Updated on: Jan 29, 2022 | 7:30 AM
ನಿಮಗೆ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದರೆ ಕೆಲವು ದಿನಗಳವರೆಗೆ ಹುರುಳಿ ಕಾಳು ನಿಯಮಿತವಾಗಿ ಸೇವಿಸಿ. ನಿಮ್ಮ ಕಿಡ್ನಿ ಕಲ್ಲನ್ನು ದೇಹದಿಂದ ಹೊರತೆಗೆಯಲು ಇದು ತುಂಬಾ ಸಹಾಯಕವಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಮಧುಮೇಹದ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ತುಂಬಾ ಸಾಮಾನ್ಯವಾಗಿದೆ. ನೀವು ಸಹ ಇದರಿಂದ ಬಳಲುತ್ತಿದ್ದರೆ ನೀವು ಖಂಡಿತವಾಗಿಯೂ ನಿಮ್ಮ ಆಹಾರದಲ್ಲಿ ಹುರುಳಿ ಕಾಳನ್ನು ಸೇರಿಸಿಕೊಳ್ಳಬೇಕು. ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಹುರುಳಿ ಕಾಳು ಸಹಾಯಕವೆಂದು ಪರಿಗಣಿಸಲಾಗಿದೆ.
ಕಡಿಮೆ ವೀರ್ಯಾಣುಗಳ ಸಂಖ್ಯೆಯಿಂದಾಗಿ ಫಲವತ್ತತೆ ಸಮಸ್ಯೆಗಳನ್ನು ಹೊಂದಿರುವ ಪುರುಷರಿಗೂ ಈ ಹುರುಳಿ ಕಾಳು ಉಪಯುಕ್ತವಾಗಿದೆ. ಆದರೆ ಇದನ್ನು ಸೇವಿಸುವ ಮೊದಲು ತಜ್ಞರ ಸಲಹೆಯನ್ನು ಪಡೆಯುವುದು ಉತ್ತಮ.
ಹುರುಳಿ ಕಾಳು ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಹೆಚ್ಚಿನ ಪ್ರೋಟೀನ್ ಹಾಗೂ ಫೈಬರ್ ಅನ್ನು ಹೊಂದಿರುತ್ತದೆ. ತೂಕ ಇಳಿಸಿಕೊಳ್ಳಲು ಸಿದ್ಧರಿರುವವರಿಗೆ ಇದು ತುಂಬಾ ಉಪಯುಕ್ತವಾಗಿದೆ.
ಸಾಂಕೇತಿಕ ಚಿತ್ರ