- TV9 Kannada Photo gallery Shanvi Srivastava shares Bold Photos On Social media Cinema News in Kannada
ಶಾನ್ವಿ ಶ್ರೀವಾಸ್ತವ ಗ್ಲಾಮರ್ಗೆ ಮನ ಸೋಲದವರೇ ಇಲ್ಲ
ಶಾನ್ವಿ ಅವರು ಇನ್ಸ್ಟಾಗ್ರಾಮ್ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಗ್ಲಾಮರ್ ಲುಕ್ ಮೂಲಕ ಗಮನ ಸೆಳೆದಿದ್ದಾರೆ. ಅವರ ಬೋಲ್ಡ್ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
Updated on: Nov 15, 2024 | 12:04 PM

ನಟಿ ಶಾನ್ವಿ ಶ್ರೀವಾಸ್ತವ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅವರು ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಕೂಡ ಸಿಕ್ಕಿದೆ.

ಶಾನ್ವಿ ಅವರು ಇನ್ಸ್ಟಾಗ್ರಾಮ್ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಗ್ಲಾಮರ್ ಲುಕ್ ಮೂಲಕ ಗಮನ ಸೆಳೆದಿದ್ದಾರೆ. ಅವರ ಬೋಲ್ಡ್ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಶಾನ್ವಿ ಅವರು ‘ಮಫ್ತಿ’ ಸಿನಿಮಾದಲ್ಲಿ ನಟಿಸಿದ್ದರು. ಅವರು ಆ ಚಿತ್ರದಲ್ಲಿ ಶ್ರೀಮುರಳಿಗೆ ಜೊತೆಯಾಗಿದ್ದರು. ಈಗ ಅದರ ಪ್ರೀಕ್ವೆಲ್ ‘ಭೈರತಿ ರಣಗಲ್’ ರಿಲೀಸ್ ಆಗಿದೆ. ಇದರಲ್ಲಿ ಶ್ರೀಮುರಳಿ ಪಾತ್ರ ಇಲ್ಲದ ಕಾರಣ ಶಾನ್ವಿ ಪಾತ್ರವೂ ಇಲ್ಲ.

ಇತ್ತೀಚೆಗೆ ಶಾನ್ವಿ ಅವರಿಗೆ ದೊಡ್ಡ ಗೆಲುವು ಕಂಡಿಲ್ಲ. ಆದರೆ, ಅವರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಶಾನ್ವಿ ವಿವಿಧ ರೀತಿಯ ಗ್ಲಾಮರ್ ಫೋಟೋಗಳನ್ನು ಹಂಚಿಕೊಂಡು ಬೇಡಿಕೆ ಉಳಿಸಿಕೊಂಡಿದ್ದಾರೆ.

ಶಾನ್ವಿ ಶ್ರೀವಾಸ್ತವ ಅವರು ಬೇರೆ ರಾಜ್ಯದವರು. ಕರ್ನಾಟಕಕ್ಕೆ ಬಂದು ಅವರು ಕನ್ನಡ ಕಲಿತಿದ್ದಾರೆ. ಕನ್ನದಲ್ಲೇ ಮಾತನಾಡುವ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ. ಈ ಕಾರಣಕ್ಕೂ ಅವರು ಹೆಚ್ಚು ಇಷ್ಟ ಆಗುತ್ತಾರೆ.

ರಾಜೇಶ್ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.
Read More



