ಮಲೆನಾಡಿನಲ್ಲಿ ಯುವ ಸಂಸತ್ ಸ್ಪರ್ಧೆ ಕಲರವ: ಹೀಗಿತ್ತು ನೋಡಿ ವಿದ್ಯಾರ್ಥಿಗಳ ಮಿನಿ ಸಂಸತ್
ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಯುವ ಸಂಸತ್ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಅರಿಯಲು ಉತ್ತಮ ವೇದಿಕೆಯಾಯಿತು. ಪ್ರೌಢಶಾಲೆ ಮತ್ತು ಪದವಿಪೂರ್ವ ವಿದ್ಯಾರ್ಥಿಗಳು ಸಂಸತ್ತಿನ ಕಾರ್ಯವೈಖರಿಯನ್ನು ಅನುಭವಿಸಿದರು. ಪ್ರಶ್ನೋತ್ತರ ಅವಧಿ, ಸಚಿವರ ನೇಮಕ ಮತ್ತು ವಿರೋಧ ಪಕ್ಷದ ಪಾತ್ರಗಳನ್ನು ಅವರು ನಿಭಾಯಿಸಿದರು. ಈ ಘಟನೆಯು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಲು ಸಹಾಯವಾಗಿದೆ.
1 / 8
ಶಿವಮೊಗ್ಗ ನಗರದ ಜಿಲ್ಲಾ ಪಂಚಾಯತ್ ಕಚೇರಿಯ ಸಭಾಗಂಣದಲ್ಲಿ ಯುವ ಸಂಸತ್ ಸ್ಪರ್ಧೆ ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಯಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಯುವ ಸಂಸತ್ನಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ನಾಯಕತ್ವ ಗುಣಗಳನ್ನು ರೂಡಿಸಲು ಇದೊಂದು ಉತ್ತಮ ವೇದಿಕೆಯಾಗಿತ್ತು. ಯುವ ಸಂಸತ್ ಸ್ಪರ್ಧೆಯ ಒಂದು ಝಲಕ್ ಇಲ್ಲಿದೆ ನೋಡಿ.
2 / 8
ವಿಶ್ವದಲ್ಲೇ ಪ್ರಜಾಪ್ರಭುತ್ವದಲ್ಲಿ ಭಾರತವು ಗಮನ ಸೆಳೆದಿದೆ. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ ಪ್ರಮುಖ ಪಾತ್ರ ನಿರ್ವಹಣೆ ಮಾಡುತ್ತದೆ. ಇದೇ ಸಂಸತ್ ಮೂಲಕವೇ ದೇಶದ ಪ್ರಜಾಪ್ರಭುತ್ವ ಆಡಳಿತ ಯಂತ್ರ ಸಾಗುತ್ತದೆ. ಶಿವಮೊಗ್ಗದ ಜಿಲ್ಲಾ ಪಂಚಾಯತ್ ಕಚೇರಿ ಮತ್ತು ಪಾಲಿಕೆಯ ಸಭಾಂಗಣ ಎರಡು ಸ್ಥಳದಲ್ಲಿ ರಾಜ್ಯ ಮಟ್ಟದ ಯುವ ಸಂಸತ್ ಸ್ಪರ್ಧೆ ಆಯೋಜಿಸಲಾಗಿತ್ತು.
3 / 8
ರಾಜ್ಯದ ವಿವಿಧ ಜಿಲ್ಲೆಯಲ್ಲಿ ಪ್ರತಿಭಾಂತ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳನ್ನು ಎರಡು ವಿಭಾಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಈ ಸಂಸತ್ ಸ್ಪರ್ಧೆಯ ಮೂಲಕ ಅವರು ಕೂಡ ವಿವಿಧ ಖಾತೆಗಳನ್ನು ನಿಭಾಯಿಸುವುದು, ಸಮಸ್ಯೆಗಳಿಗೆ ಉತ್ತರಿಸುವುದು. ವಿರೋಧ ಪಕ್ಷದ ಸದಸ್ಯರಾಗಿ ಅವರ ಆಡಳಿತ ಯಂತ್ರ ಹಳಿ ತಪ್ಪಿದಲ್ಲಿ ತಿದ್ದಿ ತಿಡಿಹೇಳುವುದು ಹೀಗೆ ಅನೇಕ ದೃಶ್ಯಗಳು ಯುವ ಸಂಸತ್ ಸ್ಪರ್ಧೆಯಲ್ಲಿ ಕಂಡು ಬಂದಿದ್ದವು.
4 / 8
ಯುವ ಸಂಸತ್ ಕಾರ್ಯಕ್ರಮದ ಮೂಲಕ ಆಡಳಿತ ವ್ಯವಸ್ಥ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು. ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಯ ಸೆಕ್ಷನ್ ಅಧಿಕಾರಿ ಸಂತೋಷ ವಿದ್ಯಾರ್ಥಿಗಳಿಗೆ ಸದನ ನಡೆಸುವ ಕುರಿತು ನಿಯಮಾವಳಿಗಳ ಕುರಿತು ಮಾಹಿತಿ ನೀಡಿದರು.
5 / 8
ಯುವ ಸಂಸತ್ ಅಧಿವೇಶನ, ಅಧಿವೇನ ಕಲಾಪದ ಆರಂಭದಲ್ಲಿ ರಾಷ್ಟ್ರಪತಿ ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿದರು. ನಂತರ ನೂತನ ಆಯ್ಕೆಯಾದ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಸ್ವೀಕರ್ ಆಗಮಿಸಿ ಸದನ ಉದ್ದೇಶಿ ಮಾತನಾಡಿದರು. ಇತ್ತೀಚೆಗೆ ನಿಧಿನ ಹೊಂದಿದ ರತನ್ ಟಾಟಾಗೆ ಆತ್ಮಕ್ಕೆ ಶಾಂತಿ ಕೋರಿದರು. ಪ್ರಧಾನ ಮಂತ್ರಿ ಹುದ್ದೆಯನ್ನು ರಾಮನಗರದ ಬಿಜಿಎಸ್ ಪಿಯು ಕಾಲೇಜಿನ ವಿದ್ಯಾರ್ಥಿ ರವಿಕುಮಾರ್ ಮತ್ತು ವಿರೋಧ ಪಕ್ಷದ ನಾಯಕಿ ಹಾಸನ ಜಿಲ್ಲೆಯ ವರ್ಷಾ ಆಗಿದ್ದರು. ವಿದ್ಯಾರ್ಥಿಗಳ ಸಂಸತ್ ಎಲ್ಲರ ಗಮನ ಸೆಳೆದಿತ್ತು.
6 / 8
ಸಂಸತ್ನಲ್ಲಿ ಪ್ರಮುಖವಾಗಿ ಪ್ರಶ್ನೋತ್ತರಗಳು ಗಮನ ಸೆಳೆಯಿತು. ಈ ನಡುವೆ ಕೃತಕ ಬುದ್ದಿಮತ್ತೆಯ ಬಳಕೆಯಿಂದ ಅನುಕೂಲಕ್ಕಿಂತ ಅನಾನೂಲ ಜಾಸ್ತಿ ಆಗಿದೆ. ಎಐ ಬಳಿಸಿ ಬ್ಯಾಂಕ್ ಖಾತೆಯಿಂದ ಬಡವರ ಹಣ ಕದಿಯಲಾಗುತ್ತದೆ. ಚಾಟ್ ಜಿಪಿಟಿ ಬಳಿಸಿ ಅಮೇರಿಕಾದಲ್ಲಿ ಯುವಕ ಮರಣ ಹೊಂದಿದ್ದಾನೆ. ಎಐ ಕುರಿತಾದ ಹೊಸ ಕಾಯ್ದೆಯಿಂದ ಯಾವ ಉಪಯೋಗವಿದೆ ಮತ್ತು ದುಷ್ಪರಿಣಾಮ ತಡೆಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ವಿಪಕ್ಷ ನಾಯಕರು ಪ್ರಶ್ನಿಸಿದರು. ಹೀಗೆ ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಪ್ರಧಾನ ಮತ್ತು ಹಾಗು ಆಡಳಿತ ಪಕ್ಷದ ಸದಸ್ಯರು ಉತ್ತರಿಸುತ್ತಿದ್ದರು.
7 / 8
ದೇಶದ ಅನೇಕ ಸಮಸ್ಯೆಗಳ ಕುರಿತು ಸಂಸತ್ನಲ್ಲಿ ದೊಡ್ಡ ಚರ್ಚೆಗಳು ನಡೆದವು. ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಪ್ರಶ್ನೋತ್ತರಗಳನ್ನು ವೀಕ್ಷಣೆ ಮಾಡಿದವರಿಗೆ ಉತ್ತಮ ಅನುಭವವಾಗಿತ್ತು. ಶಿಕ್ಷಕರು, ಅಧಿಕಾರಿಗಳ ವರ್ಗ, ಮತ್ತು ವಿದ್ಯಾರ್ಥಿಗಳು ಯುವ ಸಂಸತ್ ಕಾರ್ಯವೈಖರಿ ನೋಡಿ ಸಂತಸ ಪಟ್ಟರು.
8 / 8
ಯುವ ಸಂಸತ್ ರಾಜ್ಯಮಟ್ಟದ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ಹೊಸ ಚೈತನ್ಯ, ಹುಮ್ಮಸ್ಸು, ಪ್ರಜಾಪ್ರಭುತ್ವದ ವ್ಯವಸ್ಥೆಯ ಕುರಿತು ಪ್ರಾಯೋಗಿಕ ಶಿಕ್ಷಣ ನೀಡಿತ್ತು. ದೇಶದ ಸಂಸತ್ ಹೇಗೆಲ್ಲ ಕಾರ್ಯನಿರ್ವಹಣೆ ಮಾಡುತ್ತದೆ. ಏನೆಲ್ಲಾ ನಿಯಮಗಳಿವೆ, ಜನಪ್ರತಿನಿಧಿಗಳ ಕರ್ತವ್ಯಗಳ ಕುರಿತು ಈ ಸ್ಪರ್ಧೆಯ ಮೂಲಕ ಅನಾವರಣಗೊಂಡಿದ್ದು ವಿಶೇಷವಾಗಿತ್ತು.