- Kannada News Photo gallery Kannada News | You will be shocked if you hear the price of that mango fruit that made everyone frown at the fair
Koppal News: ಮೇಳದಲ್ಲಿ ಎಲ್ಲರನ್ನ ಹುಬ್ಬೇರುವಂತೆ ಮಾಡಿದ ಆ ಮಾವಿನ ಹಣ್ಣಿನ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ
ಹಣ್ಣುಗಳ ರಾಜ ಅಂದ್ರೆ ಅದು ಮಾವು, ಬೇಸಿಗೆ ಬಂದ್ರೆ ಸಾಕು ಮಾವಿನ ಹಣ್ಣಿನ ರುಚಿ ಸವಿಯಲು ಜನರು ಮುಂದಾಗ್ತಾರೆ. ಆದರಂತೆ ಕೊಪ್ಪಳದಲ್ಲಿ ನಡೆದ ಮಾವಿನ ಮೇಳ ಎಲ್ಲರ ಗಮನವನ್ನೂ ತನ್ನತ್ತ ಸೆಳೆದಿದೆ. ಹಣ್ಣುಗಳ ರಾಜನ ಸಮಾವೇಶದಲ್ಲಿ ಜನರು ಮುಗಿ ಬಿದ್ದು ಖರೀದಿಸುತ್ತಿದ್ದಾರೆ. ಅದರಲ್ಲೂ ಅದೊಂದು ಹಣ್ಣು ಎಲ್ಲರನ್ನ ಹುಬ್ಬೇರಿಸುವಂತೆ ಮಾಡಿತ್ತು. ಯಾಕೆಂದ್ರೆ ಅದರ ಬೆಲೆ ಕೇಳಿದ್ರೆ ಅಚ್ಚರಿ ಆಗ್ತೀರಾ?
Updated on: May 24, 2023 | 1:48 PM

ಎಲ್ಲಿ ನೋಡಿದ್ರು ಕಲರ್ ಕಲರ್ ಮಾವಿನ ಹಣ್ಣುಗಳು, ಹಣ್ಣುಗಳನ್ನ ನೋಡಲು ಮುಗಿಬಿದ್ದಿರೊ ಜನರು, ಹಣ್ಣುಗಳ ರಾಜನ ಮೇಳದಲ್ಲಿ ಒಂದಕ್ಕಿಂತ ಒಂದು ವೆರೈಟಿಗಳು, ಹಳದಿ ಬಣ್ಣದಿಂದ ರಸತುಂಬಿ ನಿಂತ ಮಾವುಗಳು ಒಂದೆಡೆಯಾದ್ರೆ ಇನ್ನೊಂದೆಡೆ ಹಚ್ಚ ಹಸಿರಿನ ಎಳೆನೀರ ಗಾತ್ರದ ಆಮ್ಲೇಟ್ ಮಾವಿನಕಾಯಿಗಳು.

ಇಷ್ಟೆ ಅಲ್ಲದೆ ಜಗತ್ತಿನ ದುಬಾರಿ ಖ್ಯಾತಿಯ ಮಿಯಾ ಜಾಕಿ ಹಣ್ಣು, ಅದರ ಬೆಲೆ ಪ್ರತಿ ಕೆ.ಜಿಗೆ ಬರೊಬ್ಬರಿ 2.70 ಲಕ್ಷ ರೂ, ಹೀಗೆ ಒಂದಲ್ಲ ಎರಡಲ್ಲ ನೂರಾರು ಬಗೆಯ ಮಾವಿನ ಸಮಾಗಮವೇ ಇಂದು ಕೊಪ್ಪಳದ ತೋಟಗಾರಿಕೆ ಇಲಾಖೆಯ ಆರಣದಲ್ಲಿ ಕೂಡಿತ್ತು.

ಹೌದು ಕೊಪ್ಪಳ ಭಾಗದ ಮಾವು ಬೆಳಗಾರರು ಬೆಳೆದ ಮಾವಿನ ಹಣ್ಣು ಪ್ರದರ್ಶನ ಹಾಗೂ ಮಾರಾಟ ಮೇಳವನ್ನ ಆಯೋಜನೆ ಮಾಡಲಾಗಿತ್ತು. ಈ ಮಾವು ಮೇಳದಲ್ಲಿ ರೈತರು ತಾವು ಬೆಳೆದ ವಿವಿದ ಬಗೆಯ ಮಾವಿನ ಹಣ್ಣುಗಳನ್ನ ಮಾರಾಟಕ್ಕೆ ತಂದು ಇಡಲಾಗಿತ್ತು.

ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಮಾವು ಮೇಳವನ್ನ ಆಯೋಜನೆ ಮಾಡಲಾಗಿದೆ. ಜಿಲ್ಲೆಯ ರೈತರು ಮೇಳದಲ್ಲಿ ಭಾಗಿಯಾಗಿ ಮೇಳದಲ್ಲಿ ಮಾರಾಟ ಮಾಡಲು ಮುಂದಾಗಿದ್ದರು.

ಗ್ರಾಹಕರು ಕೂಡಾ ರೈತರಿಂದ ನೇರವಾಗಿ ಖರೀದಿಗೆ ಆಗಮಿಸುತ್ತಿದ್ದರು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಕೃಷ್ಣಾ ಉಕ್ಕುಂದ್ ತಿಳಿಸಿದರು.

ಈ ಮಾವು ಮೇಳದಲ್ಲಿ ಕೇಸರ್, ಬೇನೆಶಾನ್, ದಶಹರಿ, ರಸಪುರಿ ಅ್ವರ್ಣ ಲೇಖಾ, ಇಮಾಮ್ ಪಸಂದ್, ಆಪೋಸ್, ಮಲ್ಲಿಕಾ, ತೋತಾಪುರಿ, ಪುನಾಸ್ ಸೇರಿ, ಉಪ್ಪಿನಕಾಯಿ ತಳಿಯ ಮಾವುಗಳನ್ನ ಮಾರಾಟಕ್ಕೆ ಇಡಲಾಗಿತ್ತು.

ಇವೆಲ್ಲವುಗಳ ಜೊತೆಗೆ ಜಗತ್ತಿನ ಅತಿ ದುಭಾರಿ ಖ್ಯಾತಿಯ ಮಿಯಾ ಜಾಕಿ ಎಂಬ ಜಪಾನ್ ತಳಿಯ ಮಾವು ಕೂಡಾ ಭಾಗಿಯಾಗಿತ್ತು. 2.70 ಲಕ್ಷ ಬೆಲೆಬಾಳುವ ಈ ಮಿಯಾ ಜಾಕಿ ಕೇವಲ ಪ್ರದರ್ಶನಕ್ಕೆ ಇಡಲಾಗಿದೆ.

ಸದ್ಯ ಮಾವು ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದ್ದು, ಜನರು ಮಾವು ಮೇಳದಲ್ಲಿ ಮಾವಿನಹಣ್ಣು ಖರೀದಿಗೆ ಮುಂದಾಗಿದ್ದರು. ಮಾರುಕಟ್ಟೆಗಿಂತಲೂ ಉತ್ತಮ ಬೆಳೆಯಲ್ಲಿ ಒಳ್ಳೆಯ ಹಣ್ಣುಗಳು ಇಲ್ಲಿ ಸಿಗುವ ಹಿನ್ನೆಲೆ ಜನರು ಹೆಚ್ಚು ಮಾವು ಮೇಳದಲ್ಲಿ ಖರೀದಿಗೆ ಮುಂದಾಗಿದ್ದಾರೆ.




