ಬಿಜೆಪಿಯಲ್ಲಿ ಸಂಚಲನ, ಉಪಹಾರ ನೆಪದಲ್ಲಿ ಸಚಿವ ಸೋಮಣ್ಣ ನಿವಾಸದಲ್ಲಿ ನಾಯಕರ ಜತೆ ಅಮಿತ್ ಶಾ ಪ್ರತ್ಯೇಕ ಚರ್ಚೆ

ಉಪಹಾರ ನೆಪದಲ್ಲಿ ಸಚಿವ ಸೋಮಣ್ಣ ನಿವಾಸದಲ್ಲಿ ಕೇಂದ್ರ ಸಚಿವ ಅಮಿತ್ ಶಾ, ರಾಜ್ಯ ನಾಯಕರ ಜೊತೆ ಪ್ರತ್ಯೇಕವಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ.

ಬಿಜೆಪಿಯಲ್ಲಿ ಸಂಚಲನ, ಉಪಹಾರ ನೆಪದಲ್ಲಿ ಸಚಿವ ಸೋಮಣ್ಣ ನಿವಾಸದಲ್ಲಿ ನಾಯಕರ ಜತೆ ಅಮಿತ್ ಶಾ  ಪ್ರತ್ಯೇಕ ಚರ್ಚೆ
ಅಮಿತ್ ಶಾ ಮತ್ತು ವಿ ಸೋಮಣ್ಣ
Image Credit source: Amit Shah And V Somanna
Edited By:

Updated on: Dec 31, 2022 | 8:42 PM

ಬೆಂಗಳೂರು: ಕರ್ನಾಟಕ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ಇಂದು(ಡಿಸೆಂಬರ್ 31) ಎರಡನೇ ದಿನ ಪೂರ್ತಿ ಬೆಂಗಳೂರಿನ(Bengaluru) ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಸಂಜೆ ಅಮಿತ್ ಶಾ, ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು. ಇದೇ ವೇಳೆ ಉಪಹಾರ ನೆಪದಲ್ಲಿ ಸಚಿವ ವಿ. ಸೋಮಣ್ಣ(V Somanna) ನಿವಾಸಕ್ಕೆ ಭೇಟಿ ನೀಡಿ ಮಹತ್ವದ ರಾಜಕೀಯ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ: ಹಳೇ ಮೈಸೂರು ಭಾಗದ ಬಿಜೆಪಿ ಮುಖಂಡರ ಸಭೆ ಅಂತ್ಯ: ಜಿಲ್ಲಾವಾರು ಕ್ಷೇತ್ರ ಗೆಲ್ಲಲು ಟಾರ್ಗೆಟ್, JDS ಜೊತೆ ಸಂಪರ್ಕ ಇಟ್ಟುಕೊಳ್ಳಲೇಬೇಡಿ ಎಂದ ಶಾ

ಹೌದು…ಬೆಂಗಳೂರಿನ ವಿಜಯನಗರದಲ್ಲಿರುವ ಸಚಿವ ಸೋಮಣ್ಣ ನಿವಾಸಕ್ಕೆ ಅಮಿತ್​ ಶಾ ಭೇಟಿ ನೀಡಿದ್ದು, ಅವರಿಗಾಗಿ ಇಡ್ಲಿ, ಕೇಸರಿ ಬಾತ್, ಉಪ್ಪಿಟ್ಟು, ಬಜ್ಜಿ ಉಪಹಾರ ರೆಡಿ ಮಾಡಲಾಗಿತ್ತು. ಆದ್ರೆ, ಉಪಹಾರದ ನೆಪದಲ್ಲಿ ಸೋಮಣ್ಣ ನಿವಾಸಕ್ಕೆ ಭೇಟಿ ನೀಡಿದ ಶಾ, ಮೊದಲ ಮಹಡಿಯಲ್ಲಿ ಪ್ರತ್ಯೇಕವಾಗಿ ನಾಯಕರ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ.  ಬಿ ಎಲ್ ಸಂತೋಷ್, ನಳಿನ್ ಕುಮಾರ್ ಕಟೀಲ್,  ರಾಜೇಶ್ ಕುಂತೂರು ಹಾಗೂ ಅರುಣ್ ಸಿಂಗ್  ಜೊತೆ ಮೇಲ್ಮಹಡಿಯಲ್ಲಿ  ಸುಮಾರು ಒಂದೂವರೆ ಗಂಟೆ ಕಾಲ ಮಾತುಕತೆ ನಡೆಸಿದರು. ಇದು ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.

ಪ್ರಮುಖ ನಾಯಕರನ್ನು ಬಿಟ್ಟು ಸೋಮಣ್ಣ ನಿವಾದಲ್ಲಿ ಅಮಿತ್ ಶಾ ಏನೆಲ್ಲಾ ಹೇಳಿದ್ದಾರೆ ಎನ್ನುವುದು ರಾಜ್ಯ ಬಿಜೆಪಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರಕ್ರಿಯಿಸಿದ ಸೋಮಣ್ಣ, ಅಮಿತ್ ಶಾ‌ ಬರ್ತಾರೆ ಎಂದು ಎಂದು ಬಿ.ಎಲ್​. ಸಂತೋಷ್ ಅವರು ಫೋನ್ ಮಾಡಿ ಬೆಳಗ್ಗೆ ತಿಳಿಸಿದರು.ಒಳ್ಳೆಯತನಕ್ಕೆ,‌ ಕೆಲಸಗಾರನಿಗೆ ಭಗವಂತ ಒಂದೊಂದು ರೂಪದಲ್ಲಿ ಸಹಕಾರ ಕೊಡುತ್ತಾನೆ. ಇವತ್ತು ಅಮಿತ್ ಶಾ ‌ಬಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ನಾನು‌ 45 ವರ್ಷಗಳ ರಾಜಕೀಯದಲ್ಲಿದ್ದೇನೆ. ರಾಜ್ಯದ ಜನರ ಕೆಲಸ‌ ಮಾಡಲು ಮೊದಲು ಅವಕಾಶ ಮಾಡಿಕೊಟ್ಟಿದ್ದು ಬಿನ್ನೆಪೇಟೆ‌. ನಂತರ ವಿಜಯನಗರದ ಜನತೆ. ಒಬ್ಬ ಕಾರ್ಯಕರ್ತನ‌ ಮನೆಗೆ ಅಮಿತ್ ಶಾ ಭೇಟಿ ನೀಡಿದ್ದು ಹೆಮ್ಮೆಯ ವಿಷಯ. ಯಾವುದನ್ನ‌ ಎಲ್ಲಿಗೋ ತುಲನೆ ಮಾಡಬೇಡಿ. ನನ್ನನ್ನ ಯಾರಿಗೋ ಓಲಿಸಬೇಡಿ. ಅಮಿತ್ ಶಾ ಬಂದ ತಕ್ಷಣ ಒಗ್ಗರಣೆ ಹಾಕೋದು‌ಬೇಡ. ಪಕ್ಷದ ‌ರಾಜ್ಯ ಮಟ್ಟದ‌ ಮುಖಂಡನ ಮನೆಗೆ ಭೇಟಿ ಕೊಟ್ಟಿದ್ದು ಅವರ ದೊಡ್ಡತನ. ಯಡಿಯೂರಪ್ಪ ಎಲ್ಲಿಯವರೆಗೆ ನಾಯಕರಾಗಿರುತ್ತಾರೋ ಅಲ್ಲಿಯವರೆಗೆ ಅವರೇ ನಮ್ಮ ನಾಯಕರು ಎಂದರು.

Published On - 8:36 pm, Sat, 31 December 22