Kannada News Photo gallery Year Ender 2021 Here is the smartphones under Rs 25000 from brands Xiaomi OnePlus, Realme and more
SmartPhones Under 25,000: ಈ ವರ್ಷ 25,000 ರೂ. ಒಳಗೆ ರಿಲೀಸ್ ಆದ ಬೆಸ್ಟ್ ಸ್ಮಾರ್ಟ್ಫೋನ್ ಯಾವುವು?: ಇಲ್ಲಿದೆ ನೋಡಿ
TV9 Web | Updated By: Vinay Bhat
Updated on:
Dec 21, 2021 | 1:01 PM
Year Ender 2021: ಇನ್ನೇನು 2022ರ ಹೊಸ ವರ್ಷದ ಆಗಮನಕ್ಕೆ ಇನ್ನೇನು ಕೆಲವು ದಿನಗಳಷ್ಟೆ ಬಾಕಿಯಿದೆ. ಹೀಗಿರುವಾಗ 2021ನೇ ವರ್ಷದ ಸ್ಮಾರ್ಟ್ಫೋನ್ ಜಗತ್ತನ್ನು ಮೆಲುಕಿ ಹಾಕಿ ನೋಡೋಣ. ಹಾಗಾದ್ರೆ ಆ ಪೈಕಿ 25,000 ರೂ. ಒಳಗೆ ಬಿಡುಗಡೆ ಆದ ಪ್ರಮುಖ ಮೊಬೈಲ್ಗಳು ಯಾವುವು ಎಂಬುದನ್ನು ನೋಡೋಣ.
1 / 8
2021ನೇ ವರ್ಷ ಸ್ಮಾರ್ಟ್ಫೋನ್ ಪ್ರಿಯರಿಗೆ ಸಾಕಷ್ಟು ತೃಪ್ತಿ ನೀಡಿದೆ. ಜನರು ಯಾವರೀತಿಯ ಫೋನುಗಳನ್ನು ಎದುರು ನೋಡುತ್ತಿದ್ದರೂ ಅದಕ್ಕೆ ತಕ್ಕಂತೆ ಅನೇಕ ಫೋನುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಆಕರ್ಷಕ ಕ್ಯಾಮೆರಾಗಳು, ವೇಗದ ಚಾರ್ಜಿಂಗ್ ಬೆಂಬಲ ಮತ್ತು ಗಮನ ಸೆಳೆಯುವ ವೈಶಿಷ್ಟ್ಯಗಳನ್ನು ಅಳವಡಿಸಿ 2021 ರಲ್ಲಿ ಸಾಲು ಸಾಲು ಸ್ಮಾರ್ಟ್ಫೋನ್ಗಳು ಬಿಡುಗಡೆ ಆಗಿವೆ.
2 / 8
ಇನ್ನೇನು 2022ರ ಹೊಸ ವರ್ಷದ ಆಗಮನಕ್ಕೆ ಇನ್ನೇನು ಕೆಲವು ದಿನಗಳಷ್ಟೆ ಬಾಕಿಯಿದೆ. ಹೀಗಿರುವಾಗ 2021ನೇ ವರ್ಷದ ಸ್ಮಾರ್ಟ್ಫೋನ್ ಜಗತ್ತನ್ನು ಮೆಲುಕಿ ಹಾಕಿ ನೋಡೋಣ. ಈ ವರ್ಷ ಸಾಲು ಸಾಲು ಸ್ಮಾರ್ಟ್ಫೋನ್ಗಳು ಬಿಡುಗಡೆ ಆಗಿವೆಯಾದರೂ ಅತಿ ಹೆಚ್ಚು ಸೇಲ್ ಕಂಡು ಜನರ ಮನ್ನಣೆಗೆ ಪಾತ್ರವಾಗಿದ್ದು ಕೆಲವೇ ಕೆಲವು. ಹಾಗಾದ್ರೆ ಆ ಪೈಕಿ 25,000 ರೂ. ಒಳಗೆ ಬಿಡುಗಡೆ ಆದ ಪ್ರಮುಖ ಸ್ಮಾರ್ಟ್ಫೋನ್ಗಳು ಯಾವುವು ಎಂಬುದನ್ನು ನೋಡೋಣ.
3 / 8
ಒನ್ಪ್ಲಸ್ ನಾರ್ಡ್ CE 5G: ಈ ಸ್ಮಾರ್ಟ್ಫೋನ್ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.43 ಇಂಚಿನ ಫುಲ್ ಹೆಚ್ಡಿ + ಡಿಸ್ಪ್ಲೇಯನ್ನು ಹೊಂದಿದೆ. ಆಕ್ಟಾ-ಕೋರ್-ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 750G SoC ಪ್ರೊಸೆಸರ್, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದರೊಂದಿಗೆ 4,500mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ 30W Warp ಚಾರ್ಜ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಇದರ ಬೆಲೆ 24,999 ರೂ.
4 / 8
iQOO Z3: ಇದು 2408x1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.58 ಇಂಚಿನ ಫುಲ್ ಹೆಚ್ಡಿ ಪ್ಲಸ್+ಎಲ್ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 768G ಪ್ರೊಸೆಸರ್ ಅನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 11ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಹಾಗೆಯೇ 4,400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 55W ಫ್ಲ್ಯಾಶ್ಚಾರ್ಜ್ ಟೆಕ್ನಾಲಜಿಯನ್ನು ಬೆಂಬಲಿಸಲಿದೆ. ಇದರ ಬೆಲೆ 22,990 ರೂ.
5 / 8
ಮೋಟೋರೊಲಾ ಎಡ್ಜ್ 20 ಫ್ಯೂಷನ್: ಈ ಸ್ಮಾರ್ಟ್ಫೋನ್ 6.7-ಇಂಚಿನ ಫುಲ್ ಹೆಚ್ಡಿ+ ಮ್ಯಾಕ್ಸ್ ವಿಷನ್ ಡಿಸ್ಪ್ಲೇ ಹೊಂದಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 800U 5G SoC ಪ್ರೊಸೆಸರ್ ಹೊಂದಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಟರ್ಬೊಪವರ್ 30 ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಇದರ ಬೆಲೆ 22,999 ರೂ. ಆಗಿದೆ.
6 / 8
ಶವೋಮಿ ಎಂಐ 10i 5G: ಈ ಸ್ಮಾರ್ಟ್ಫೋನ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 750G ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ ಒಳಗೊಂಡಿದೆ. ಜೊತೆಗೆ 5820mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಶಿಯೋಮಿ ಮಿ10i ಸ್ಮಾರ್ಟ್ಫೋನ್ 6GB RAM+64GB 20,999ರೂ.ಗಳು ಆಗಿದೆ. 6GB RAM+128GB ಬೆಲೆಯು 21,999ರೂ. ಮತ್ತು 8GB RAM+128GB ವೇರಿಯಂಟ್ ದರವು 23,999 ರೂ. ಆಗಿದೆ.
7 / 8
ಐಕ್ಯೂ Z5: ಈ ಸ್ಮಾರ್ಟ್ಫೋನ್ 6.67-ಇಂಚಿನ ಫುಲ್ ಹೆಚ್ಡಿ + ಡಿಸ್ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 778G SoC ಪ್ರೊಸೆಸರ್ ಹೊಂದಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಜೊತೆಗೆ ಈ ಸ್ಮಾರ್ಟ್ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 44W ಫ್ಲ್ಯಾಶ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಇದರ ಬೆಲೆ 23,990 ರೂ. ಆಗಿದೆ.
8 / 8
ರೆಡ್ಮಿ ನೋಟ್ 10 ಪ್ರೊ: ಈ ಸ್ಮಾರ್ಟ್ಫೋನ್ 6.67 ಇಂಚಿನ ಫುಲ್ ಹೆಚ್ಡಿ ಪ್ಲಸ್ ಸೂಪರ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 732G SoC ಪ್ರೊಸೆಸರ್, ಕ್ವಾಡ್ ರಿಯರ್ ಕ್ಯಾಮೆರಾ ಸೆಟ್ಅಪ್ ನಿಂದ ಆವೃತವಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ಹಾಗೆಯೇ 5,020 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದರ ಬೆಲೆ 19,499 ರೂ.