ನವದೆಹಲಿ, (ಅಕ್ಟೋಬರ್ 02): ಮುಂಬರುವ ಲೋಕಸಭಾ ಚುನಾವಣೆಗೆ (Loksabha Elections 2024) ಕಾಂಗ್ರೆಸ್ ತಯಾರಿ ಶುರುಮಾಡಿದ್ದು, ಕರ್ನಾಟಕದ(Karnataka) 28 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಗೆ ವೀಕ್ಷಕರನ್ನು ನೇಮಕ ಮಾಡಿದೆ. ಸಚಿವರನ್ನು ವೀಕ್ಷಕರನ್ನಾಗಿ ನೇಮಕ ಮಾಡಿದ್ದು, ಪ್ರತಿ ಕ್ಷೇತ್ರದಲ್ಲೂ 2 ಅಥವಾ 3 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಜವಾಬ್ದಾರಿ ನೀಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಅಖಿಲ ಭಾರತ ಕಾಂಗ್ರೆಸ್ ಸಮಿತಿ(AICC), ಪಕ್ಷ ಸಂಘಟನೆಗಾಗಿ ಬೆಂಗಳೂರು (Bengaluru) ನಗರವನ್ನು 5 ಜಿಲ್ಲೆಗಳಾಗಿ ವಿಂಗಡಣೆ ಮಾಡಿದ್ದು, ಈ 5 ಜಿಲ್ಲೆಗಳಿಗೆ ಹೊಸ ಅಧ್ಯಕ್ಷರನ್ನ ನೇಮಿಸಿದೆ.
1. ಬೆಂಗಳೂರು ನಗರ, 2. ಬೆಂಗಳೂರು ಪೂರ್ವ, 3. ಬೆಂಗಳೂರು ಪಶ್ಚಿಮ, 4. ಬೆಂಗಳೂರು ಉತ್ತರ ಮತ್ತು 5. ಬೆಂಗಳೂರು ದಕ್ಷಿಣ ಎಂದು ಹೀಗೆ ಬೆಂಗಳೂರು ನಗರವನ್ನು ಐದು ಜಿಲ್ಲೆಗಳನ್ನಾಗಿ ಮಾಡಿಕೊಂಡಿದೆ. ಮುಂಬರುವ ಲೋಕಸಭಾ ಚುನಾವನೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗಾಗಿ ಎಐಸಿಸಿ ಈ ರೀತಿ ವಿಂಗಡಿಸಿದೆ. ಅಲ್ಲದೇ ಒಂದೊಂದು ಜಿಲ್ಲೆಗೆ ಒಬ್ಬರನ್ನು ಅಧ್ಯಕ್ಷರನ್ನ ಸಹ ನೇಮಿಸಿದೆ.
ಇದನ್ನೂ ಓದಿ: ಲೋಕಸಭೆ ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್ ಮುನ್ನುಡಿ; 28 ಕ್ಷೇತ್ರಗಳಿಗೆ ವೀಕ್ಷಕರ ನೇಮಕ
ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ