ದ್ವೇಷ ಭಾಷಣ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಶಾಸಕ ಅಜಂ ಖಾನ್ (Azam Khan) ಅವರನ್ನು ಅನರ್ಹಗೊಳಿಸಿದ ನಂತರ ತೆರವಾದ ಉತ್ತರ ಪ್ರದೇಶದ ರಾಂಪುರ ಸದರ್ ವಿಧಾನಸಭಾ ಉಪಚುನಾವಣೆಗೆ (Rampur Sadar Assembly bypoll) ನವೆಂಬರ್ 10 ರವರೆಗೆ ಅಧಿಸೂಚನೆಯನ್ನು ಹೊರಡಿಸದಂತೆ ಭಾರತದ ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ (Election Commission) ನಿರ್ದೇಶನ ನೀಡಿದೆ.
ಅಪರಾಧಗಳ ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ಖಾನ್ ಮನವಿ ಮಾಡಿದ್ದರು. ಇದಕ್ಕೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ವಿಶೇಷ ಸೆಷನ್ಸ್ ನ್ಯಾಯಾಲಯಕ್ಕೆ ಗುರುವಾರವೇ ವಿಚಾರಣೆ ನಡೆಸಿ ತೀರ್ಪು ನೀಡುವಂತೆ ಸೂಚಿದ್ದಾರೆ.
ಅಕ್ಟೋಬರ್ 27 ರಂದು, ಖಾನ್ ಅವರನ್ನು ದ್ವೇಷ ಭಾಷಣ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿದ ರಾಂಪುರ ನ್ಯಾಯಾಲಯವು ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಿತು. 2019 ರ ಪ್ರಕರಣದಲ್ಲಿ ರಾಂಪುರದ ಎಂಪಿ-ಎಂಎಲ್ಎ ನ್ಯಾಯಾಲಯವು ಶಾಸಕರಿಗೆ ಜಾಮೀನು ನೀಡಿತು. ಅಕ್ಟೋಬರ್ 28 ರಂದು ಉತ್ತರ ಪ್ರದೇಶ ವಿಧಾನಸಭೆಯ ಸೆಕ್ರೆಟರಿಯೇಟ್ ಖಾನ್ ಅವರನ್ನು ಸದನದಿಂದ ಅನರ್ಹಗೊಳಿಸುವುದಾಗಿ ಘೋಷಿಸಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:09 pm, Wed, 9 November 22