ದೆಹಲಿ: ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ರಾಜಸ್ಥಾನ (Rajasthan) ಮುಖ್ಯಮಂತ್ರಿ ತಮ್ಮ ಮಾಜಿ ಉಪ ಮುಖ್ಯಮಂತ್ರಿಯನ್ನು ಗದ್ದಾರ್ (ದೇಶದ್ರೋಹಿ) ಎಂದು ಕರೆದ ನಂತರ ಅಶೋಕ್ ಗೆಹ್ಲೋಟ್ (Ashok Gehlot) ಮತ್ತು ಸಚಿನ್ ಪೈಲಟ್ (Sachin Pilot) ಇಂದು (ಮಂಗಳವಾರ) ಒಗ್ಗಟ್ಟು ಪ್ರದರ್ಶಿಸಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿಸೆಂಬರ್ 4 ರಂದು ರಾಜಸ್ಥಾನಕ್ಕೆ ಪ್ರವೇಶಿಸುವ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ (Bharat Jodo Yatra) ರಾಜ್ಯದಲ್ಲಿ ದೊಡ್ಡ ಯಶಸ್ಸನ್ನು ಸಾಧಿಸಲಿದೆ ಎಂದು ಹೇಳಿದ್ದಾರೆ. ಪಕ್ಷವು ನಮಗೆ ಸರ್ವಶ್ರೇಷ್ಠವಾಗಿದೆ. ಪಕ್ಷ ಮುನ್ನುಗ್ಗಬೇಕು ಮತ್ತು ಅದರ ವೈಭವವನ್ನು ಮರಳಿ ಪಡೆಯಬೇಕೆಂದು ನಾವು ಬಯಸುತ್ತೇವೆ” ಎಂದು ಮುಖ್ಯಮಂತ್ರಿ ಗೆಹ್ಲೋಟ್ ಸುದ್ದಿಗಾರರಿಗೆ ತಿಳಿಸಿದರು. ದೇಶದಲ್ಲಿ ಉದ್ವಿಗ್ನ ವಾತಾವರಣವಿದೆ. ಇದು ದೊಡ್ಡ ಸವಾಲಾಗಿದೆ. ಆದರೆ ಯಾತ್ರೆಯ ಯಶಸ್ಸು ರಾಹುಲ್ ಗಾಂಧಿ ಎತ್ತಿದ ಸಮಸ್ಯೆಗಳನ್ನು ಜನರು ಸಂಪೂರ್ಣವಾಗಿ ಬೆಂಬಲಿಸುತ್ತಾರೆ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.ರಾಹುಲ್ ಗಾಂಧಿ ಜೊತೆಗಿನ ಭಾರತ್ ಜೋಡೋ ಯಾತ್ರೆಯನ್ನು ರಾಜಸ್ಥಾನದಲ್ಲಿ ಗರಿಷ್ಠ ಉತ್ಸಾಹ ಮತ್ತು ಶಕ್ತಿಯಿಂದ ಸ್ವಾಗತಿಸಲಾಗುವುದು ಎಂದು ಸಚಿನ್ ಪೈಲಟ್ ಹೇಳಿದ್ದಾರೆ. ರಾಹುಲ್ ಗಾಂಧಿಯವರು ತಮ್ಮ 12 ದಿನಗಳ ರಾಜ್ಯ ಪ್ರವಾಸವನ್ನು ಪ್ರಾರಂಭಿಸುವ ಮುನ್ನವೇ ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ಗೆಹ್ಲೋಟ್-ಪೈಲಟ್ ಜಂಟಿಯಾಗಿ ಕಾಣಿಸಿಕೊಳ್ಳುವುದು ಅನಿವಾರ್ಯವಾಗಿತ್ತು.
We are united. Here Ashok Ji and Sachin Pilot Ji have said that the Congress party in Rajasthan is united. Rahul Gandhi has clearly stated that both Ashok Gehlot and Sachin Pilot are assets to the party: KC Venugopal, Gen Secy-Org, Congress, at Jaipur pic.twitter.com/44Bq4Os41l
— ANI (@ANI) November 29, 2022
ಪ್ರತಿಸ್ಪರ್ಧಿಗಳು ಮತ್ತು ಗಾಂಧಿಗಳ ವಿಶ್ವಾಸಾರ್ಹ ಸಹಾಯಕ ಕೆಸಿ ವೇಣುಗೋಪಾಲ್ ಅವರ ಸಭೆಯಲ್ಲಿ ಇವರಿಬ್ಬರೂ ಬಂದಿದ್ದಾರೆ. ಭಾರತ್ ಜೋಡೋ ಯಾತ್ರೆಯ ಪೂರ್ವಭಾವಿ ಸಿದ್ಧತೆಗಳಿಗಾಗಿ ವೇಣುಗೋಪಾಲ್ ರಾಜಸ್ಥಾನಕ್ಕೆ ಬಂದಿದ್ದಾರೆ.
#WATCH | “Rahul Gandhi has said that Ashok Gehlot and Sachin Pilot are assets to the party,” Rajasthan CM & Congress leader Ashok Gehlot at Jaipur pic.twitter.com/rRfGN5ffPl
— ANI (@ANI) November 29, 2022
ನಾವು ಒಗ್ಗಟ್ಟಾಗಿದ್ದೇವೆ. ಇಲ್ಲಿ ಅಶೋಕ್ ಜೀ ಮತ್ತು ಸಚಿನ್ ಪೈಲಟ್ ಜೀ ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿದೆ ಎಂದು ಹೇಳಿದ್ದಾರೆ. ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಇಬ್ಬರೂ ಪಕ್ಷಕ್ಕೆ ಆಸ್ತಿ ಎಂದು ರಾಹುಲ್ ಗಾಂಧಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಮಾಧ್ಯಮದವರ ಮುಂದೆ ಮಾತನಾಡಿದ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.
ಗುರುವಾರ ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಗೆಹ್ಲೋಟ್ ಗದ್ದಾರ್ (ದೇಶದ್ರೋಹಿ) ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಹೈಕಮಾಂಡ್ ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿ ಮಾಡಲು ಸಾಧ್ಯವಿಲ್ಲ. 10 ಶಾಸಕರನ್ನು ಹೊಂದಿರದ ವ್ಯಕ್ತಿ ಬಂಡಾಯವೆದ್ದರು. ಅವರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ , (ಅವರು) ಒಬ್ಬ ದೇಶದ್ರೋಹಿ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪೈಲಟ್, ಕಾಂಗ್ರೆಸ್ ಐಕ್ಯರಂಗವನ್ನು ರೂಪಿಸುವ ಅಗತ್ಯವಿರುವ ಸಮಯದಲ್ಲಿ ಹಿರಿಯ ನಾಯಕರೊಬ್ಬರು ಇಂತಹ ಪದಗಳನ್ನು ಬಳಸುವುದು ಉಚಿತವಲ್ಲ ಎಂದಿದ್ದರು.
Published On - 10:20 pm, Tue, 29 November 22