ದೆಹಲಿ: ಆಮ್ ಆದ್ಮಿ ಪಕ್ಷದ (Aam Aadmi Party) ಸಂಸದ ಸಂಜಯ್ ಸಿಂಗ್ (Sanjay Singh) ಇಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು “ಖಾದಿ ಹಗರಣ” ಆರೋಪಗಳ ಬಗ್ಗೆ ಕಳುಹಿಸಿದ ಮಾನಹಾನಿ ನೋಟಿಸ್ ಹರಿದು ಹಾಕಿದರು. “ಭಾರತದ ಸಂವಿಧಾನವು ನನಗೆ ಸತ್ಯವನ್ನು ಮಾತನಾಡುವ ಹಕ್ಕನ್ನು ನೀಡುತ್ತದೆ” ಎಂದು ಸಂಜಯ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ರಾಜ್ಯಸಭೆಯ ಸದಸ್ಯರಾಗಿ, ಸತ್ಯವನ್ನು ಮಾತನಾಡುವ ಹಕ್ಕಿದೆ. ಕಳ್ಳ, ಭ್ರಷ್ಟ ಮನುಷ್ಯ ಕಳುಹಿಸಿದ ಈ ಸೂಚನೆಗೆ ನಾನು ಬಾಗುವುದಿಲ್ಲ ಎಂದ ಸಿಂಗ್, ನೋಟಿಸ್ನ್ನು ತುಂಡು ತುಂಡಾಗಿ ಹರಿದು ಹಾಕಿದರು. ನಾನು ಅಂತಹ ಸೂಚನೆಗಳನ್ನು 10 ಬಾರಿ ಹರಿದು ಎಸೆಯಬಹುದು ಎಂದು ಅವರು ಹೇಳಿದ್ದಾರೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಅಬಕಾರಿ ನೀತಿಯಲ್ಲಿನ ಭ್ರಷ್ಟಾಚಾರ ಆರೋಪದ ಮೇಲೆ ಕಳೆದ ತಿಂಗಳು ಸಿಬಿಐ ದಾಳಿ ನಡೆಸಿದಾಗಿನಿಂದಲೂ ದೆಹಲಿಯಲ್ಲಿ ಆಪ್ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವೆ ಜಟಾಪಟಿ ನಡೆಯುತ್ತಿದೆ. ಖಾಸಗಿಯವರಿಗೆ ಮದ್ಯದ ವ್ಯಾಪಾರಕ್ಕೆ ಪ್ರವೇಶಿಸಲು ದಾರಿ ಮಾಡಿಕೊಟ್ಟ ಆ ಹೊಸ ಅಬಕಾರಿ ನೀತಿಯನ್ನು ಜುಲೈನಲ್ಲಿ ಎಎಪಿ ಸರ್ಕಾರವು ಹಿಂತೆಗೆದುಕೊಂಡಿದ್ದು, ಲೆಫ್ಟಿನೆಂಟ್ ಗವರ್ನರ್ ಸಿಬಿಐ ತನಿಖೆಗೆ ಆದೇಶಿಸಿದ್ದರು.
ಕೇಂದ್ರ ಸರ್ಕಾರದಿಂದ ನೇಮಕಗೊಂಡ ಲೆಫ್ಟಿನೆಂಟ್ ಗವರ್ನರ್, ಕೇಂದ್ರದ ಆಡಳಿತದ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನಗಳ ಮೇಲೆ ರಾಜಕೀಯ ಹಗೆತನ ಮಾಡುತ್ತಿದ್ದಾರೆ ಎಂದು ಎಎಪಿ ಹೇಳಿದೆ.
2015 ರಿಂದ 2022 ರ ಆರಂಭದವರೆಗೆ ಖಾದಿ ಮತ್ತು ವಿಲೇಜ್ ಇಂಡಸ್ಟ್ರೀಸ್ ಆಯೋಗದ (ಕೆವಿಐಸಿ) ಅಧ್ಯಕ್ಷರಾಗಿದ್ದಾಗ ಸಕ್ಸೇನಾ ಹಲವಾರು ಅಕ್ರಮ ಮಾಡಿದ್ದಾರೆ ಎಂದು ಎಎಪಿ ಆರೋಪಿಸಿದೆ. 2016ರಲ್ಲಿ ಅಮಾನ್ಯಗೊಂಡ 14000 ಕೋಟಿ ಮೌಲ್ಯದ ಹಣವನ್ನು ಬದಲಾಯಿಸುವಂತೆ ಸಕ್ಸೇನಾ ಕೆವಿಐಸಿ ಉದ್ಯೋಗಿ ಗಳ ಮೇಲೆ ಒತ್ತಡ ಹೇರಿದ್ದಾರೆ ಎಂದು ಎಎಪಿ ಶಾಸಕ ದುರ್ಗೇಶ್ ಪಾಠಕ್ ಆರೋಪಿಸಿದ್ದಾರೆ. ಮುಂಬೈನಲ್ಲಿ ಖಾದಿ ಲೌಂಜ್ ಅನ್ನು ತಮ್ಮ ಮಗಳಿಗೆ ಒಳಾಂಗಣ ವಿನ್ಯಾಸಕ್ಕಾಗಿ ಒಪ್ಪಂದ ಮಾಡಿಕೊಂಡರು ಎಂದು ಆಪ್ ಆರೋಪಿಸಿದೆ.
Senior AAP leader & Rajya Sabha Member @SanjayAzadSln addressing an important press conference | LIVE https://t.co/1tRo1dt6Tx
— AAP (@AamAadmiParty) September 7, 2022
ಸಕ್ಸೇನಾ ಅವರು ಮಾನಹಾನಿ ಆರೋಪ ಮಾಡಿ ಸೋಮವಾರ ಎಎಪಿಯ ಸಂಜಯ್ ಸಿಂಗ್ ಮತ್ತು ದುರ್ಗೇಶ್ ಪಾಠಕ್ ಅವರಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ. ಅತಿಶಿ, ಸೌರಭ್ ಭರದ್ವಾಜ್ ಮತ್ತು ಜಾಸ್ಮಿನ್ ಷಾ ಅವರ ವಿರುದ್ಧವೂ “ಅವಹೇಳನಕಾರಿ, ದುರುದ್ದೇಶಪೂರಿತ” ಆರೋಪಗಳಿಗಾಗಿ ಸಕ್ಸೇನಾ ನೋಟಿಸ್ ನೀಡಿದ್ದಾರೆ “ಪಕ್ಷದ ಎಲ್ಲ ಸದಸ್ಯರು ಮತ್ತು ಅದರೊಂದಿಗೆ ಸಂಬಂಧಿಸಿದ ಎಲ್ಲ ವ್ಯಕ್ತಿಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ನಿರ್ದೇಶಿಸಲು ಮತ್ತು ಸುಳ್ಳು, ಮಾನಹಾನಿಕರ, ದುರುದ್ದೇಶಪೂರಿತ ಮತ್ತು ಆಧಾರರಹಿತ ಹೇಳಿಕೆಗಳನ್ನು ಹರಡುವುದನ್ನು ನಿಲ್ಲಿಸುವಂತೆ ಅವರು ಹೇಳಿದ್ದಾರೆ.
ಸಂಜಯ್ ಸಿಂಗ್ ಇಂದು ನೋಟಿಸ್ ಹರಿದು ಬಿಸಾಡಿರುವುದರಿಂದ ಎಲ್ಜಿ ಮತ್ತು ಆಪ್ ನಡುವಿನ ಜಟಾಪಟಿ ಮತ್ತಷ್ಟು ತೀವ್ರಗೊಳ್ಳಲಿದೆ. ಚುನಾಯಿತ ಸರ್ಕಾರ ಮತ್ತುಎಲ್ಜಿ ನಡುವೆ ಯಾರಿಗೆ ಹೆಚ್ಚಿನ ಅಧಿಕಾರವಿದೆ ಎಂಬ ಪ್ರಶ್ನೆ ಸುಪ್ರೀಂಕೋರ್ಟ್ ಮುಂದಿದ್ದು, ಸಂವಿಧಾನ ಪೀಠವು ಮುಂದಿನ ವಿಚಾರಣೆಯ ಅಕ್ಟೋಬರ್ 11 ಅನ್ನು ತಾತ್ಕಾಲಿಕ ದಿನಾಂಕವಾಗಿ ನಿಗದಿಪಡಿಸಿದೆ