ರಾಮನಗರ ಯುವಕರ ಸಾಹಸ, 600‌ ಅಡಿ ಎತ್ತರದ ಬೆಟ್ಟದ ಮೇಲೆ ತ್ರಿವರ್ಣ ಧ್ವಜ ಹಾರಿಸಿ ದೇಶಭಕ್ತಿ ಮೆರೆದ ಯುವಕರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 15, 2023 | 9:18 AM

Ramanagara News: ದೇಶಾದ್ಯಂತ ಇಂದು(ಆ.15) ಸ್ವಾಂತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅದರಂತೆ ರಾಮನಗರ ಜಿಲ್ಲೆಯ ಸಚಿನ್ ಹಾಗೂ ಅವರ ತಂಡದವರು ಸೇರಿ 600‌ ಅಡಿ ಎತ್ತರದ ಬೆಟ್ಟದ ಮೇಲೆ 60‌ ಅಡಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ.

1 / 6
ಇಂದು(ಆ.15) ದೇಶಾದ್ಯಂತ 77ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಮುಂಜಾನೆ ದೆಹಲಿಯ ಕೆಂಪುಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಸತತ 10 ನೇ ಬಾರಿಗೆ ಧ್ವಜಾರೋಹಣ ನೆರವೇರಿಸಿದ್ದಾರೆ. ಅದರಂತೆ ರಾಮನಗರದಲ್ಲೂ ಕೆಲ ಯುವಕರು ವಿಶೇಷವಾಗಿ ಬಾವುಟ ಹಾರಿಸಿದ್ದಾರೆ.

2 / 6
ಅದರಂತೆ ಇದೀಗ ರಾಮನಗರ ಜಿಲ್ಲೆಯ ಕೆಲ ಯುವಕರು 600‌ ಅಡಿ ಎತ್ತರದ ಬೆಟ್ಟದ ಮೇಲೆ 60‌ ಅಡಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ.

3 / 6
ಹೌದು, ಸ್ವಾತಂತ್ರೋತ್ಸವದ ಅಂಗವಾಗಿ ಬೆಳ್ಳಂ ಬೆಳಗ್ಗೆ ಸಚಿನ್ ಹಾಗೂ ಅವರ ತಂಡದಿಂದ ಬರೊಬ್ಬರಿ 60‌ ಅಡಿ ಅಗಲದ ತ್ರಿವರ್ಣ ಬಾವುಟವನ್ನು 600 ಅಡಿ ಎತ್ತರದ ಬೆಟ್ಟದ ಮೇಲೆ ಹಾರಿಸಿದ್ದಾರೆ.

4 / 6
ಇನ್ನು ಸಚಿನ್​ ಹಾಗೂ ತಂಡದವರು ಪ್ರತಿ ವರ್ಷವು ಇಲ್ಲಿ ಬಾವುಟವನ್ನು ಹಾರಿಸಿಕೊಂಡು ಬಂದಿದ್ದಾರೆ. ಅದರಂತೆ ಈ ವರ್ಷವೂ ಕೂಡ ಎಲ್ಲ ಸ್ನೇಹಿತರು ಸೇರಿ ರಾಷ್ಟ್ರಧ್ವಜವನ್ನು ಹಾರಿಸಿ, ರಾಷ್ಟ್ರಗೀತೆಯನ್ನು ಹಾಡಿದ್ದಾರೆ.

5 / 6
ಈ ತಂಡದವರ ಮತ್ತೊಂದು ವಿಶೇಷವೆಂದರೆ, ಪ್ರತಿ ವರ್ಷವು ಇವರು ಹಾರಿಸುವ ಬಾವುಟಕ್ಕಿಂತ5 ಅಡಿ ಎತ್ತರ ಹೆಚ್ಚಿಸಿಕೊಂಡು ಹೋಗುತ್ತಿದ್ದಾರೆ. ಹೌದು, ಅದರಂತೆ ಈ ಬಾರಿ 60 ಅಡಿ ಧ್ವಜವನ್ನು ಹಾರಿಸಿದ್ದಾರೆ.

6 / 6
ಇನ್ನು ಬೀಸುವ ಆ ಗಾಳಿಯ ಮಧ್ಯೆ, ಬೆಳ್ಳಂ ಬೆಳಗ್ಗೆ ಬರೊಬ್ಬರಿ 600 ಅಡಿ ಎತ್ತರದ ಬೆಟ್ಟ ಹತ್ತಿದ ಯುವಕರು, ಹರಸಾಹಸಪಟ್ಟು ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ.