್ಗಿತ್ತು. ನೇರ ಬಂದಿದ್ದೇ ಬಾಲ್ ಕಚ್ಚಿಕೊಂಡು ಓಡಲು ಶುರುಮಾಡ್ತು. ಫೀಲ್ಡಿಂಗ್ ಮಾಡ್ತಿದ್ದ ಆಟಗಾರರೆಲ್ಲಾ ಈ ನಾಯಿಯನ್ನ ಹಿಡಿಯೋಕೆ ಬೆನ್ನಟ್ಟಿಕೊಂಡು ಹೋದ್ರೂ ಪ್ರಯೋಜನವಾಗ್ಲಿಲ್ಲ. ಕಡೆಗೆ ಪ್ರೀತಿಯಿಂದ ಕರೆದ ಆಟಗಾರ್ತಿ ಬಳಿ ಹೋಗಿ ಬಾಲ್ ನೀಡ್ತು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಐಸಿಸಿ ಕೂಡ ಈ ನಾಯಿಯ ಫೋಟೋ ಪೋಸ್ಟ್ ಮಾಡಿ, ನಾವು ಈ ತಿಂಗಳ ಪ್ರಶಸ್ತಿಯನ್ನ ಈ ಶ್ವಾನಕ್ಕೆ ನೀಡಿದ್ದೇವೆ ಎಂದು ತಮಾಷೆ ಮಾಡಿತ್ತು.

4 / 5
ಅಂಪೈರ್ ವಿಚಿತ್ರ ವೈಡ್ ಸಿಗ್ನಲ್: ಮಹಾರಾಷ್ಟ್ರದ ಪುರಂದರ್ ಪ್ರೀಮಿಯರ್ ಲೀಗ್ನಲ್ಲಿ ನಡೆದ ವಿಲಕ್ಷಣ ದೃಶ್ಯವಿದು. ಬೌಲರ್ ಎಸೆದಿದ್ದು ವೈಡ್ ಬಾಲ್ ಎಂದು ಎರಡು ಕೈ ಅಗಲಿಸಿ ಅಂಪೈರ್ ತೀರ್ಪು ನೀಡ್ತಾರೆ. ಆದ್ರೆ  ಈ ಅಂಪೈರ್ ಉಲ್ಟಾ ನಿಂತು, ಎರಡೂ ಕಾಲುಗಳಿಂದಲೇ ವೈಡ್ ಸಿಗ್ನಲ್ ಕೊಟ್ಟಿದ್ದಾರೆ. ಈ ವಿಡಿಯೋ ಈ ವರ್ಷ ಕ್ರಿಕೆಟ್ ಲೋಕದಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ವಿಡಿಯೋ.

5 / 5
ಔಟ್ ಆಗಿದ್ದು ಯಾರಿಗೂ ಗೊತ್ತಾಗಲಿಲ್ಲ   ಆಸ್ಟ್ರೇಲಿಯಾದ ವುಮೆನ್ಸ್ ನ್ಯಾಷನಲ್ ಲೀಗ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಆಟಗಾರ್ತಿ ಔಟಾಗಿದ್ದೇ ಯಾರಿಗೂ ಗೊತ್ತಾಗಲಿಲ್ಲ. ಅಂಪೈರ್ ಕತೆ ಒತ್ತಿಟ್ಟಿಗಿರಲಿ.. ಬೌಲಿಂಗ್ ಮಾಡುತ್ತಿದ್ದ ಬೌಲರ್ ಮತ್ತು ವಿಕೆಟ್ ಕೀಪರ್ಗೂ ಬೆಲ್ಸ್ ಕೆಳಕ್ಕೆ ಬಿದ್ದಿದ್ದನ್ನ ಗಮನಿಸಲು ಸಾಧ್ಯವಾಗ್ಲಿಲ್ಲ. ಪಂದ್ಯ ಮುಗಿದ ಬಳಿಕ ವಿಡಿಯೋ ರಿವ್ಯೂನಲ್ಲಿ ಬೆಲ್ಸ್ ಕೆಳಕ್ಕೆ ಬಿದ್ದಿದ್ದು ಕಾಣಿಸ್ತಿತ್ತು.

Published On - 10:05 am, Wed, 29 December 21