Mamata Banerjee: ಚುನಾವಣೆಗೂ ಮುನ್ನ ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕ ಭಾರಿ ಹಣ ಗಳಿಸುತ್ತಿದೆ: ಮಮತಾ ಬ್ಯಾನರ್ಜಿ
ಬಿಜೆಪಿ ಪ್ರತಿ ಚುನಾವಣೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಇವು ಎಲ್ಲಿಂದ ಬರುತ್ತವೆ? ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗೆ ಮುನ್ನ ಚುನಾವಣಾ ಬಾಂಡ್‌ಗಳನ್ನು ಮರುಪ್ರಾರಂಭಿಸಲಾಗಿದೆ.
ನಾಡಿಯಾ: 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಿಂದ ದೇಶದಲ್ಲಿ ರಾಜಕೀಯ ಸಮೀಕರಣಗಳು ಬದಲಾಗಿರುವುದರಿಂದ ಬಿಜೆಪಿಗೆ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಲ್ಲವೂ ಬದಲಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಬಿಜೆಪಿ ಪ್ರತಿ ಚುನಾವಣೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಇವು ಎಲ್ಲಿಂದ ಬರುತ್ತವೆ? ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗೆ ಮುನ್ನ ಚುನಾವಣಾ ಬಾಂಡ್‌ಗಳನ್ನು ಮರುಪ್ರಾರಂಭಿಸಲಾಗಿದೆ. ಪ್ರತಿ ಪಕ್ಷವು ಬಾಂಡ್‌ಗಳನ್ನು ತೆಗೆದುಕೊಳ್ಳುತ್ತದೆ ಏಕೆಂದರೆ ಅವುಗಳು ಕಾನೂನುಬದ್ಧವಾಗಿವೆ. ಆದರೆ ಚುನಾವಣೆ ಬಂದಾಗಲೆಲ್ಲಾ ಬಿಜೆಪಿ ಹಣವನ್ನು ಸಂಗ್ರಹಿಸುತ್ತದೆ ಎಂದು ನಾಡಿಯಾ ಜಿಲ್ಲೆಯಲ್ಲಿ ನಡೆದ ರಾಜಕೀಯ ರ್ಯಾಲಿಯನ್ನುದ್ದೇಶಿಸಿ ಮಾತನಾಡುವ ವೇಳೆ ಮಮತಾ ಬ್ಯಾನರ್ಜಿ ಹೇಳಿದರು.
ನವೆಂಬರ್ 9 ರಿಂದ ಮಾರಾಟವಾಗಲಿರುವ ಚುನಾವಣಾ ಬಾಂಡ್‌ಗಳ 23ನೇ ಕಂತಿನ ವಿತರಣೆಯನ್ನು ಕೇಂದ್ರ ಸೋಮವಾರ ಅನುಮೋದಿಸಿದೆ. ಹಿಮಾಚಲ ಪ್ರದೇಶಕ್ಕೆ ನವೆಂಬರ್ 12 ರಂದು ಚುನಾವಣೆ ನಡೆದರೆ, ಗುಜರಾತ್‌ನಲ್ಲಿ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ.
ಚುನಾವಣಾ ಬಾಂಡ್‌ಗಳು ಹಣವನ್ನು ಸಂಗ್ರಹಿಸುವ ಪಾರದರ್ಶಕ ಮಾರ್ಗವಾಗಿದೆ. ಆದರೆ ಟಿಎಂಸಿ ಆಡಳಿತವಿರುವ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಪಕ್ಷಗಳು ಈ ಕುರಿತು ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಚುನಾವಣಾ ಬಾಂಡ್‌ಗಳಿಗೆ ಚಂದಾದಾರರಾಗುವ ಮೂಲಕ ಹೆಚ್ಚಿನ ಕೊಡುಗೆಗಳನ್ನು ಅನುಮೋದಿಸಲು ಕಂಪನಿಯೊಂದು ತನ್ನ ಮಂಡಳಿಯನ್ನು ಕೇಳಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ವಕ್ತಾರ ಸಾಮಿಕ್ ಭಟ್ಟಾಚಾರ್ಯ ಹೇಳಿದ್ದಾರೆ. ಅಕ್ಟೋಬರ್ 1 ಮತ್ತು 10 ರ ನಡುವೆ 545.25 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಲಾಗಿದೆ ಎಂದು ಎಚ್‌ಟಿ ಈ ಹಿಂದೆ ವರದಿ ಮಾಡಿತ್ತು, ಬಿಜೆಪಿ ಹೆಚ್ಚಿನ ಕೊಡುಗೆಗಳನ್ನು ಪಡೆಯುತ್ತಿದೆ.
2024ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ನಾವು ಇನ್ನೂ ನಂಬಿದ್ದೇವೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಕಳೆದ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಾಗ (2019 ರಲ್ಲಿ) ಅವರು ಬಿಹಾರ ಮತ್ತು ಜಾರ್ಖಂಡ್‌ನಂತಹ ಅನೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರು. ಆದರೆ ಈಗ ಬಿಜೆಪಿ ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಅಧಿಕಾರದಲ್ಲಿಲ್ಲ, ಬಿಜೆಪಿ ಕರ್ನಾಟಕ, ಕೇರಳದಲ್ಲೂ ಸೋಲುತ್ತಾರೆ ಮತ್ತು ತಮಿಳುನಾಡಿನ ನಮ್ಮ ಮಿತ್ರ ಪಕ್ಷವೇ ಇದೆ. ಕಳೆದ ಬಾರಿ ಗುಜರಾತ್, ಉತ್ತರ ಪ್ರದೇಶ ಮತ್ತು ದೆಹಲಿಯ ಬಹುತೇಕ ಎಲ್ಲಾ ಸ್ಥಾನಗಳನ್ನು ಅವರು ಗೆದ್ದಿದ್ದರು. ಇದೀಗ ಮತ್ತೆ ಎಲ್ಲಾ ಸ್ಥಾನಗಳನ್ನು ಗೆಲ್ಲುತ್ತಾರೆ ಎಂದು ಅವರು ಭ್ರಮೆಯಲ್ಲಿದ್ದರೆ? ನಿಮ್ಮ ಯಾವುದೇ ಲೆಕ್ಕಚಾರಗಳು ಇನ್ನೂ ಮುಂದೆ ನಡೆಯುವುದಿಲ್ಲ ಎಂದು ಎಂದು ಮಮತಾ ಹೇಳಿದರು.
Published On - 10:53 am, Thu, 10 November 22