ಸಾಮಾನ್ಯವಾಗಿ ಸ್ಮಾರ್ಟ್ಫೋನ್ ಖರೀದಿಸುವಾಗ ಹೊಸ ಮೊಬೈಲ್ನ RAM ಮತ್ತು ಸ್ಟೊರೇಜ್ ಬಗ್ಗೆ ಪರಿಶೀಲಿಸಲಾಗುತ್ತದೆ. ಆದರೆ ಇಲ್ಲೊಂದು ಕಂಪೆನಿಯು ಸ್ಟೊರೇಜ್ ಹಾಗೂ ರ್ಯಾಮ್ ಮೂಲಕವೇ ಸ್ಮಾರ್ಟ್ಫೋನ್ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಹೌದು, ZTE ಕಂಪೆನಿಯು ಹೊರತರುತ್ತಿರುವ Axon 30 ಎಂಬ ಸ್ಮಾರ್ಟ್ಫೋನ್ನ ಹೈಲೈಟ್ ಎಂದರೆ ಅದರ ಸ್ಟೊರೇಜ್ ಹಾಗೂ ರ್ಯಾಮ್. ಏಕೆಂದರೆ ZTE Axon 30 ಸ್ಮಾರ್ಟ್ಫೋನ್ನಲ್ಲಿ ನೀಡಲಾಗಿರುವ ಮೆಮೊರಿ ಕಾನ್ಫಿಗರೇಶನ್‌ನಲ್ಲಿ ಜಗತ್ತಿನ ಯಾವುದೇ ಸ್ಮಾರ್ಟ್‌ಫೋನ್‌ಗಿಂತಲೂ ಮುಂದಿರುವುದು ವಿಶೇಷ.
ZTE Axon 30 ಅಲ್ಟ್ರಾ ಸ್ಪೇಸ್ ಸ್ಮಾರ್ಟ್ಫೋನ್ನಲ್ಲಿ 18 GB RAM ಮತ್ತು 1 TB (ಟೆರಾಬೈಟ್) ಆಂತರಿಕ ಸ್ಟೊರೇಜ್ ನೀಡಲಾಗಿದೆ. ಇಲ್ಲಿ 1 ಟೆರಾಬೈಟ್ ಎಂದರೆ ಬರೋಬ್ಬರಿ 1024 GB. ಪ್ರಪಂಚದ ಯಾವುದೇ ಸ್ಮಾರ್ಟ್‌ಫೋನ್‌ಗಳು ಇಷ್ಟು ಇಂಟರ್ನಲ್ ಸ್ಟೋರೇಜ್ ಇದುವರೆಗೆ ನೀಡಿಲ್ಲ. ಇದೇ ಮೊದಲ ZTE Axon 30 ಸ್ಮಾರ್ಟ್ಫೋನ್ ಇಷ್ಟೊಂದು ಸ್ಟೊರೇಜ್ ಸಾಮರ್ಥ್ಯ ನೀಡುವ ಮೂಲಕ ZTE ಕಂಪೆನಿಯು ಮೊಬೈಲ್ ಕ್ಷೇತ್ರದಲ್ಲಿ ಹೊಸ ಸಂಚಲ ಸೃಷ್ಟಿಸಲು ಮುಂದಾಗಿದೆ.
ಮೆಮೊರಿ ಕಾನ್ಫಿಗರೇಶನ್ ಹೊರತಾಗಿ, ಆಕ್ಸಾನ್ 30 ಅಲ್ಟ್ರಾ ಸ್ಮಾರ್ಟ್ಫೋನ್ 6.67-ಇಂಚಿನ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು ಪೂರ್ಣ HD+ ಸ್ಕ್ರೀನ್ ರೆಸಲ್ಯೂಶನ್‌ನೊಂದಿಗೆ ಬರುತ್ತಿರುವುದು ವಿಶೇಷ. ಹಾಗೆಯೇ ಇದರ ರಿಫ್ರೆಶ್ ರೇಟ್ 144Hz. ಅಂದರೆ ಗೇಮಿಂಗ್ ಪ್ರಿಯರಿಗೆ ಈ ಸ್ಮಾರ್ಟ್ಫೋನ್ ಉತ್ತಮ ಆಯ್ಕೆಯಾಗಿರಲಿದೆ. ಇನ್ನು ಇದರಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರ ರಕ್ಷಣೆಯನ್ನು ಕೂಡ ನೀಡಲಾಗುತ್ತದೆ.
ZTE Axon 30 ಅಲ್ಟ್ರಾ ಸ್ಪೇಸ್ ಸ್ಮಾರ್ಟ್ಫೋನ್ನ ಪ್ರೊಸೆಸರ್ ಬಗ್ಗೆ ನೋಡುವುದಾದರೆ, ಈ ಫೋನ್‌ನಲ್ಲಿ Qualcomm Snapdragon 888 ಚಿಪ್‌ಸೆಟ್ ಅನ್ನು ಬಳಸಲಾಗಿದೆ. ಇದು LPDDR5 RAM ಮತ್ತು UFS 3.1 ಸ್ಟೊರೇಜ್ ಹೊಂದಿರಲಿದೆ. ಇನ್ನು ಈ ಸ್ಮಾರ್ಟ್ಫೋನ್ನಲ್ಲಿ ನಾಲ್ಕು ಕ್ಯಾಮೆರಾ ನೀಡಲಾಗಿದೆ.
ZTE Axon 30 ಅಲ್ಟ್ರಾ ಸ್ಪೇಸ್ ಸ್ಮಾರ್ಟ್ಫೋನ್ನ ಪ್ರೊಸೆಸರ್ ಬಗ್ಗೆ ನೋಡುವುದಾದರೆ, ಈ ಫೋನ್‌ನಲ್ಲಿ Qualcomm Snapdragon 888 ಚಿಪ್‌ಸೆಟ್ ಅನ್ನು ಬಳಸಲಾಗಿದೆ. ಇದು LPDDR5 RAM ಮತ್ತು UFS 3.1 ಸ್ಟೊರೇಜ್ ಹೊಂದಿರಲಿದೆ. ಇನ್ನು ಈ ಸ್ಮಾರ್ಟ್ಫೋನ್ನಲ್ಲಿ 5 ಕ್ಯಾಮೆರಾ ನೀಡಲಾಗಿದೆ.
ಇನ್ನು ಈ ಸ್ಮಾರ್ಟ್ಫೋನ್ನಲ್ಲಿ 4,600mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದ್ದು, ಇದು 40W ಕ್ಷಿಪ್ರ ಚಾರ್ಜಿಂಗ್ ಸಪೋರ್ಟ್ ಮಾಡಲಿದೆ. ಸದ್ಯದ ಮಾಹಿತಿ ಪ್ರಕಾರ ZTE Axon 30 ಅಲ್ಟ್ರಾ ಸ್ಪೇಸ್ ಸ್ಮಾರ್ಟ್ಫೋನ್ ಇದೇ ತಿಂಗಳು 25 ರಂದು ಬಿಡುಗಡೆಯಾಗಲಿದ್ದು, ಆ ಬಳಿಕವಷ್ಟೇ ನೂತನ ಮೊಬೈಲ್ನ ಬೆಲೆ ಸೇರಿದಂತೆ ಮತ್ತಷ್ಟು ಮಾಹಿತಿ ಹೊರಬೀಳಲಿದೆ.