AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವರ ವಿರುದ್ಧ ಸಿಎಂ ಸಿದ್ದರಾಮಯ್ಯಗೆ 20 ಶಾಸಕರು ದೂರು ಕೊಟ್ಟಿದ್ದಾರೆ: ಎನ್ ರವಿಕುಮಾರ್

ಸರ್ಕಾರ ಬಂದು ಎರಡು ತಿಂಗಳಾಗುವಷ್ಟರಲ್ಲೇ ಶಾಸಕರು ಸಚಿವರ ವಿರುದ್ಧ ದೂರು ಕೊಟ್ಟಿದ್ದಾರೆ. ನಮ್ಮ ಪರಿಸ್ಥಿತಿ ಹೀಗಾದರೇ ಜನರ ಸ್ಥಿತಿ ಹೇಗೆ? ಹಿರಿಯ ಶಾಸಕರಾದ ಕೃಷ್ಣಪ್ಪ, ರಾಯರೆಡ್ಡಿ ಅಂತಹವರೇ ಪತ್ರ ಬರೆದಿದ್ದಾರೆ ಎಂದು ಬಿಜೆಪಿ ಎಂಎಲ್​ಸಿ ಎನ್​. ರವಿಕುಮಾರ್​​ ಹೇಳಿದ್ದಾರೆ.

ಸಚಿವರ ವಿರುದ್ಧ ಸಿಎಂ ಸಿದ್ದರಾಮಯ್ಯಗೆ 20 ಶಾಸಕರು ದೂರು ಕೊಟ್ಟಿದ್ದಾರೆ: ಎನ್ ರವಿಕುಮಾರ್
ಎಂಎಲ್​ಸಿ ಎನ್​ ರವಿಕುಮಾರ್​
ಕಿರಣ್​ ಹನಿಯಡ್ಕ
| Updated By: ವಿವೇಕ ಬಿರಾದಾರ|

Updated on: Jul 25, 2023 | 12:22 PM

Share

ಬೆಂಗಳೂರು: ಸಚಿವರ ಭೇಟಿಗೆ ಸಾಧ್ಯವಾಗುತ್ತಿಲ್ಲ ಎಂದು 20ಕ್ಕೂ ಹೆಚ್ಚು ಶಾಸಕರು (MLA) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಪತ್ರ ಬರೆದಿದ್ದಾರೆ. ಸರ್ಕಾರ ಬಂದು ಎರಡು ತಿಂಗಳಾಗುವಷ್ಟರಲ್ಲೇ ಶಾಸಕರು, ಸಚಿವರ ವಿರುದ್ಧ ದೂರು ಕೊಟ್ಟಿದ್ದಾರೆ. ನಮ್ಮ ಪರಿಸ್ಥಿತಿ ಹೀಗಾದರೇ ಜನರ ಸ್ಥಿತಿ ಹೇಗೆ? ಹಿರಿಯ ಶಾಸಕರಾದ ಕೃಷ್ಣಪ್ಪ, ರಾಯರೆಡ್ಡಿ ಅಂತಹವರೇ ಪತ್ರ ಬರೆದಿದ್ದಾರೆ ಎಂದು ಬಿಜೆಪಿ ಎಂಎಲ್​ಸಿ ಎನ್​. ರವಿಕುಮಾರ್​​ (N Ravikumar) ಹೇಳಿದ್ದಾರೆ. ಬೆಂಗಳೂರಲ್ಲಿ ಮಾಧ್ಯಮ ಪ್ರತಿನಧಿಗಳೊಂದಿಗೆ ಮಾತನಾಡಿದ ಅವರು ಸಚಿವರೇ ಹೀಗೆ ಆದರೆ, ಶಾಸಕರೇ ಇಷ್ಟು ಬೇಸರ ಮಾಡಿಕೊಂಡರೆ, ಜನಸಾಮಾನ್ಯರು ಎಷ್ಟು ಬೇಸರ ಗೊಂಡಿರಬಹುದು? ಎಂದು ಪ್ರಶ್ನಿಸಿದರು.

ರಾಜ್ಯ ಕಾಂಗ್ರೆಸ್​​ ಸರ್ಕಾರ ಗ್ಯಾರಂಟಿಯೊಳಗೆ ಮುಳುಗಿ ಹೋಗಿದೆ‌. ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ನಿಮ್ಮ ಗ್ಯಾರಂಟಿ ಯೋಜನೆ ಹೊರತುಪಡಿಸಿ ರೈತ ಸಮಸ್ಯೆ, ಅಂಗನವಾಡಿ ಕಾರ್ಯಕರ್ತರ ಸಮಸ್ಯೆ ಬಗೆಹರಿಸಿ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಕಾಂಗ್ರೆಸ್​ ಸರ್ಕಾರದಲ್ಲಿ ಅಸಮಾಧಾನ ಸ್ಫೋಟ, ತಮ್ಮದೇ ಸಚಿವರ ವಿರುದ್ದ ಸಿಎಂಗೆ ದೂರು ನೀಡಿದ ಶಾಸಕರು

ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರು ಸಿಂಗಾಪುರದಲ್ಲಿದ್ದುಕೊಂಡು ಸರ್ಕಾರದ ವಿರುದ್ಧ ತಂತ್ರ ಹೆಣೆಯುತ್ತಿದ್ದಾರೆ ಎಂಬ ಡಿ.ಕೆ. ಶಿವಕುಮಾರ್ ಆರೋಪ ವಿಚಾರವಾಗಿ ಮಾತನಾಡಿದ ಅವರು ಬಿಜೆಪಿ‌ ಇದರ ಯಾವುದೇ ಗೋಜಿಗೆ ಹೋಗುತ್ತಿಲ್ಲ. ರಾಜ್ಯದಲ್ಲಿ ಮಳೆ ಇದೆ, ಅನೇಕ ಸಮಸ್ಯೆ ಇದೆ. ಇದರ ಬಗ್ಗೆ ನಮ್ಮ ಗಮನ ಇದೆ ಎಂದರು.

ಉಡುಪಿಯಲ್ಲಿ ಶೌಚಾಲಯದಲ್ಲಿ ವಿದ್ಯಾರ್ಥಿನಿಯರು ಮೊಬೈಲ್ ಇರಿಸಿದ್ದ ಪ್ರಕರಣದ ವಿಚಾರವಾಗಿ ಮಾತನಾಡಿದ ಅವರು ಈ ಪ್ರಕರಣದಲ್ಲಿ ಕೂಲಂಕುಷ ತನಿಖೆ ಆಗಬೇಕು. ಯಾರು ವಿಡಿಯೋ ಮಾಡಿದರು, ಅದನ್ನು ಯಾತಕ್ಕೆ ಬಳಸಿಕೊಳ್ಳಬಹುದು ಗೊತ್ತಿಲ್ಲ. ಆದರೆ ವೀಡಿಯೋ ಮಾಡಿದ ಆರೋಪಿಗಳ ವಿರುದ್ಧ ಕ್ರಮ ಆಗಬೇಕು. ವೈದ್ಯಕೀಯ ಶಿಕ್ಷಣ ಸಚಿವರು ಈ‌ ಬಗ್ಗೆ ತನಿಖೆ ಮಾಡಿಸಲಿ ಎಂದು ಒತ್ತಾಯಿಸಿದರು.

ಎರಡೇ ತಿಂಗಳಿನಲ್ಲಿ ಸಿದ್ದರಾಮಯ್ಯ ಸರ್ಕಾರ ಕುಸಿತ ಕಂಡಿದೆ

ಎರಡೇ ತಿಂಗಳಿನಲ್ಲಿ ಸಿದ್ದರಾಮಯ್ಯ ಸರ್ಕಾರ ಕುಸಿತ ಕಂಡಿದೆ. ಒಂದು ಕಡೆ ಬರ ಆಗಿದೆ, ಮತ್ತೊಂದು ಕಡೆ ಪ್ರವಾಹ ಉಂಟಾಗಿದೆ. ಬೆಲೆ ಏರಿಕೆಯಿಂದಲೂ ರಾಜ್ಯದ ಜನರು ತೊಂದರೆ ಪಡುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದ ಎಂಎಲ್​ಸಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಎಂಎಲ್​ಸಿ ಬಿ.ಕೆ.ಹರಿಪ್ರಸಾದ್​ ಸಿಎಂ ಇಳಿಸುವ ಮಾತನಾಡಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಸಿಂಗಾಪುರ ಆಪರೇಷನ್ ಅಂತಿದ್ದಾರೆ. ಸರ್ಕಾರದ ವೈಫಲ್ಯ ಮರೆಮಾಚಲು ವಿಪಕ್ಷಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲೇ ಸಚಿವರ ವಿರುದ್ಧ ಶಾಸಕರ ದೂರು ನೀಡಿದ್ದಾರೆ. ಈ ಸರ್ಕಾರದಲ್ಲಿ ಏನು ಆಗುತ್ತಿದೆ ಎಂಬುದೇ ಗೊತ್ತಿಲ್ಲ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ