Infinix Smart 5 Pro: 6000mAh ಬ್ಯಾಟರಿಯ ಅತೀ ಕಡಿಮೆ ಬೆಲೆಯ ಸ್ಮಾರ್ಟ್​ಫೋನ್ ಬಿಡುಗಡೆ

Infinix Smart 5 Specifications: ಸ್ಮಾರ್ಟ್ 5 ಪ್ರೊ ಮೊಬೈಲ್​ನ ಸ್ಟೊರೇಜ್​ ಅನ್ನು ಮೈಕ್ರೋ SD ಕಾರ್ಡ್ ಮೂಲಕ 256GB ವರೆಗೆ ವಿಸ್ತರಿಸಬಹುದು. ಹಾಗೆಯೇ ಫೋನ್​ನಲ್ಲಿ 6000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಿರುವುದು ವಿಶೇಷ.

TV9 Web
| Updated By: ಝಾಹಿರ್ ಯೂಸುಫ್

Updated on: Nov 17, 2021 | 9:45 PM

 ಹಾಂಗ್​ಕಾಂಗ್ ಮೂಲದ ಜನಪ್ರಿಯ ಸ್ಮಾರ್ಟ್​ಫೋನ್ ಕಂಪೆನಿ ಇನ್​ಫಿನಿಕ್ಸ್​ (Infinix) ಸ್ಮಾರ್ಟ್ 5 ಪ್ರೊ (Infinix Smart 5 Pro) ಹೆಸರಿನ  ಮೊಬೈಲ್​ ಅನ್ನು ಬಿಡುಗಡೆ ಮಾಡಿದೆ. ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿರುವ ಈ ಸ್ಮಾರ್ಟ್​ಫೋನ್ ಅತ್ಯುತ್ತಮ ಫೀಚರ್​ಗಳನ್ನು ನೀಡಲಾಗಿರುವುದು ವಿಶೇಷ.

1 / 6
ಇನ್​ಫಿನಿಕ್ಸ್ ಸ್ಮಾರ್ಟ್​ 5 Pro (Infinix Smart 5 Pro) ಹೆಸರಿನಲ್ಲಿ ಬಿಡುಗಡೆಯಾಗಿರುವ  ಈ ಫೋನ್​ನಲ್ಲಿ  2GB RAM + 32GB ಸ್ಟೊರೇಜ್ ಸಾಮರ್ಥ್ಯ ನೀಡಲಾಗಿದೆ. ಇನ್ನು ಈ ಸ್ಮಾರ್ಟ್​ಫೋನ್​ನ ವಿಶೇಷತೆಗಳನ್ನು ನೋಡುವುದಾದರೆ...

2 / 6
ಸ್ಮಾರ್ಟ್ 5 ಪ್ರೊನಲ್ಲಿ 6.52 ಇಂಚಿನ ಡಿಸ್‌ಪ್ಲೇ ಇದ್ದು, ಅದರ ಮೇಲ್ಭಾಗದಲ್ಲಿ ವಾಟರ್ ಡ್ರಾಪ್ ನಾಚ್ ವಿನ್ಯಾಸ ನೀಡಲಾಗಿದೆ. ಹಾಗೆಯೇ ಇದರಲ್ಲಿ HD + ರೆಸಲ್ಯೂಶನ್‌ ಡಿಸ್​ಪ್ಲೇ ನೀಡಲಾಗಿದ್ದು, ಇದು 60Hz ರಿಫ್ರೆಶ್ ರೇಟ್​ ಹೊಂದಿರಲಿದೆ. ಈ ಫೋನ್ Android 11 ಅಪರೇಟಿಂಗ್​ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.

3 / 6
ಈ ಫೋನ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್‌ ನೀಡಲಾಗಿದ್ದು, ಜೊತೆಗೆ ಎಲ್ಇಡಿ ಫ್ಲ್ಯಾಷ್ ಸಹ ಇರಲಿದೆ. ಈ ಫೋನ್ 13 ಮೆಗಾಪಿಕ್ಸೆಲ್ ಮೈನ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿರಲಿದೆ. ಫೋನ್‌ನ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ  ನೀಡಲಾಗಿದೆ.

4 / 6
 ಸ್ಮಾರ್ಟ್ 5 ಪ್ರೊ ಮೊಬೈಲ್​ನ ಸ್ಟೊರೇಜ್​ ಅನ್ನು ಮೈಕ್ರೋ SD ಕಾರ್ಡ್ ಮೂಲಕ 256GB ವರೆಗೆ ವಿಸ್ತರಿಸಬಹುದು. ಹಾಗೆಯೇ ಫೋನ್​ನಲ್ಲಿ  6000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಿರುವುದು ವಿಶೇಷ. ಇದು 18W ವೇಗದ ಚಾರ್ಜಿಂಗ್ ಸಪೋರ್ಟ್ ಮಾಡಲಿದೆ. ಇದಲ್ಲದೆ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹಾಗೂ  AI ಫೇಸ್ ಲಾಕ್ ಅನ್ನು ಈ ಸ್ಮಾರ್ಟ್​ಫೋನ್ ಸಪೋರ್ಟ್ ಮಾಡುತ್ತದೆ.

5 / 6
Infinix Smart 5 Pro ಸದ್ಯ  XPark ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದ್ದು, ಅಲ್ಲಿನ ಬೆಲೆ PKR 14,499. ಅಂದರೆ ಸುಮಾರು 6,200 ರೂ. ಶೀಘ್ರದಲ್ಲೇ ಇನ್​ಫಿನಿಕ್ಸ್ ಸ್ಮಾರ್ಟ್​ 5 ಪ್ರೋ ಭಾರತದಲ್ಲೂ ಬಿಡುಗಡೆಯಾಗಲಿದೆ ಎಂದು ಕಂಪೆನಿ ತಿಳಿಸಿದೆ.

6 / 6
Follow us